For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿ ಸಾವಿಗೆ ಸಂತಾಪ ಸೂಚಿಸಿದ ತಮಿಳು ನಟ ಧನುಶ್

  |

  ತಮಿಳು ನಟ ಧನುಶ್ ಅವರ ಅಪ್ಪಟ ಅಭಿಮಾನಿಯೊಬ್ಬರು ಗುರುವಾರ (ನವೆಂಬರ್ 5) ರಂದು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಈರೋಡ್ ಜಿಲ್ಲೆಯ ಧನುಶ್ ಅಭಿಮಾನಿ ಸಂಘದ ಕಾರ್ಯದರ್ಶಿ ದಿಲೀಪ್ ಕುಮಾರ್ ಅನಾರೋಗ್ಯದಿಂದ ನಿಧನರಾಗಿದ್ದಾರೆ.

  ಅಭಿಮಾನಿ ಮೃತಪಟ್ಟ ಹಿನ್ನೆಲೆ ಅಭಿಮಾನಿಗಳು ಸಂತಾಪ ಸೂಚಿಸಿದ್ದು, ಅವರ ಸ್ಮರಣಾರ್ಥ ಕಾರ್ಯಕ್ರಮ ಸಹ ಆಯೋಜಿಸಿದ್ದಾರೆ.

  ತಮಿಳು ನಟ ವಿಜಯ್ ಅಭಿಮಾನಿ ಆತ್ಮಹತ್ಯೆ, ಟ್ರೆಂಡ್ ಆಯ್ತು #RIPBala

  ಈ ವಿಷಯ ತಿಳಿದ ನಟ ಧನುಶ್ ಗುರುವಾರ ರಾತ್ರಿ (ನವೆಂಬರ್ 5) ತಮ್ಮ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ''ದಿಲೀಪ್ ಕುಮಾರ್ ಅವರ ಅಗಲಿಕೆ ನಿಜಕ್ಕು ಬೇಸರ ತರಿಸಿದೆ, ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.

  ಅಭಿಮಾನಿ ಸಾವಿನ ಕುರಿತು ತಮಿಳಿನಲ್ಲಿ ಬರೆದಿರುವ ಧನುಶ್ ''ಈರೋಡ್ ಜಿಲ್ಲಾ ಅಭಿಮಾನಿ ಕ್ಲಬ್ ಕಾರ್ಯದರ್ಶಿ ದಿನೇಶ್‌ಕುಮಾರ್ ಆರೋಗ್ಯದ ಸಮಸ್ಯೆಯಿಂದಾಗಿ ಇಂದು ನಿಧನರಾದರು. ಅವರ ನಿಧನದ ಸುದ್ದಿ ನನಗೆ ನೋವುಂಟು ಮಾಡಿದೆ. ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು." ಎಂದು ಟ್ವೀಟ್ ಮಾಡಿದ್ದಾರೆ.

  ದಿನೇಶ್ ಕುಮಾರ್ ಅಂತಿಮ ವಿಧಿಗಳನ್ನು ಧನುಶ್ ಅಭಿಮಾನಿಗಳ ಸಮ್ಮುಖದಲ್ಲಿ ಈರೋಡ್ನಲ್ಲಿರುವ ಅವರ ನಿವಾಸದಲ್ಲಿ ನಡೆಸಲಾಯಿತು.

  ಆಗಸ್ಟ್ ತಿಂಗಳಲ್ಲಿ ತಮಿಳು ನಟ ವಿಜಯ್ ಅವರ ಅಪ್ಪಟ ಅಭಿಮಾನಿ ಮೃತಪಟ್ಟಿದ್ದರು. ವಿಜಯ್ ಅಭಿಮಾನಿ ಸಾವಿನ ವಿಚಾರವಾಗಿ #RIPBala ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು.

  English summary
  Tamil actor Dhanush express condolence to his fan death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X