For Quick Alerts
  ALLOW NOTIFICATIONS  
  For Daily Alerts

  Gautami bank accounts frozen: ಖ್ಯಾತ ನಟಿಯ ಬ್ಯಾಂಕ್ ಖಾತೆ ಸೀಜ್!

  |

  ನಟ-ನಟಿಯರು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಟ-ನಟಿಯರ ಸಂಭಾವನೆ ಭಾರಿ ಮಟ್ಟದಲ್ಲಿ ಏರಿಕೆ ಆಗಿದೆ.

  ತಮ್ಮ ಸಂಭಾವನೆ ಬಗ್ಗೆ ಬಹಿರಂಗವಾಗಿ ಯಾವ ನಟರೂ ಹೇಳಿಕೊಳ್ಳುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ತೆರಿಗೆ ಭೀತಿ. ಸಂಭಾವನೆಯಿಂದ ಬಂದ ಭಾರಿ ಮೊತ್ತದ ಹಣದ ಮೇಲೆ ಸೂಕ್ತವಾಗಿ ತೆರಿಗೆ ಪಾವತಿಸುವ ನಟ-ನಟಿಯರು ಬಹಳ ಕಡಿಮೆ. ತಮಿಳಿನ ಜನಪ್ರಿಯ ನಟಿ ಗೌತಮಿ ಇವರಲ್ಲೊಬ್ಬರು.

  ಇಬ್ಬರಿಗಾಗಿ ಊರವರಿಗೆಲ್ಲ ಉಚಿತ ಪೆಟ್ರೋಲ್ ಹಂಚಿದ ಯೂಟ್ಯೂಬರ್‌!ಇಬ್ಬರಿಗಾಗಿ ಊರವರಿಗೆಲ್ಲ ಉಚಿತ ಪೆಟ್ರೋಲ್ ಹಂಚಿದ ಯೂಟ್ಯೂಬರ್‌!

  ನಟಿ ಗೌತಮಿ ತೆರಿಗೆ ವಂಚನೆ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿತ್ತು. ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು ನಟಿಯ ಎಲ್ಲ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಲು ಆದೇಶಿಸಿರುವ ಜೊತೆಗೆ ಗೌತಮಿಯವರು ಒಟ್ಟು ತಲಾ ಆದಾಯದ ಮೇಲೆ 25% ತೆರಿಗೆ ನೀಡುವಂತೆ ಆದೇಶಿಸಿದೆ.

  2016 ರಲ್ಲಿ ನಟಿ ಗೌತಮಿ ತಮಿಳುನಾಡಿನ ಕೊಟ್ಟಿಯಾರ್ ಗ್ರಾಮದ ಬಳಿ ಇದ್ದ ತಮ್ಮ ಜಮೀನನ್ನು 4.10 ಕೋಟಿಗೆ ಮಾರಾಟ ಮಾಡಿದರು. ಆದರೆ ನಟಿ ಈ ಜಮೀನನ್ನು 4.10 ಕೋಟಿಗೆ ಅಲ್ಲ ಬದಲಿಗೆ 11.17 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿತ್ತು.

  ಸ್ಟಾರ್ ನಿರ್ಮಾಪಕ ಹಾಗೂ ನಟನ ವಿರುದ್ಧ ವಂಚನೆ ಪ್ರಕರಣ ದಾಖಲುಸ್ಟಾರ್ ನಿರ್ಮಾಪಕ ಹಾಗೂ ನಟನ ವಿರುದ್ಧ ವಂಚನೆ ಪ್ರಕರಣ ದಾಖಲು

  ಆದರೆ ಇದನ್ನು ಅಲ್ಲಗಳೆದಿದ್ದ ನಟಿ ಗೌತಮಿ ತಾವು ಜಮೀನನ್ನು 4.10 ಕೋಟಿಗೆ ಮಾರಾಟ ಮಾಡಿದ್ದಾಗಿ ವಾದಿಸಿದ್ದರು. ಜೊತೆಗೆ ಆ ಹಣಕಾಸು ವರ್ಷದಲ್ಲಿ ತಾವು 35 ಲಕ್ಷ ರುಪಾಯಿ ತಲಾ ಆದಾಯ ಪಡೆದಿದ್ದು, ಅದಕ್ಕೆ ಸುಮಾರು 9 ಲಕ್ಷ ಆದಾಯ ತೆರಿಗೆಯನ್ನು ಬಡ್ಡಿ ಸಮೇತ ಪಾವತಿಸಿದ್ದಾಗಿ ಹೇಳಿದ್ದಾರೆ.

  ಆದರೆ ಇದನ್ನು ಒಪ್ಪದ ನ್ಯಾಯಾಲಯವು ನಟಿಯ ಆರು ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುವಂತೆ ಆದಾಯ ತೆರಿಗೆ ಇಲಾಖೆಗೆ ಸೂಚಿಸಿದ್ದು, ನಟಿಯು ತಲಾ ಆದಾಯದ ಮೇಲೆ 25% ತೆರಿಗೆ ಪಾವತಿಸಿದ ಬಳಿಕವಷ್ಟೆ ಬ್ಯಾಂಕ್ ಖಾತೆ ಮರಳಿ ನೀಡಿ ಎಂದು ಕಟುವಾಗಿಯೇ ಹೇಳಿದೆ.

  RRR Ticket Rates : ಯಾವ ನಗರಗಳಲ್ಲಿ ಟಿಕೆಟ್ ದರ ಎಷ್ಟಿದೆ: ಕರ್ನಾಟಕದಲ್ಲಿ ಎಷ್ಟು?RRR Ticket Rates : ಯಾವ ನಗರಗಳಲ್ಲಿ ಟಿಕೆಟ್ ದರ ಎಷ್ಟಿದೆ: ಕರ್ನಾಟಕದಲ್ಲಿ ಎಷ್ಟು?

  ನಟಿ ಗೌತಮಿ ಹಿರಿಯ ನಟಿಯಾಗಿದ್ದು 1987 ರಲ್ಲಿ ನಟನೆ ಆರಂಭಿಸಿದ ಗೌತಮಿ 'ಏಳು ಸುತ್ತಿನ ಕೋಟೆ', 'ಸಾಹಸ ವೀರ', 'ಚಿಕ್ಕೆಜಮಾನ್ರು', 'ಚೆಲುವ' ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ರಜನೀಕಾಂತ್, ಕಮಲ್ ಹಾಸನ್, ಮೋಹನ್ ಲಾಲ್ ಮಮ್ಮುಟಿ, ಚಿರಂಜೀವಿ, ಇನ್ನೂ ಹಲವು ಸ್ಟಾರ್ ನಟರೊಟ್ಟಿಗೆ ತೆರೆ ಹಂಚಿಕೊಂಡಿರುವ ಗೌತಮಿ ಒಂದು ಕಾಲದ ಬಹಳ ಬೇಡಿಕೆಯ ನಾಯಕ ನಟಿ. ಈಗಲೂ ನಟನೆಯಲ್ಲಿ ಬ್ಯುಸಿಯಾಗಿರುವ ಗೌತಮಿ ವಯಸ್ಸಿಗೆ ತಕ್ಕಂಥಹಾ ಪಾತ್ರಗಳಲ್ಲಿ ಈಗ ಕಾಣಿಸಿಕೊಳ್ಳುತ್ತಿದ್ದಾರೆ.

  English summary
  Chennai high court ordered to seize six bank accounts of actress Gautami. Court said release the seized bank accounts after actress paid 25% tax on capital gain.
  Saturday, March 26, 2022, 16:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X