For Quick Alerts
  ALLOW NOTIFICATIONS  
  For Daily Alerts

  2ನೇ ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಬಗ್ಗೆ ನಟ ಧನುಷ್ ಭಾವನಾತ್ಮಕ ಪತ್ರ

  |

  67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮಾರ್ಚ್ 22ರಂದು ಪ್ರಟಕವಾಗಿದೆ. ಕೋವಿಡ್ ಕಾರಣದಿಂದ ವಿಳಂಬವಾಗಿ ಪ್ರಕಟಿಸಲಾಗಿದೆ. 67ನೇ ರಾಷ್ಟ್ರ ಪ್ರಶಸ್ತಿ ಅತ್ಯುತ್ತಮ ನಟ ಪ್ರಶಸ್ತಿ ಬಾಲಿವುಡ್ ನಟ ಮನೋಜ್ ಬಾಜಪೇಯಿ ಮತ್ತು ತಮಿಳು ನಟ ಧನುಷ್ ಇಬ್ಬರ ಪಾಲಾಗಿದೆ.

  ಭೋನ್ಸ್ಲೆ ಚಿತ್ರದ ನಟನೆಗೆ ಮನೋಜ್ ಬಾಜಪೇಯಿ ಅವರಿಗೆ ಪ್ರಶಸ್ತಿ ಬಂದಿದೆ. ಇನ್ನು ಅಸುರನ್ ಚಿತ್ರದ ಅದ್ಭುತ ನಟನೆಗೆ ನಟ ಧನುಷ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಬಂದ ಸಂತಸವನ್ನು ನಟ ಧನುಷ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ದೀರ್ಘವಾದ ಪತ್ರ ಬರೆದಿದ್ದಾರೆ. ಮುಂದೆ ಓದಿ...

  ಭಾರಿ ದುಬಾರಿ ಮೊತ್ತಕ್ಕೆ ನೆಟ್‌ಫ್ಲಿಕ್ಸ್‌ಗೆ ಸೇಲ್ ಆದ ಧನುಷ್ ಸಿನಿಮಾಭಾರಿ ದುಬಾರಿ ಮೊತ್ತಕ್ಕೆ ನೆಟ್‌ಫ್ಲಿಕ್ಸ್‌ಗೆ ಸೇಲ್ ಆದ ಧನುಷ್ ಸಿನಿಮಾ

  ಅತ್ಯುತ್ತಮ ನಟ ಪ್ರಶಸ್ತಿ ಗೆಲ್ಲುವುದು ಒಂದು ಕನಸು

  ಅತ್ಯುತ್ತಮ ನಟ ಪ್ರಶಸ್ತಿ ಗೆಲ್ಲುವುದು ಒಂದು ಕನಸು

  'ಅಸುರನ್ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಬಂದಿದೆ ಎನ್ನುವ ಅದ್ಭುತ ಸುದ್ದಿಯೊಂದಿಗೆ ದಿನ ಪ್ರಾರಂಭಿಸಿದೆ. ಅತ್ಯುತ್ತಮ ನಟ ಪ್ರಶಸ್ತಿ ಗೆಲ್ಲುವುದು ಒಂದು ಕನಸು. ಎರಡು ಗೆಲ್ಲುವುದು ಆಶೀರ್ವಾದ. ನಾನು ಇಲ್ಲಿವರೆಗೂ ಬರುತ್ತೇನೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಸಾಕಷ್ಟು ಜನರಿಗೆ ಧನ್ಯವಾದ ಹೇಳಬೇಕು. ಆದರೆ ಅದರಲ್ಲಿ ಕೆಲವರು ಮಾತ್ರ ಹೇಳುತ್ತೇನೆ. ಯಾವಾಗಲು ನನ್ನ ತಂದೆ-ತಾಯಿಗೆ ಧನ್ಯವಾದಗಳು. ನನ್ನ ಗುರು ಹಾಗೂ ಸಹೋದರನಿಗೆ ಧನ್ಯವಾದಗಳು' ಎಂದಿದ್ದಾರೆ.

