Don't Miss!
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Sports
Ranji Trophy 2022-23: ಹೊರಬಿದ್ದ ಮುಂಬೈ; ಕರ್ನಾಟಕ ಸೇರಿ ಕ್ವಾರ್ಟರ್ ಫೈನಲ್ ತಲುಪಿದ ಅಗ್ರ 8 ತಂಡಗಳು
- News
ಫಾರೆನ್ಸಿಕ್ ಕ್ಯಾಂಪಸ್ ಶಂಕುಸ್ಥಾಪನೆಗೆ ಆಗಮಿಸಲಿರುವ ಅಮಿತ್ ಶಾ: ಧಾರವಾಡದಲ್ಲಿ ಭಾರಿ ಬಿಗಿ ಭದ್ರತೆ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸೈನಾ ನೆಹ್ವಾಲ್‌ಗೆ ದ್ವಂದ್ವಾರ್ಥದ ಟ್ವೀಟ್: ನಟ ಸಿದ್ಧಾರ್ಥ್ ವಿರುದ್ಧ ದೂರು ದಾಖಲು
ಬ್ಯಾಡ್‌ಮಿಂಟನ್ ಮಾಜಿ ವಿಶ್ವ ಚಾಂಪಿಯನ್ ಸೈನಾ ನೆಹ್ವಾಲ್ ಟ್ವೀಟ್ ಒಂದಕ್ಕೆ ದ್ವಂದ್ವಾರ್ಥ ಹೊಮ್ಮುವಂಥ ಪ್ರತಿಕ್ರಿಯೆ ನೀಡಿದ್ದ ನಟ ಸಿದ್ಧಾರ್ಥ್ ವಿರುದ್ಧ ದೂರು ದಾಖಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಂಚಾರಕ್ಕೆ ಪಂಜಾಬ್‌ನಲ್ಲಿ ಪ್ರತಿಭಟನಾಕಾರರು ತಡೆ ಮಾಡಿದ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದ ಸೈನಾ ನೆಹ್ವಾಲ್, ಭದ್ರತಾ ಲೋಪವನ್ನು ಟೀಕಿಸಿದ್ದರು. ಮೋದಿ ಅವರಿಗೆ ದೇಶದ ಜನರ ಬೆಂಬಲ ಇದೆ ಎಂದಿದ್ದರು.
ಸೈನಾ ನೆಹ್ವಾಲ್ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದ ಸಿದ್ಧಾರ್ಥ್, 'ಶಟಲ್‌ಕಾಕ್' ಅನ್ನು ಬದಲಿಸಿ 'ಸಟಲ್' 'ಕಾಕ್' ಎಂದು ಬರೆದು ದ್ವಂದ್ವಾರ್ಥ ಹೊಮ್ಮುವಂತೆ ಬರೆದಿದ್ದರು. ಸಿದ್ಧಾರ್ಥ್‌ರ ಈ ಟ್ವೀಟ್‌ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಹಿಳಾ ಆಯೋಗ, ಬ್ಯಾಡ್‌ಮಿಂಟನ್ ಅಸೋಸಿಯೇಷನ್ ಸೇರಿದಂತೆ ಸೈನಾ ನೆಹ್ವಾಲ್‌ರ ತಂದೆ, ಪತಿ ಸಹ ಸಿದ್ಧಾರ್ಥ್ ಟ್ವೀಟ್‌ನ ವಿರುದ್ಧ ಹರಿಹಾಯ್ದಿದ್ದರು.
