For Quick Alerts
  ALLOW NOTIFICATIONS  
  For Daily Alerts

  ಜನಪ್ರಿಯ ನೃತ್ಯ ನಿರ್ದೇಶಕ ಶಿವಶಂಕರ್ ಆರೋಗ್ಯ ಸ್ಥಿತಿ ಗಂಭೀರ

  |

  ತಮಿಳು, ತೆಲುಗು ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಮತ್ತು ನಟ ಮಾಸ್ಟರ್ ಶಿವಶಂಕರ್ ಆರೋಗ್ಯ ಗಂಭೀರ ಸ್ಥಿತಿ ತಲುಪಿದೆ.

  ಶಿವಶಂಕರ್ ಮಾಸ್ಟರ್‌ಗೆ ಕೊರೊನಾ ತಗುಲಿದ್ದು, ಅವರ ದೇಹ ಪರಿಸ್ಥಿತಿ ವಿಷಮ ಸ್ಥಿತಿ ತಲುಪಿದೆ. ಅವರ ಶ್ವಾಸಕೋಶದ ಶೇಕಡ 75 ಭಾಗ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಶಿವಶಂಕರ್ ಅವರು ಹೈದಬಾರಾದ್‌ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಶಿವಶಂಕರ್ ಕುಟುಂಬದ ಎಲ್ಲರಿಗೂ ಕೊರೊನಾ ಆಗಿದೆ. ಶಿವಶಂಕರ್ ಮೊದಲ ಮಗ ಸಹ ಕೊರೊನಾದಿಂದ ತೀವ್ರ ಅನಾರೋಗ್ಯಕ್ಕೆ ಗುರಿಯಾಗಿ ಗಂಭೀರ ಸ್ಥಿತಿ ತಲುಪಿದ್ದಾರೆ. ಶಿವಶಂಕರ್ ಪತ್ನಿ ಕ್ವಾರಂಟೈನ್‌ನಲ್ಲಿದ್ದಾರೆ, ಶಿವಶಂಕರ್ ಕೊನೆಯ ಪುತ್ರ ಅಜಯ್ ಕೃಷ್ಣ ಒಬ್ಬರೇ ಈಗ ತಂದೆ ಹಾಗೂ ಅಣ್ಣನ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಶಿವ ಶಂಕರ್ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜೀವರಕ್ಷಕ ಸಾಧನಗಳನ್ನು ಶಿವಶಂಕರ್‌ಗೆ ಅಳವಡಿಸಲಾಗಿದೆ.

  ಶಿವಶಂಕರ್ ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಜನಪ್ರಿಯ ನೃತ್ಯ ನಿರ್ದೇಶಕ. ಈವರೆಗೆ ಸುಮಾರು 800 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನೃತ್ಯ ನಿರ್ದೇಶನಕ್ಕಾಗಿ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಕೆಲವು ಅತ್ಯುತ್ತಮ ಸಿನಿಮಾಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

  'ಮಗಧೀರ' ಸಿನಿಮಾದ 'ಧೀರ ಧೀರ ಧೀರ ಮನಸಾಗಲೇದುರಾ...' ಹಾಡಿಗೆ ಮಾಡಿದ್ದ ನೃತ್ಯ ನಿರ್ದೇಶನಕ್ಕೆ ಶಿವಶಂಕರ್‌ಗೆ ರಾಷ್ಟ್ರಪ್ರಶಸ್ತಿ ಧಕ್ಕಿದೆ. ಕನ್ನಡತಿ ಛಾಯಾಸಿಂಗ್, ಧನುಶ್ ಒಟ್ಟಿಗೆ ಕುಣಿದಿದ್ದ 'ಮನ್ಮತ ರಾಜ' ಹಾಡಿಗೆ ಇವರೇ ನೃತ್ಯ ನಿರ್ದೇಶನ ಮಾಡಿದ್ದರು. ಚಿರಂಜೀವಿ ಡ್ಯಾನ್ಸ್ ಸ್ಟಾರ್ ಆಗಿ ಗುರುತು ಪಡೆದುಕೊಂಡ ಹಲವು ಸಿನಿಮಾಗಳಿಗೆ ಶಿವಶಂಕರ್ ನೃತ್ಯ ನಿರ್ದೇಶನ ಮಾಡಿದ್ದಾರೆ.

  ಈಗಿನ ಜನಪ್ರಿಯ ನೃತ್ಯ ನಿರ್ದೇಶಕ ಮತ್ತು ನಟ ರಾಘವ್ ಲಾರೆನ್ಸ್‌ಗೆ ಗುರು ಸಹ ಆಗಿರುವ ಶಿವ ಶಂಕರ್ ತಮಿಳು ಹಾಗೂ ತೆಲುಗಿನಲ್ಲಿ ಹಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದಾರೆ. ಜೊತೆಗೆ ಕೆಲವು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸಹ ಭಾಗವಹಿಸಿದ್ದಾರೆ. ಮಹಿಳೆಯರಂತೆ ಮಾತನಾಡುವ, ನಡೆಯುವ ಅವರ ಹಾವ ಭಾವ ಅಭಿಮಾನಿಗಳಿಗೆ ಬಹಳ ಇಷ್ಟವಾಗುತ್ತಿತ್ತು.

  English summary
  Due to coronavirus dance master Shiva Shankar is in critical condition. He is admitted in Hyderabad's AIG hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X