For Quick Alerts
  ALLOW NOTIFICATIONS  
  For Daily Alerts

  ವಿಜಯ್ vs ಅಜಿತ್ 7ನೇ ಬಾರಿಗೆ ಸಂಕ್ರಾಂತಿ ರೇಸ್: ಕಳೆದ 6 ಬಾರಿ ಗೆದ್ದವರಾರು, ಬಿದ್ದವರಾರು?

  |

  ದಳಪತಿ ವಿಜಯ್ ಹಾಗೂ ತಲಾ ಅಜಿತ್ ಕುಮಾರ್ ತಮಿಳು ಚಿತ್ರರಂಗದ ಟಾಪ್ ಹೀರೊಗಳು. ಈ ಇಬ್ಬರ ಚಿತ್ರ ಹೇಗಿದ್ದರೂ ನಿರ್ಮಾಪಕರು ಮಾತ್ರ ಸೇಫ್ ಆಗುವುದಂತೂ ಖಚಿತ. ಸಾಧಾರಣ ಫಲಿತಾಂಶ ಬಂದರೂ ಸಹ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆಯನ್ನು ಮಾಡುತ್ತವೆ. ಇನ್ನು ಚಿತ್ರಕ್ಕೆ ಒಳ್ಳೆಯ ಟಾಕ್ ಬಂದರಂತೂ ದಾಖಲೆಯ ಕಲೆಕ್ಷನ್ ಮಾಡುವುದು ಖಚಿತ.

  ಹೀಗಾಗಿಯೇ ಈ ಇಬ್ಬರು ನಟರು ತಮಿಳು ನಾಡು ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿದ್ದಾರೆ. ಸದ್ಯ ತಮಿಳುನಾಡಿನಲ್ಲಿ ವಿಜಯ್ ಚಿತ್ರದ ಎದುರಿಗೆ ಚಿತ್ರ ಬಿಡುಗಡೆ ಮಾಡಿ ಪೈಪೋಟಿ ನೀಡುವ ಸಾಮರ್ಥ್ಯ ಇರುವುದು ಅಜಿತ್‌ಗೆ ಮಾತ್ರ ಹಾಗೂ ಅಜಿತ್ ಚಿತ್ರದ ಎದುರಿಗೆ ಬಂದು ಪೈಪೋಟಿ ನೀಡುವ ಸಾಮರ್ಥ್ಯ ಇರುವುದು ವಿಜಯ್‌ಗೆ ಮಾತ್ರ. ಹಾಗೆಂದ ಮಾತ್ರಕ್ಕೆ ಇದು ಸ್ಟಾರ್ ವಾರ್ ಅಲ್ಲ. ಇದೊಂದು ಪಕ್ಕಾ ಬಾಕ್ಸ್ ಆಫೀಸ್ ವಾರ್.

  ಈ ಇಬ್ಬರ ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡು ಎರಡೂ ಚಿತ್ರಗಳ ನಡುವೆ ರೇಸ್ ಏರ್ಪಟ್ಟಿರುವ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲಿಯೂ ಸಂಕ್ರಾಂತಿಯಂದು ತಮಿಳುನಾಡಿನಲ್ಲಿ ಸಾಲು ಸಾಲು ರಜೆಗಳಿರುವ ಕಾರಣ ಆ ದಿನಗಳಂದು ಇಬ್ಬರ ಚಿತ್ರಗಳು ಬರೋಬ್ಬರಿ ಆರು ಬಾರಿ ಮುಖಾಮುಖಿಯಾಗಿವೆ. ಈ ಬಾರಿಯೂ ಅದೇ ಮಾದರಿಯಲ್ಲಿ ಒಂದೇ ದಿನ ಅಜಿತ್ ನಟನೆಯ ತುನಿವು ಹಾಗೂ ವಿಜಯ್ ನಟನೆಯ ವಾರಿಸು ಚಿತ್ರಗಳು ಚಿತ್ರಮಂದಿರದ ಅಂಗಳಕ್ಕೆ ಬರುತ್ತಿವೆ. 2014ರ ಬಳಿಕ ಅಂದರೆ ಎಂಟು ವರ್ಷಗಳ ನಂತರ ಇಬ್ಬರ ಚಿತ್ರಗಳು ಏಳನೇ ಬಾರಿ ಮುಖಾಮುಖಿಯಾಗುತ್ತಿವೆ. ಇನ್ನು ಇಲ್ಲಿಯವರೆಗಿನ ಒಟ್ಟು ಆರು ಮುಖಾಮುಖಿಯಲ್ಲಿ ಯಾರ ಚಿತ್ರಗಳು ಗೆದ್ದಿವೆ ಹಾಗೂ ಯಾರ ಚಿತ್ರಗಳು ಸೋತಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

