For Quick Alerts
  ALLOW NOTIFICATIONS  
  For Daily Alerts

  ದಲಿತ ಸಮುದಾಯದ ವಿರುದ್ಧ ನಿಂದನೆ ಮಾಜಿ ಬಿಗ್‌ಬಾಸ್ ಸ್ಪರ್ಧಿ ವಿರುದ್ಧ ದೂರು

  |

  ಸಾಮಾಜಿಕ ಜಾಲತಾಣ ಹೆಚ್ಚಾದ ಬಳಿಕ ಹಲವು ಸೆಲೆಬ್ರಿಟಿಗಳ ನಿಜ ಬಣ್ಣ ಬಯಲಾಗುತ್ತಿದೆ. ತೆರೆಯ ಮೇಲೆ, ಸಾರ್ವಜನಿಕ ಜೀವನದಲ್ಲಿ ಸುಬಗರು, ಸೌಮ್ಯರಂತೆ ವರ್ತಿಸುವ ಕೆಲವು ನಟ-ನಟಿಮಣಿಯರ ನಿಜ ಮುಖ ಸಾಮಾಜಿಕ ಜಾಲತಾಣದ ಮೂಲಕ ಬಯಲಾಗಿದೆ.

  ಮಾಜಿ ಬಿಗ್‌ಬಾಸ್ ಸ್ಪರ್ಧಿ, ನಟಿ, ಮಾಡೆಲ್ ಆಗಿರುವ ಮೀರಾ ಮಿಥುನ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯ. ಮಾಡೆಲ್ ಆಗಿ, ನಟಿಯಾಗಿ ಗುರುತಿಸಿಕೊಂಡಿರುವ ಈಕೆ ತಮ್ಮ ವಿವಾದಾತ್ಮಕ ಹೇಳಿಕೆಗಳು, ಗ್ಲಾಮರಸ್ ಚಿತ್ರಗಳಿಂದಲೇ ಹೆಚ್ಚು ಪರಿಚಿತರು.

  ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅರ್ಧ ವಯಸ್ಸಿನ ಬಾಯ್‌ಫ್ರೆಂಡ್ ಜೊತೆಗೆ ವಿವಿಧ ಭಂಗಿಯ ಚಿತ್ರಗಳನ್ನು ಹಂಚಿಕೊಳ್ಳುವ ಈ ನಟಿ ಇತ್ತೀಚೆಗೆ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಆದರೆ ಅದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮೀರಾ ಮಿಥುನ್ ವಿರುದ್ಧ ದೂರು ಸಹ ದಾಖಲಾಗಿದೆ.

  ಮೀರಾ ಮಿಥುನ್ ಪ್ರಕಟಿಸಿದ್ದ ವಿಡಿಯೋದಲ್ಲಿ ದಲಿತ ಸಮುದಾಯದ ಅದೂ ವಿಶೇಷವಾಗಿ ಪರಿಶಿಷ್ಟ ಜಾತಿ, ವರ್ಗದ ಸಮುದಾಯದ ಜನರ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿರುವ ಈಕೆ 'ಚಿತ್ರರಂಗದಲ್ಲಿರುವ ಎಲ್ಲ ಪರಿಶಿಷ್ಟ ಜಾತಿಯ ಜನರನ್ನು ಚಿತ್ರೋದ್ಯಮದಿಂದ ಹೊರಗೆ ಎತ್ತಿ ಬಿಸಾಡಬೇಕು'' ಎಂದು ನಟಿ, ಮಾಡೆಲ್ ಮೀರಾ ಮಿಥುನ್ ಹೇಳಿದ್ದಾರೆ.

  ಪರಿಶಿಷ್ಟ ಜಾತಿಯ ನಿರ್ದೇಶಕರನ್ನು ಹೊರಗೆ ದಬ್ಬಬೇಕು: ಮೀರಾ

  ಪರಿಶಿಷ್ಟ ಜಾತಿಯ ನಿರ್ದೇಶಕರನ್ನು ಹೊರಗೆ ದಬ್ಬಬೇಕು: ಮೀರಾ

  ಆಗಸ್ಟ್ ಏಳರಂದು ಪ್ರಕಟಿಸಲಾಗಿರುವ ವಿಡಿಯೋ ಸಂದರ್ಶನದಲ್ಲಿ ಮಾತನಾಡಿರುವ ಮೀರಾ ಮಿಥುನ್, ''ಚಿತ್ರೋದ್ಯಮದಲ್ಲಿರುವ ಎಲ್ಲ ಪರಿಶಿಷ್ಟ ಜಾತಿಯ ಚಿತ್ರಕರ್ಮಿಗಳನ್ನು ಹೊರಗೆ ದಬ್ಬಬೇಕು. ಪರಿಶಿಷ್ಟ ಜಾತಿಯ ಚಿತ್ರಕರ್ಮಿಗಳು ಉದ್ಯಮದಲ್ಲಿ ಅಪರಾಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಉದ್ಯಮದಲ್ಲಿ ತಪ್ಪು ಕೆಲಸಗಳನ್ನು ಆ ಸಮುದಾಯದ ಚಿತ್ರಕರ್ಮಿಗಳು ಮಾಡುತ್ತಿದ್ದಾರೆ'' ಎಂದಿದ್ದಾರೆ ಮೀರಾ ಮಿಥುನ್.

