For Quick Alerts
  ALLOW NOTIFICATIONS  
  For Daily Alerts

  ದುಲ್ಕರ್ ಸಲ್ಮಾನ್ ಡ್ರೈವರ್ ಹಠಾತ್ ನಿಧನ! ಗೊಂದಲ ಮೂಡಿಸಿದ ಸಾವು

  By ಫಿಲ್ಮಿಬೀಟ್ ಡೆಸ್ಕ್
  |

  ಖ್ಯಾತ ಬಹುಭಾಷಾ ನಟ ದುಲ್ಕರ್ ಸಲ್ಮಾನ್‌ರ ಕಾರು ಚಾಲಕ ನಿನ್ನೆ ರಾತ್ರಿ ಹಠಾತ್ ನಿಧನ ಹೊಂದಿದ್ದಾರೆ. ಅವರ ನಿಧನ ಗೊಂದಲಗಳಿಗೆ ಕಾರಣವಾಗಿದೆ.

  ದುಲ್ಕರ್ ಸಲ್ಮಾನ್‌ರ ಚೆನ್ನೈನ ಮನೆಯ ಕಾರಿನ ಚಾಲಕನಾಗಿ ಒಂದು ತಿಂಗಳ ಹಿಂದಷ್ಟೆ ಕೆಲಸಕ್ಕೆ ಸೇರಿದ್ದ ಭಾಸ್ಕರ್, ದುಲ್ಕರ್ ಅವರ ಮನೆಯಲ್ಲಿಯೇ ಮಲಗಿದ್ದಾಗ ಕೊನೆ ಉಸಿರೆಳೆದಿದ್ದಾನೆ.

  ಭಾಸ್ಕರ್‌ಗೆ 51 ವರ್ಷ ವಯಸ್ಸಾಗಿದ್ದು, ನಿನ್ನೆ (ಡಿಸೆಂಬರ್ 22) ರಂದು ರಾತ್ರಿ ಮಲಗುವ ಮುನ್ನ ಭಾಸ್ಕರ್ ಪ್ರಸಾದ್ ಪಿಜ್ಜಾ ಹಾಗೂ ಕೂಲ್‌ ಡ್ರಿಂಕ್ ಕುಡಿದಿದ್ದರಂತೆ. ಮಲಗಿದ್ದಾಗ ಒಮ್ಮೆಲೆ ಕೆಮ್ಮಳು ಆರಂಭಿಸಿದ ಭಾಸ್ಕರ್ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ದುಲ್ಕರ್‌ ಸಲ್ಮಾನ್‌ರ ಮತ್ತೊಬ್ಬ ಸಿಬ್ಬಂದಿ ಸುಜಿತ್ ಎಂಬುವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆ ವೇಳೆಗಾಗಲೆ ಭಾಸ್ಕರ್ ಪ್ರಾಣ ಹೋಗಿತ್ತು ಎಂದು ವೈದ್ಯರು ಹೇಳಿದ್ದಾರೆ.

  ಭಾಸ್ಕರ್‌ರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ವರದಿ ಬಂದ ಬಳಿಕವಷ್ಟೆ ಅವರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಘಟನೆ ನಡೆದಾಗ ದುಲ್ಕರ್ ಸಲ್ಮಾನ್ ಮನೆಯಲ್ಲಿ ಇರಲಿಲ್ಲ ಎನ್ನಲಾಗುತ್ತಿದೆ. ದುಲ್ಕರ್ ಸಲ್ಮಾನ್ ಅವರನ್ನು ವಿಮಾನ ನಿಲ್ದಾಣಕ್ಕೆ ಬಿಟ್ಟು ಬಂದ ಬಳಿಕ ಭಾಸ್ಕರ್ ಪಿಜ್ಜಾ ತಿಂದು ಮಲಗಿದ್ದರೆನ್ನಲಾಗುತ್ತಿದೆ.

  ದುಲ್ಕರ್ ಸಲ್ಮಾನ್ ಮಲಯಾಳಂನ ಸೂಪರ್ ಸ್ಟಾರ್. ಆದರೆ ಮಲಯಾಳಂ ಹೊರತಾಗಿಯೂ ಹಲವು ಭಾಷೆಗಳಲ್ಲಿ ದುಲ್ಕರ್ ಸಲ್ಮಾನ್ ನಟಿಸಿದ್ದಾರೆ. ಅವರು ಇತ್ತೀಚೆಗೆ ನಟಿಸಿದ್ದ 'ಚುಪ್' ಹಿಂದಿ ಸಿನಿಮಾ ಸೂಪರ್ ಹಿಟ್ ಆಗಿದೆ. ತೆಲುಗಿನ 'ಸೀತಾ ರಾಮಂ' ಸಿನಿಮಾ ಸಹ ಸೂಪರ್ ಡೂಪರ್ ಹಿಟ್ ಆಗಿತ್ತು. ಹಲವು ಭಾಷೆಗಳಲ್ಲಿ ದುಲ್ಕರ್ ಸಲ್ಮಾನ್ ನಟಿಸುತ್ತಿದ್ದಾರೆ.

  English summary
  Famous actor Dulquer Salmaan's driver Bhaskar Prasad died in Chennai's Dulquer's house. He ate Pizza and cool drinks before going to bed.
  Friday, December 23, 2022, 20:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X