ವಕೀಲ ಶಶಾಂಕ್ ಹಾಗೂ ಮತ್ತೊಬ್ಬರು ಸಿದ್ಧಾರ್ಥ್ ವಿರುದ್ಧ ದೂರು ನೀಡಿದ್ದು, ಐಪಿಸಿ ಸೆಕ್ಷನ್ 509 ಮತ್ತು 67ರ ಅಡಿ ದೂರು ದಾಖಲಾಗಿದೆ. ಇದರ ಹೊರತಾಗಿ ಎನ್‌ಡಬ್ಲುಸಿ (ರಾಷ್ಟ್ರೀಯ ಮಹಿಳಾ ಆಯೋಗ)ವು ಸಹ ಸಿದ್ಧಾರ್ಥ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದೆ. ಸಿದ್ಧಾರ್ಥ್‌ಗೆ ನೊಟೀಸ್ ಕಳಿಸುವುದಾಗಿ ಹೇಳಿದೆ. ಹೈದರಾಬಾದ್ ಸೈಬರ್ ಪೊಲೀಸ್ ಠಾಣೆಯಲ್ಲಿ ಮಹಿಳಾ ಪ್ರೇರಣೆ ಹೆಸರಿನ ಸಂಘಟನೆಯೊಂದು ನಟ ಸಿದ್ಧಾರ್ಥ್ ವಿರುದ್ಧ ದೂರು ನೀಡಿದ್ದು, ಅಲ್ಲಿಯೂ ಸಹ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಸೈನಾ ನೆಹ್ವಾಲ್‌ಗೆ ತಾವು ಮಾಡಿದ ಟ್ವೀಟ್‌ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ನಟ ಸಿದ್ಧಾರ್ಥ್ ಬಹಿರಂಗ ಕ್ಷಮೆ ಕೋರಿದ್ದಾರೆ. ''ನಿಮ್ಮ ಅಭಿಪ್ರಾಯಕ್ಕೆ ಪ್ರತಿಯಾಗಿ ನಾನು ಮಾಡಿದ ಒರಟು ಜೋಕ್ ಬಗ್ಗೆ ಕ್ಷಮೆ ಕೇಳುತ್ತೇನೆ. ನಿಮ್ಮೊಂದಿಗೆ ಅನೇಕ ವಿಷಯಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಟ್ವೀಟ್‌ಗೆ ಪ್ರತಿಯಾಗಿ ನಾನು ಮಾಡಿದ ಟ್ವೀಟ್ ಅದಕ್ಕೆ ಬಳಸಿದ ಪದಗಳು ಸೂಕ್ತವಾಗಿರಲಿಲ್ಲ. ಸ್ವತಃ ನಾನು ಅಷ್ಟು ಕೆಳಮಟ್ಟದವನಲ್ಲ ಎಂಬ ನಂಬಿಕೆ ನನಗೆ ಇದೆ'' ಎಂದಿದ್ದಾರೆ ಸಿದ್ಧಾರ್ಥ್. ''ನಾನು ಮಾಡಿದ ಜೋಕ್‌ನ ವಿಷಯಕ್ಕೆ ಬರುವುದಾದರೆ. ಆ ಒರಟು ಜೋಕ್ ಬಗ್ಗೆ ಕ್ಷಮೆ ಇರಲಿ. ಯಾವುದೇ ಜೋಕ್ ಅನ್ನು ಹೇಳಿದ ಮೇಲೆ ಅದರ ಅರ್ಥವನ್ನು ವಿವರಿಸುವ ಅವಶ್ಯಕತೆ ಎದುರಾಗುತ್ತದೆಯೆಂದರೆ ಅದು ಖಂಡಿತ ಒಳ್ಳೆಯ ಜೋಕ್ ಅಲ್ಲ. ನಾನು ಹೇಳಿದ ಕೆಟ್ಟ ಜೋಕ್ ಬಗ್ಗೆ ಕ್ಷಮೆ ಕೋರುವೆ, ನಾನು ಪದಗಳೊಂದಿಗೆ ಆಟವಾಗಿ ಜೋಕ್ ಹೊಮ್ಮಿಸಲು ಯತ್ನಿಸಿದ್ದೇನೆ. ಆದರೆ ಹಲವರು ಹೇಳುತ್ತಿರುವಂತೆ ಅದು ದುರುದ್ದೇಶಪೂರಿತ ಅಥವಾ ಲಿಂಗ ಭೇದವುಳ್ಳ ಅಥವಾ ಮಹಿಳೆಗೆ ಅಪಮಾನ ಮಾಡಬೇಕೆಂದು ಮಾಡಿದ ಟ್ವೀಟ್ ಅಲ್ಲ. ನಾನೂ ಒಬ್ಬ ಮಹಿಳಾಪರ ವ್ಯಕ್ತಿ. ನೀವೊಬ್ಬ ಮಹಿಳೆ ಎಂಬ ಕಾರಣಕ್ಕೆ ನಿಮ್ಮ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸಿಯೂ ಇಲ್ಲ. ನಾನು ಮಾಡಿದ ಟ್ವೀಟ್‌ನಲ್ಲಿ ಮಹಿಳೆಯರ ಬಗ್ಗೆ ಕೆಟ್ಟ ಉದ್ದೇಶವಾಗಲಿ, ಲಿಂಗ ತಾರತಮ್ಯ ಮಾಡುವ ಉದ್ದೇಶವಾಗಲಿ ಇಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಸಿದ್ಧಾರ್ಥ್ ಕ್ಷಮೆಗೆ ಪ್ರತಿಕ್ರಿಯೆ ನೀಡಿರುವ ಕ್ರೀಡಾಪಟು ಸೈನಾ ನೆಹ್ವಾಲ್, ''ನಾನು ನನ್ನ ಜೀವನದಲ್ಲಿ ಆರಾಮವಾಗಿದ್ದೇನೆ. ಸಿದ್ಧಾರ್ಥ್‌ಗೆ ದೇವರು ಒಳ್ಳೆಯದು ಮಾಡಲಿ'' ಎಂದಿದ್ದಾರೆ.