  1996ರಲ್ಲಿ ಮೊದಲ ಕ್ಲಾಷ್

  1996ರಲ್ಲಿ ಮೊದಲ ಕ್ಲಾಷ್

  ವಿಜಯ್ ಹಾಗೂ ಅಜಿತ್ ಚಿತ್ರಗಳ ನಡುವಿನ ಸಂಕ್ರಾಂತಿ ಕ್ಲಾಷ್ ಮೊದಲು ಶುರುವಾಗಿದ್ದು 1996ರಲ್ಲಿ. ಆ ವರ್ಷದ ಸಂಕ್ರಾಂತಿ ಪ್ರಯುಕ್ತ ಆಗ ಯುವ ನಟರಾಗಿ ಗುರುತಿಸಿಕೊಂಡಿದ್ದ ಈ ಇಬ್ಬರ ಚಿತ್ರಗಳು ಚಿತ್ರಮಂದಿರದ ಅಂಗಳಕ್ಕೆ ಬಂದಿದ್ದವು. ಅಜಿತ್ ನಟನೆಯ 'ವಾನ್ಮದಿ' ಹಾಗೂ ವಿಜಯ್ ನಟನೆಯ 'ಕೊಯಮತ್ತೂರು ಮಾಪ್ಲಿಳೈ' ಚಿತ್ರಗಳು ಬಿಡುಗಡೆಗೊಂಡಿದ್ದವು. ಈ ಎರಡೂ ಚಿತ್ರಗಳು ಸಹ ಬಾಕ್ಸ್ ಆಫೀಸ್ ಸಕ್ಸಸ್ ಕಂಡವು. ವಿಜಯ್ ನಟನೆಯ ಚಿತ್ರ ಬ್ಲಾಕ್‌ಬಸ್ಟರ್ ಎನಿಸಿಕೊಂಡರೆ, ಅಜಿತ್ ನಟನೆಯ ವಾನ್ಮದಿ ಚಿತ್ರ 175 ದಿನಗಳ ಪ್ರದರ್ಶನ ಕಂಡು ಡಬಲ್ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತ್ತು.

  ಎರಡನೇ ಕ್ಲಾಷ್ 1997ರಲ್ಲಿ

  ಎರಡನೇ ಕ್ಲಾಷ್ 1997ರಲ್ಲಿ

  1996ರಲ್ಲಿ ಮೊದಲ ಬಾರಿಗೆ ಸಂಕ್ರಾಂತಿ ಪ್ರಯುಕ್ತ ಮುಖಾಮುಖಿಯಾಗಿದ್ದ ಅಜಿತ್ ಹಾಗೂ ವಿಜಯ್ 1997ರಲ್ಲಿ ಎರಡನೇ ಬಾರಿ ಮುಖಾಮುಖಿಯಾದರು. ಈ ಬಾರಿ ಅಜಿತ್ ನಟನೆಯ 'ನೇಸಮ್' ಹಾಗೂ ವಿಜಯ್ ನಟನೆಯ 'ಕಾಲಮೆಲ್ಲಮ್ ಕಾದಿರುಪ್ಪೆನ್' ಚಿತ್ರಗಳು ಬಿಡುಗಡೆಗೊಂಡಿದ್ದವು. ಈ ಪೈಕಿ ಅಜಿತ್ ಅಭಿನಯದ ನೇಸಮ್ ಬಾಕ್ಸ್ ಆಫೀಸ್‌ನಲ್ಲಿ ನಷ್ಟ ಅನುಭವಿಸಿದರೆ, ವಿಜಯ್ ಅಭಿನಯದ 'ಕಾಲಮೆಲ್ಲಮ್ ಕಾದಿರುಪ್ಪೆನ್' ಲಾಭ ಗಳಿಸಿ ಸೂಪರ್ ಹಿಟ್ ಎನಿಸಿಕೊಂಡಿತ್ತು.

  2001ರಲ್ಲಿ ಮೂರನೇ ಮುಖಾಮುಖಿ

  2001ರಲ್ಲಿ ಮೂರನೇ ಮುಖಾಮುಖಿ

  ಇನ್ನು 2001ರಲ್ಲಿ ವಿಜಯ್ ಹಾಗೂ ಅಜಿತ್ ಮೂರನೇ ಬಾರಿಗೆ ಸಂಕ್ರಾಂತಿ ಪ್ರಯುಕ್ರ ಮುಖಾಮುಖಿಯಾಗಿದ್ದರು. ವಿಜಯ್ ನಟನೆಯ ಫ್ರೆಂಡ್ಸ್ ಹಾಗೂ ಅಜಿತ್ ನಟನೆಯ ಧೀನ ಚಿತ್ರಗಳು ಬಿಡುಗಡೆಗೊಂಡಿದ್ದವು. ಅಂದು ಈ ಎರಡೂ ಚಿತ್ರಗಳೂ ಸಹ ಬ್ಲಾಕ್‌ಬಸ್ಟರ್ ಚಿತ್ರಗಳಾಗಿ ಹೊರಹೊಮ್ಮಿದ್ದವು ಹಾಗೂ ಎರಡೂ ಚಿತ್ರಗಳು ಸಹ ವಿನ್ನರ್‌ಗಳಾಗಿದ್ದವು.