  ನಿರ್ದೇಶಕ ವೆಟ್ರಿಮಾರನ್ ಬಗ್ಗೆ ಧನುಷ್ ಮಾತು

  ನಿರ್ದೇಶಕ ವೆಟ್ರಿಮಾರನ್ ಬಗ್ಗೆ ಧನುಷ್ ಮಾತು

  'ವೆಟ್ರಿ ನಾನು ನಿಮ್ಮನ್ನು ಬಾಲಾ ಮಹೇಂದ್ರ ಸರ್ ಕಚೇರಿಯಲ್ಲಿ ಭೇಟಿಯಾದಾಗ ನೀವು ಸ್ನೇಹಿತ, ಒಡನಾಡಿ ಮತ್ತು ಸಹೋದರರಾಗುತ್ತೀರಿ ಎಂದು ಎಂದಿಗೂ ಯೋಚಿಸಿರಲಿಲ್ಲ. ನಾವು ಕೆಲಸ ಮಾಡಿದ ನಾಲ್ಕು ಸಿನಿಮಾಗಳ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ' ಎಂದು ನಿರ್ದೇಶಕ ವೆಟ್ರಿಮಾರನ್ ಬಗ್ಗೆ ಧನುಷ್ ಬರೆದುಕೊಂಡಿದ್ದಾರೆ.

  ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್ಧನುಷ್ ಮಾಡಬೇಕಿದ್ದ ಖ್ಯಾತ ಕ್ರೀಡಾಪಟುವಿನ ಪಾತ್ರದಲ್ಲಿ ಅಮೀರ್ ಖಾನ್

  ಶಕ್ತಿಯ ಆಧಾರಸ್ತಂಭ ಅಭಿಮಾನಿಗಳು

  ಶಕ್ತಿಯ ಆಧಾರಸ್ತಂಭ ಅಭಿಮಾನಿಗಳು

  'ಅಂತಿಮವಾಗಿ ನನ್ನ ಅಭಿಮಾನಿಗಳಿಗೆ, ನನ್ನ ಶಕ್ತಿಯ ಆಧಾರ ಸ್ತಂಭಗಳಿಗೆ ಧನ್ಯವಾಗಳು. ನೀವೆಲ್ಲರೂ ನನಗೆ ನೀಡಿದ ಅತಿಯಾದ ಪ್ರೀತಿ ನನ್ನನ್ನು ಕಾಪಾಡುತ್ತದೆ. ಎಲ್ಲರಿಗೂ ಧನ್ಯವಾದ ಹೇಳಿದರೆ ಸಾಲದು. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ' ಎಂದು ಅಭಿಮಾನಿಗಳ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ್ದಾರೆ.

  ಮಗಳ ಜೋಶ್ ನೋಡಿ ಕಣ್ಣೀರಿಟ್ಟ ಸಿಂಪಲ್ ಬೆಡಗಿ ಶ್ವೇತ | Daughter Ashmitha | Filmibeat Kannada
  ಎರಡನೇ ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದು ಬೀಗಿದ ಧನುಷ್

  ಎರಡನೇ ಬಾರಿ ರಾಷ್ಟ್ರ ಪ್ರಶಸ್ತಿ ಗೆದ್ದು ಬೀಗಿದ ಧನುಷ್

  ದೀರ್ಘವಾಗಿ ಬರೆದ ಭಾವನಾತ್ಮಕ ಪತ್ರದಲ್ಲಿ ಧನುಷ್ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ಅಂದಹಾಗೆ ಧನುಷ್ ಎರಡನೇ ಬಾರಿಗೆ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಿದ್ದಾರೆ. ಈ ಮೊದಲು 2011ರಲ್ಲಿ ಆಡುಕಲಮ್ ಸಿನಿಮಾದ ಉತ್ತಮ ನಟನೆಗೆ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿ ಗೆದ್ದು ಬೀಗಿದ್ದರು.

  English summary
  Tamil Actor Dhanush pens emotional note after win national award.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X