  ಆ ಜಾತಿಯವರನ್ನು ಇಷ್ಟು ದಿನ ಬಿಟ್ಟಿದ್ದೇ ತಪ್ಪು: ಮೀರಾ

  ಆ ಜಾತಿಯವರನ್ನು ಇಷ್ಟು ದಿನ ಬಿಟ್ಟಿದ್ದೇ ತಪ್ಪು: ಮೀರಾ

  ''ಉದ್ಯಮದಲ್ಲಿ ಅವರನ್ನು ಇಷ್ಟು ದಿನ ಬಿಟ್ಟಿದ್ದೇ ತಪ್ಪು ಅವರನ್ನು ಯಾವಾಗಲೋ ಕಿತ್ತೊಗೆಯಬೇಕಿತ್ತು. ಅವರಿಂದ ಚಿತ್ರರಂಗ ಹಾಳಾಗಿದೆ. ಆ ಜಾತಿಯ ಸಿನಿಮಾ ನಿರ್ದೇಶಕರು ಚಿತ್ರರಂಗದಲ್ಲಿ ಕಾನೂನು ಬಾಹಿರ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಜಾತಿಯ ಒಬ್ಬ ನಿರ್ದೇಶಕ ನನ್ನ ಒಪ್ಪಿಗೆ ಇಲ್ಲದೆ ನನ್ನ ಚಿತ್ರಗಳನ್ನು ಸಿನಿಮಾದ ಪೋಸ್ಟರ್‌ ಮೇಲೆ ಮುದ್ರಿಸಿದ್ದ'' ಎಂದಿದ್ದಾರೆ ಮೀರಾ ಮಿಥುನ್.

  ಮೀರಾ ಮಿಥುನ್ ವಿರುದ್ಧ ದೂರು ದಾಖಲು

  ಮೀರಾ ಮಿಥುನ್ ವಿರುದ್ಧ ದೂರು ದಾಖಲು

  ಮೀರಾ ಮಿಥುನ್‌ರ ಈ ಹೇಳಿಕೆ ವಿರುದ್ಧ ಈಗಾಗಲೇ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಮೀರಾ ವಿರುದ್ಧ ದೂರು ಸಹ ದಾಖಲಾಗಿದೆ. ವಾಣಿ ಅರಸು ಎಂಬುವರು ಚೆನ್ನೈ ಪೊಲೀಸರಿಗೆ ಮೀರಾ ವಿರುದ್ಧ ದೂರು ನೀಡಿದ್ದು, ದಲಿತ ದೌರ್ಜನ್ಯ ತಡೆ ಕಾಯ್ದೆ ಐಪಿಸಿ ಸೆಕ್ಷನ್ 153, 153 (ಎ)1 (ಎ), 505 (1) (ಬಿ) ಅಡಿಯಲ್ಲಿ ಮೀರಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೀರಾ ಮಿಥುನ್‌ಗೆ ಶೀಘ್ರವೇ ಸಮನ್ಸ್ ಜಾರಿ ಮಾಡಿ ಸ್ಪಷ್ಟೀಕರಣ ಕೇಳುವುದಾಗಿ ಚೆನ್ನೈ ಪೊಲೀಸ್ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

  ಮೀರಾ ಮಿಥುನ್‌ಗೆ ವಿವಾದಗಳು ಹೊಸದಲ್ಲ

  ಮೀರಾ ಮಿಥುನ್‌ಗೆ ವಿವಾದಗಳು ಹೊಸದಲ್ಲ

  ಮೀರಾ ಮಿಥುನ್‌ಗೆ ವಿವಾದಗಳು ಹೊಸದೇನೂ ಅಲ್ಲ. ತಮಿಳಿನ ಹಲವು ನಟಿಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್‌ಗಳನ್ನು ಮೀರಾ ಮಾಡಿದ್ದಾರೆ. ಕಮಲ್ ಹಾಸನ್ ಸೇರಿದಂತೆ ಹಲವು ಸ್ಟಾರ್‌ ನಟರ ವಿರುದ್ಧವೂ ಈ ಅರೆಕಾಲಿಕ ನಟಿ ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಹಾಟ್ ಆಂಡ್ ಬೋಲ್ಡ್‌ ಚಿತ್ರಗಳನ್ನು ಸಹ ಅಪ್‌ಲೋಡ್ ಮಾಡುತ್ತಿರುತ್ತಾರೆ. ತಮಗಿಂತಲೂ ಬಹಳ ಸಣ್ಣ ವಯಸ್ಸಿನ ಬಾಯ್‌ಫ್ರೆಂಡ್ ಹೊಂದಿರುವ ಮೀರಾ ಆತನೊಂದಿಗೆ ಶೃಂಗಾರ ಭಂಗಿಯಲ್ಲಿರುವ ಚಿತ್ರಗಳನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ.

  English summary
  Tamil actress, former Bigg Boss contestant Meera Mithun used casteist slur in a video against SC community people. Police booked case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X