For Quick Alerts
  ALLOW NOTIFICATIONS  
  For Daily Alerts

  ವಿದೇಶದಿಂದ ವಾಪಸ್ ಆದ ನಟಿ ಸುಹಾಸಿನಿ ಪುತ್ರ ಸ್ವಯಂ ದಿಗ್ಬಂಧನದಲ್ಲಿ

  |

  ವಿಶ್ವದಾದ್ಯಂತ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದೆ. ಭಾರತದಲ್ಲಿಯೂ ಕೊರೊನಾ ಆತಂಕ ಹೆಚ್ಚಾಗಿದ್ದು ಮಾರ್ಚ್ 31ರ ವರೆಗೂ ಸಂಪೂರ್ಣ ಭಾರತ ಲಾಕ್ ಡೌನ್ ಮಾಡಲಾಗಿದೆ. ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದಂತೆ ವಿದೇಶದಲ್ಲಿ ನಲೆಸಿದ್ದ ಭಾರತೀಯರನ್ನು ಈಗಾಗಲೆ ತಾಯ್ನಾಡಿಗೆ ಕರೆತರಲಾಗುತ್ತಿದೆ.

  ಸಾವಿಗೆ ಕಾರಣ ಹೇಳಿದ ನಿರ್ಮಾಪಕ ಕಪಾಲಿ ಮೋಹನ್ | Kapila mohan Ended his life | oneindia kannada

  ಇಂಗ್ಲೆಂಡ್ ನಲ್ಲಿದ್ದ ಖ್ಯಾತ ನಟಿ ಸುಹಾಸಿನಿ ಪುತ್ರ ನಂದನ್ ಮನೆಗೆ ವಾಪಸ್ ಆಗಿದ್ದಾರೆ. ಇಂಗ್ಲೆಂಡ್ ನಲ್ಲಿ ಈಗಾಗಲೆ ಶೈಕ್ಷಣಿಕ ಸಂಸ್ಥೆಗಳನ್ನು ಕ್ಲಾಸ್ ಮಾಡಲಾಗಿದೆ. ವಿದ್ಯಾರ್ಥಿಗಳು ಆಯಾದೇಶಕ್ಕೆ ವಾಪಸ್ ಆಗುತ್ತಿದ್ದಾರೆ. ಇಂಗ್ಲೆಂಡ್ ನಲ್ಲಿ ಓದುತ್ತಿದ್ದ ನಟಿ ಸುಹಾಸಿನಿ ಪುತ್ರ ನಂದನ್ ಕೂಡ ವಾಪಸ್ ಆಗಿದ್ದು ಸದ್ಯ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ. ಮುಂದೆ ಓದಿ...

  ಗೃಹ ಬಂಧನದಲ್ಲಿ ಸುಹಾಸಿನಿ ಪುತ್ರ

  ಗೃಹ ಬಂಧನದಲ್ಲಿ ಸುಹಾಸಿನಿ ಪುತ್ರ

  ವಿದೇಶದಿಂದ ವಾಪಸ್ ಆದ ಪ್ರತಿಯೊಬ್ಬರ ಕೈಗೂ 'Home Quarantained' ಸ್ಟ್ಯಾಂಪ್ ಹಾಕಲಾಗುತ್ತಿದೆ. ಹಾಗೂ ಅವರು ಎಲ್ಲಿಯೂ ಓಡಾಡದೆ ಸ್ವಯಂ ನಿರ್ಬಂಧದಲ್ಲಿ ಇರಬೇಕು. ಹಾಗಾಗಿ ವಿದೇಶದಿಂದ ವಾಪಸ್ ಆದ ನಟಿ ಸುಹಾಸಿನಿ ಪುತ್ರ ನಂದನ್ ಕೂಡ ಈಗ ಗೃಹ ಬಂಧನದಲ್ಲಿ ಇದ್ದಾರೆ.

  ಮನೆಯ ಕೋಣೆಯಲ್ಲಿ ನಂದನ್ ಬಂಧನ

  ಮನೆಯ ಒಂದು ಕೋಣೆಯಲ್ಲಿಯೆ ನಂದನ್ ಬಂಧಿಯಾಗಿದ್ದಾರೆ. ಈಗಾಗಲೆ 5 ದಿನಗಳಾಗಿದ್ದು, ಇನ್ನೂ 9 ದಿನಗಳು ಯಾರೊಂದಿಗೂ ಸಂಪರ್ಕ ಸಾದಿಸದಂತೆ ಮುಂಜಾಗೃತಿ ವಹಿಸಲಾಗಿದೆ. ಮಗ ಆರೋಗ್ಯವಾಗಿರುವ ಬಗ್ಗೆ ಸುಹಾಸಿನಿ ಬಹಿರಂಗ ಪಡಿಸಿದ್ದಾರೆ. ನಂದನ್ ಗೆ ಕೋಣೆಯಲ್ಲಿಯೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕೋಣೆಯೊಳಗೆ ಊಟ ಇಡುವಾಗ ಮತ್ತು ನಂತರ ಆ ಜಾಗಕ್ಕೆ ಸ್ಪ್ರೇ ಮಾಡಲಾಗುತ್ತಿದೆ.

  'ಯಾರೂ ಭಯಪಡಬೇಡಿ': ನಂದನ್

  ಈ ಬಗ್ಗೆ ನಟಿ ಸುಹಾಸಿನಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಮಗನ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ನಂದನ್ ಕೂಡ ಮಾತನಾಡಿದ್ದು, ಇದು ದೊಡ್ಡ ವಿಚಾರವಲ್ಲ. ಯಾರೂ ಗಾಭರಿಯಾಗಬೇಕಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದ್ದಾರೆ.

  ಸ್ವಯಂ ನಿರ್ಬಂಧದಲ್ಲಿ ನಟ ಪ್ರಭಾಸ್

  ಸ್ವಯಂ ನಿರ್ಬಂಧದಲ್ಲಿ ನಟ ಪ್ರಭಾಸ್

  ನಟ ಪ್ರಭಾಸ್ ಕೂಡ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ. ಇತ್ತೀಚಿಗೆ ಚಿತ್ರೀಕರಣ ಮುಗಿಸಿ ವಿದೇಶದಿಂದ ವಾಪಸ್ ಆಗಿದ್ದ ಪ್ರಭಾಸ್ ಮನೆಯಲ್ಲಿಯೆ ಸ್ವಯಂ ನಿರ್ಬಂಧದಲ್ಲಿ ಇರುವುದಾಗಿ ಹೇಳಿದ್ದಾರೆ. ಜಾನ್ ಸಿನಿಮಾದ ಚಿತ್ರೀಕರಣಕ್ಕಾಗಿ ಪ್ರಭಾಸ್ ಜಾರ್ಜಿಯಾಗೆ ತೆರಳಿದ್ದರು. ಇತ್ತೀಚಿಗಷ್ಟೆ ವಾಪಸ್ ಆಗಿದ್ದಾರೆ. ಪ್ರಭಾಸ್ ಜೊತೆ ಇಡೀ ಚಿತ್ರತಂಡ ಸ್ವಯಂ ನಿರ್ಬಂಧದಲ್ಲಿ ಇದ್ದಾರೆ.

  English summary
  South Indian famous Actress Suhasini son Nandan self Quarantined after return from England.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X