Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಮಿಳುನಾಡು ಸಿನಿಮಾ ನಟರ ಸಂಘ ಕಚೇರಿಯಲ್ಲಿ ಬೆಂಕಿ: ಮಹತ್ವದ ದಾಖಲೆಗಳು ಭಸ್ಮ
ತಮಿಳುನಾಡಿನಲ್ಲಿ ಆಗಾಗ್ಗೆ ವಿವಾದಕ್ಕೆ ಕಾರಣವಾಗುವ ಸಿನಿಮಾ ನಟರ ಸಂಘದ ಕಚೇರಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ.
ಚೆನ್ನೈನ ಟಿ.ನಗರ್‌ನ ಹಬೀಬುಲ್ಲಾ ರಸ್ತೆಯಲ್ಲಿರುವ 'ನಡಿಗರ್ ಸಂಘಂ' ಕಚೇರಿಯಲ್ಲಿ ಇಂದು (ಡಿಸೆಂಬರ್ 07) ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಕಚೇರಿಯಲ್ಲಿದ್ದ ಮಹತ್ವದ ದಾಖಲೆಗಳು ಬೆಂಕಿಗೆ ಆಹುತಿ ಆಗಿವೆ.
ಬೆಂಕಿ ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳವು ಬೆಂಕಿ ಹೆಚ್ಚು ಹರಡದಂತೆ ನಂದಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎನ್ನಲಾಗುತ್ತಿದೆ.
2019 ರ ಜೂನ್ ತಿಂಗಳಲ್ಲಿ 'ನಡಿಗರ್ ಸಂಘಂ'ನ ಚುನಾವಣೆಗಳು ನಡೆದವು. ಆದರೆ ಈ ಚುನಾವಣೆ ಮತ್ತು ಇತರೆ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ಹೈಕೋರ್ಟ್‌ನಲ್ಲಿ ನಡೆಯುತ್ತಿವೆ.
ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ನ್ಯಾಯಾಲಯದ ಆದೇಶದಂತೆ ಚೆನ್ನೈನ ಸೌಥ್ ಇಂಡಿಯಾ ಬ್ಯಾಂಕಿನ ಲಾಕರ್‌ನಲ್ಲಿ ಇಡಲಾಗಿದೆ. ಆದರೆ ಇನ್ನೂ ಹಲವು ದಾಖಲೆಗಳು ನಡಿಗರ್ ಸಂಘದ ಕಚೇರಿಯಲ್ಲಿಯೇ ಇತ್ತು. ಈಗ ಬೆಂಕಿ ಅವಘಡದಿಂದ ಹಲವು ಮಹತ್ವದ ದಾಖಲೆಗಳು ನಷ್ಟವಾಗಿವೆ.
ಈ ಸಂಘ ಆಗಾಗ್ಗೆ ವಿವಾದಗಳಿಗೆ ಕಾರಣವಾಗುತ್ತಲೇ ಇರುತ್ತದೆ. ನಟ ವಿಶಾಲ್ ಸೇರಿ ಹಲವರು ನಡಿಗರ್ ಸಂಘದ ಪದಾಧಿಕಾರಿಗಳ ವಿರುದ್ಧ ಪ್ರತಿಭಟನೆಗಳನ್ನು ಮಾಡಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ಸಹ ತಿರುಗಿ ಭಾರಿ ಸುದ್ದಿಯಾಗಿತ್ತು. ಇದೀಗ ಕಚೇರಿಗೆ ಬೆಂಕಿ ಬಿದ್ದಿರುವುದು ಸಹ ಯಾರದ್ದೋ ಕುತಂತ್ರದಿಂದ ಎಂಬ ಆರೋಪಗಳನ್ನು ಕೆಲವರು ಮಾಡಬಹುದು.