ಅಂಧಾದುನ್ ತಮಿಳು ರೀಮೇಕ್ ಹೆಸರು ಫಿಕ್ಸ್, ಟಬು ಪಾತ್ರದಲ್ಲಿ ಸ್ಟಾರ್ ನಟಿ

ಬಾಲಿವುಡ್ ಸೂಪರ್ ಹಿಟ್ ಚಿತ್ರ ಅಂಧಾದುನ್ ತೆಲುಗು ಮತ್ತು ತಮಿಳಿನಲ್ಲಿ ರೀಮೇಕ್ ಆಗುತ್ತಿದೆ ಎಂಬ ವಿಚಾರ ಬಹಳ ದಿನಗಳಿಂದಲೂ ಚರ್ಚೆಯಲ್ಲಿದೆ. ಇದೀಗ, ತಮಿಳಿನಲ್ಲಿ ಅಂಧಾದುನ್ ರೀಮೇಕ್‌ಗೆ 'ಅಂಧಾಗನ್' ಎಂಬ ಹೆಸರು ಅಂತಿಮವಾಗಿದೆ.

ಅಂಧಾಗನ್ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಚಿತ್ರದಲ್ಲಿ ಪ್ರಶಾಂತ್ ನಾಯಕನಾಗಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಆಯುಷ್ಮಾನ್ ಖುರಾನ್ ನಟಿಸಿದ್ದ ಪಾತ್ರದಲ್ಲಿ ಪ್ರಶಾಂತ್ ಅಭಿನಯಿಸುತ್ತಿದ್ದು, ಟಬು ನಿರ್ವಹಿಸಿದ್ದ ಪಾತ್ರದಲ್ಲಿ ಸ್ಟಾರ್ ನಟಿ ಸಿಮ್ರಾನ್ ಕಾಣಿಸಿಕೊಳ್ಳುತ್ತಿದ್ದಾರೆ.

ರಾಧಿಕಾ ಆಪ್ಟೆ ಪಾತ್ರದಲ್ಲಿ ಯಾರು ಅಭಿನಯಿಸಲಿದ್ದಾರೆ ಎನ್ನುವುದು ಸದ್ಯಕ್ಕೆ ಕುತೂಹಲವಾಗಿ ಉಳಿದಿದೆ. ಇನ್ನುಳಿದಂತೆ ಪ್ರಶಾಂತ್ ಅವರ ತಂದೆ ಹಿರಿಯ ನಟ ತ್ಯಾಗರಾಜ್ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 'ಪೊನ್ಮಗಲ್ ವಂಧಲ್' ಖ್ಯಾತಿಯ ಜೆಜೆ ಫೆಡ್ರಿಕ್ ನಿರ್ದೇಶನ ಮಾಡ್ತಿದ್ದಾರೆ.

Andhadhun Tamil remake titled Andhagan starrer Prashanth in Lead Role

ತೆಲುಗಿನಲ್ಲಿ ನಿತೀನ್ ನಾಯಕರಾಗಿ ನಟಿಸುತ್ತಿದ್ದು, ಟಬು ಪಾತ್ರದಲ್ಲಿ ತಮನ್ನಾ ಭಾಟಿಯಾ ಕಾಣಿಸಿಕೊಳ್ಳುತ್ತಿದ್ದಾರೆ. ರಾಧಿಕಾ ಆಪ್ಟೆ ಪಾತ್ರದಲ್ಲಿ ನಭಾ ನಟೇಶ್ ನಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ತೆಲುಗು ವರ್ಷನ್ ಚಿತ್ರ ಈಗಾಗಲೇ ಅಧಿಕೃತವಾಗಿ ಆರಂಭವಾಗಿದೆ.

ಮಲಯಾಳಂ ಭಾಷೆಯಲ್ಲೂ 'ಅಂಧಾದುನ್' ರೀಮೇಕ್ ಮೂಡಿಬರುತ್ತಿದ್ದು, ಈ ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಟಬು ನಿರ್ವಹಿಸಿದ್ದ ವಿಲನ್ ಪಾತ್ರದಲ್ಲಿ ಮಮತಾ ಮೋಹನ್‌ದಾಸ್ ಮತ್ತು ರಾಧಿಕಾ ಆಪ್ಟೆ ನಟಿಸಿದ್ದ ಪಾತ್ರದಲ್ಲಿ ಅಹನಾ ಕೃಷ್ಣ ಬಣ್ಣ ಹಚ್ಚುವ ಸಾಧ್ಯತೆ ಇದೆ.

2018ರಲ್ಲಿ ತೆರೆಕಂಡಿದ್ದ 'ಅಂಧಾದುನ್' ಚಿತ್ರವನ್ನ ಹಿಂದಿಯಲ್ಲಿ ಶ್ರೀರಾಮ್ ರಾಘವನ್ ನಿರ್ದೇಶಿಸಿದ್ದರು. 2019ನೇ ಸಾಲಿನಲ್ಲಿ ಪ್ರಕಟವಾದ ರಾಷ್ಟ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಪಡೆದುಕೊಂಡಿತ್ತು.

More from Filmibeat

English summary
Bollywood superhit movie Andhadhun tamil remake titled Andhagan starrer Prashanth in lead role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X