For Quick Alerts
  ALLOW NOTIFICATIONS  
  For Daily Alerts

  ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ 'ಯುವರತ್ನ' ನಾಯಕಿ

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಯುವರತ್ನ' ಚಿತ್ರದ ನಾಯಕಿ ಸಯೇಶಾ ವಿವಾಹ ವಾರ್ಷಕೋತ್ಸವ ಸಂಭ್ರಮದಲ್ಲಿದ್ದಾರೆ. 2019ರಲ್ಲಿ ತಮಿಳು ನಟ ಆರ್ಯ ಜೊತೆ ವಿವಾಹ ಜೀವನಕ್ಕೆ ಕಾಲಿಟ್ಟಿದ್ದರು ನಟಿ ಸಯೇಶಾ. ಸದ್ಯ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಕೊಳ್ಳುತ್ತಿದ್ದಾರೆ.

  Darshan , Puneeth movie shooting stopped .. why ? | Yuvarathna | Robert | Filmibeat Kannada

  ಕಳೆದ ವರ್ಷ ಮಾರ್ಚ್ 9 ಮತ್ತು 10 ರಂದು ನಟ ಆರ್ಯ ಮತ್ತು ಸಯೇಶಾ ಹೈದರಾಬಾದ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಆರ್ಯ-ಸಯೇಶಾ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. 2018 ರಲ್ಲಿ ಬಿಡುಗಡೆಯಾದ 'ಘಜನಿಕಾಂತ್' ಚಿತ್ರದಲ್ಲಿ ಆರ್ಯ ಮತ್ತು ಸಯ್ಯೇಶಾ ಒಟ್ಟಾಗಿ ಅಭಿನಯಿಸಿದ್ದರು.

  ಸಖತ್ ಜೋರಾಗಿದೆ 'ಯುವರತ್ನ' ನಾಯಕಿ ಸಯೇಶಾ ಮದುವೆ ಸಂಭ್ರಮಸಖತ್ ಜೋರಾಗಿದೆ 'ಯುವರತ್ನ' ನಾಯಕಿ ಸಯೇಶಾ ಮದುವೆ ಸಂಭ್ರಮ

  ಆಗಲೇ ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದಿತ್ತು. ನಂತರ ಇವರಿಬ್ಬರ ಪ್ರೀತಿಗೆ ಕುಟುಂಬದವರ ಸಮ್ಮತಿ ಸಿಕ್ಕಿದ ಮೇಲೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈ ಮೂಲದ ನಟಿ ಸಯೇಶಾ ಖ್ಯಾತಿಗಳಿಸಿದ್ದು ತಮಿಳು ಚಿತ್ರರಂಗದಲ್ಲಿ. ಬಾಲಿವುಡ್ ನಲ್ಲಿಯೂ ಸಯೇಶಾ ಅಭಿನಯಿಸಿದ್ದಾರೆ.

  ಯುವರತ್ನ ಸಿನಿಮಾ ಮೂಲಕ ಸಯೇಶಾ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಕನ್ನಡದಲ್ಲಿ ಬಣ್ಣ ಹಚ್ಚಿರುವ ಸಯೇಶಾ ಅಭಿಮಾನಿಗಳ ಮುಂದೆ ಬರಲು ಉತ್ಸುಕರಾಗಿದ್ದಾರೆ. ನಟ ಆರ್ಯ ಕೂಡ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಾಜರಥ ಸಿನಿಮಾ ಮೂಲಕ ಆರ್ಯ ಮೊದಲ ಬಾರಿಗೆ ಕನ್ನಡಿಗರ ಮುಂದೆ ಬಂದಿದ್ದರು.

  English summary
  Puneeth Rajkumar starrer Yuvaratna movie heroine Sayyeshaa Saigal celebrating first year wedding Anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X