  2006: ಆದಿ vs ಪರಮಶಿವನ್

  2006: ಆದಿ vs ಪರಮಶಿವನ್

  ಐದು ವರ್ಷಗಳ ಬಳಿಕ ಸಂಕ್ರಾಂತಿ ಪ್ರಯುಕ್ತ ಅಜಿತ್ ಹಾಗೂ ವಿಜಯ್ ಚಿತ್ರಗಳು 2006ರಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ವಿಜಯ್ ನಟನೆಯ ಆದಿ ಹಾಗೂ ಅಜಿತ್ ನಟನೆಯ ಪರಮಶಿವನ್ ಎರಡೂ ಚಿತ್ರಗಳು ನೆಗೆಟಿವ್ ವಿಮರ್ಶೆ ಪಡೆದುಕೊಂಡವು. ವಿಜಯ್ ನಟನೆಯ ಆದಿ ಬಾಕ್ಸ್ ಆಫೀಸ್‌ನಲ್ಲಿ ನಷ್ಟ ಅನುಭವಿಸಿದರೆ, ಅಜಿತ್ ನಟನೆಯ ಪರಮಶಿವನ್ ಸಾಧಾರಣ ಪ್ರದರ್ಶನ ಕಂಡಿತ್ತು.

  2007ರಲ್ಲಿ ವಿಜಯ್ ಚಿತ್ರ ಕ್ಲೀನ್ ವಿನ್ನರ್

  2007ರಲ್ಲಿ ವಿಜಯ್ ಚಿತ್ರ ಕ್ಲೀನ್ ವಿನ್ನರ್

  2007ರಲ್ಲಿ ವಿಜಯ್ ನಟನೆಯ ಪೊಕಿರಿ ಹಾಗೂ ಅಜಿತ್ ನಟನೆಯ ಆಳ್ವರ್ ಚಿತ್ರಗಳು ಸಂಕ್ರಾಂತಿ ಪ್ರಯುಕ್ತ ಬಿಡುಗಡೆಗೊಂಡಿದ್ದವು. ಈ ಪೈಕಿ ವಿಜಯ್ ನಟನೆಯ ಪೊಕಿರಿ ಕ್ಲಿಯರ್ ವಿನ್ನರ್ ಎನಿಸಿಕೊಂಡಿತ್ತು. ಪೊಕಿರಿ 200 ದಿನಗಳ ಪ್ರದರ್ಶನ ಕಂಡು ಗೆದ್ದು ಬೀಗಿದರೆ, ಅಜಿತ್ ನಟನೆಯ ಆಳ್ವರ್ ನಷ್ಟ ಅನುಭವಿಸಿತ್ತು.

  2014ರಲ್ಲಿ ಅಜಿತ್ ಗೆಲುವು

  2014ರಲ್ಲಿ ಅಜಿತ್ ಗೆಲುವು

  ಏಳು ವರ್ಷಗಳ ಬಳಿಕ ಅಜಿತ್ ಕುಮಾರ್ ಹಾಗೂ ವಿಜಯ್ ನಟನೆಯ ಚಿತ್ರಗಳು ಸಂಕ್ರಾಂತಿ ಪ್ರಯುಕ್ರ ಮುಖಾಮುಖಿಯಾಗಿದ್ದವು. ಅಜಿತ್ ನಟನೆಯ ವೀರಂ ಹಾಗೂ ವಿಜಯ್ ನಟನೆಯ ಜಿಲ್ಲಾ ಚಿತ್ರಗಳು ಬಿಡುಗಡೆಗೊಂಡಿದ್ದವು. ಈ ಪೈಕಿ ಎರಡೂ ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡವು. ವಿಜಯ್ ನಟನೆಯ ಜಿಲ್ಲಾ ಚಿತ್ರಕ್ಕಿಂತ ಅಜಿತ್ ನಟನೆಯ ವೀರಂ ಚಿತ್ರ ಹೆಚ್ಚು ಕಲೆಕ್ಷನ್ ಮಾಡಿ ವಿನ್ನರ್ ಎನಿಸಿಕೊಂಡಿತ್ತು. ಈಗ ಎಂಟು ವರ್ಷಗಳ ಬಳಿಕ ವಿಜಯ್ ವಾರಿಸು ಮೂಲಕ ಹಾಗೂ ಅಜಿತ್ ತುನಿವು ಮೂಲಕ ಸಂಕ್ರಾಂತಿ ಪ್ರಯುಕ್ತ ಏಳನೇ ಬಾರಿಗೆ ಮುಖಾಮುಖಿಯಾಗುತ್ತಿದ್ದಾರೆ.

  English summary
  Ajith vs Vijay 7 times Sankranti clashes and winners details . Read on
  Tuesday, January 10, 2023, 17:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X