Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಜಯ್ ಹೊಸ ಸಿನಿಮಾಕ್ಕೆ ಸ್ಟಾರ್ ನಿರ್ದೇಶಕನೇ ವಿಲನ್!
ತಮಿಳು ಸ್ಟಾರ್ ವಿಜಯ್‌ರ ಹೊಸ ಸಿನಿಮಾ 'ವಾರಿಸು' ಕೆಲವೇ ಜನವರಿ 12 ರಂದು ತೆರೆಗೆ ಬರಲಿದೆ. ಈ ಸಿನಿಮಾ ಬಿಡುಗಡೆಗೆ ಮುನ್ನವೇ ವಿಜಯ್‌ರ ಮುಂದಿನ ಸಿನಿಮಾ ದೊಡ್ಡದಾಗಿ ಸದ್ದು ಮಾಡುತ್ತಿದೆ.
ವಿಜಯ್ ನಟನೆಯ 67 ನೇ ಸಿನಿಮಾವನ್ನು ತಮಿಳಿನ ಹಿಟ್ ಯುವ ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದ ಬಗ್ಗೆ ಈಗಾಗಲೇ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿದೆ. ಇದಕ್ಕೆ ಮುಖ್ಯ ಕಾರಣ, ಲೋಕೇಶ್‌ರ ಇತ್ತೀಚಿನ ಸೂಪರ್ ಹಿಟ್ ಸಿನಿಮಾ 'ವಿಕ್ರಂ'ನ ಯಶಸ್ಸು ಹಾಗೂ ಲೋಕೇಶ್ ಕನಕರಾಜ್ ತಮ್ಮದೇ 'ಲೋಕೇಶ್ ವರ್ಸ್' ಸೃಷ್ಟಿಸಲು ಮಾಡುತ್ತಿರುವ ಯತ್ನ.
ವಿಜಯ್-ಲೋಕೇಶ್‌ರ ಮುಂದಿನ ಸಿನಿಮಾ ಬಗ್ಗೆ ಹಲವು ಊಹಾಪೋಹಗಳು ಈಗಾಗಲೇ ಹರಿದಾಡುತ್ತಿವೆ. ಇದು ಹಾಲಿವುಡ್ ಸಿನಿಮಾದ ರೀಮೇಕ್ ಅಂತೆ, ಲೋಕೇಶ್ ಕನಕರಾಜ್‌ರ ಈ ಹಿಂದಿನ ಸಿನಿಮಾಗಳ ಕತೆಯೊಟ್ಟಿಗೆ ಸಂಬಂಧಪಟ್ಟಿರದ ಸ್ವಂತ ಕತೆಯಂತೆ ಎಂದು ಹಲವು ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆಲ್ಲ ಲೋಕೇಶ್ ಕನಕರಾಜ್ ಪೂರ್ಣವಿರಾಮವಿಟ್ಟಿದ್ದಾರೆ ಜೊತೆಗೆ ಸಿನಿಮಾದ ವಿಲನ್ ಬಗ್ಗೆ ಶಾಕಿಂಗ್ ವಿಷಯವನ್ನೂ ತೆರೆದಿಟ್ಟಿದ್ದಾರೆ.

ವಿಜಯ್‌ಗೆ ವಿಲನ್ ಆದ ನಿರ್ದೇಶಕ!
ವಿಜಯ್-ಲೋಕೇಶ್‌ರ ಸಿನಿಮಾದಲ್ಲಿ ಯಾರೋ ಬಾಲಿವುಡ್‌ನ ದೈತ್ಯನೊಬ್ಬನನ್ನು ವಿಲನ್ ಮಾಡಲಾಗುತ್ತದೆ ಎಂಬ ಊಹೆ ಇತ್ತು ಆದರೆ ಅದು ಸುಳ್ಳಾಗಿದೆ. ಲೋಕೇಶ್, ತಮ್ಮ ಮುಂದಿನ ಸಿನಿಮಾಕ್ಕೆ ವಿಲನ್ ಆಗಿ ತಮಿಳಿನ ಸ್ಟಾರ್ ನಿರ್ದೇಶಕನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೌದು, 'ಮಿನ್ನಲೆ', 'ರೆಹನಾ ಹೈ ತೇರೆ ದಿಲ್ ಮೇ', 'ಕಾಕ-ಕಾಕ', 'ವೇಟ್ಟೆಯಾಡು-ವಿಲೆಯಾಡು', 'ಏ ಮಾಯ ಚೇಸಾವೆ', 'ವೆಂದು ತಣಿದತ್ತು ಕಾಡು' ಇನ್ನೂ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಗೌತಮ್ ವಾಸುದೇವ್ ಮೆನನ್, ವಿಜಯ್ ಎದುರು ವಿಲನ್ ಆಗಿ ನಟಿಸಲಿದ್ದಾರೆ!

ಅದ್ಧೂರಿ ವಿಲನ್ ಇರುವುದಿಲ್ಲ
ಹೌದು, ಲೋಕೇಶ್ ಕನಕರಾಜ್ ತಮ್ಮ ಸಿನಿಮಾಗಳಲ್ಲಿ ಅದ್ಧೂರಿ ವಿಲನ್‌ಗಳನ್ನು ತೋರಿಸುವುದಿಲ್ಲ. ಅವರ ಸಿನಿಮಾದ ವಿಲನ್‌ಗಳ ಪಾತ್ರಗಳು ಬಹಳ ಸಾಮಾನ್ಯವಾಗಿಯೇ ಇರುತ್ತವೆ, ನಾಯಕ ಪಾತ್ರಗಳು ಸಹ. ಹಾಗಾಗಿ ವಿಜಯ್‌ರ ಸಿನಿಮಾಕ್ಕೆ ಗೌತಮ್ ವಾಸುದೇವ್ ಮೆನನ್ ಅವರನ್ನೇ ವಿಲನ್ ಆಗಿ ಆರಿಸಿಕೊಂಡಿದ್ದಾರೆ. ಅತ್ಯುತ್ತಮ ನಿರ್ದೇಶಕ ಆಗಿರುವ ಗೌತಮ್ ವಾಸುದೇವ್ ಮೆನನ್ ಒಳ್ಳೆಯ ನಟರೂ ಹೌದು. ತಮ್ಮದೇ ಸಿನಿಮಾಗಳಲ್ಲಿ ಮಾತ್ರವಲ್ಲದೆ ಬೇರೆ ನಿರ್ದೇಶಕರ ಸಿನಿಮಾಗಳಲ್ಲಿಯೂ ಗೌತಮ್ ಈಗಾಗಲೇ ನಟಿಸಿದ್ದಾರೆ. ವಿಲನ್ ಆಗಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಮೊದಲ ಬಾರಿಗೆ ಒಬ್ಬ ಸೂಪರ್ ಸ್ಟಾರ್ ಎದುರು ಗೌತಮ್ ನಟಿಸಲಿದ್ದಾರೆ.

ಹೊಸ ಬರಹಗಾರನೊಟ್ಟಿಗೆ ಕೆಲಸ
ಲೋಕೇಶ್-ವಿಜಯ್ ಕಾಂಬಿನೇಶನ್‌ನ ಈ ಸಿನಿಮಾ ಹಾಲಿವುಡ್‌ನ ರೀಮೇಕ್ ಎನ್ನಲಾಗಿತ್ತು. ಆದರೆ ಆ ಸುದ್ದಿಗೆ ಫುಲ್‌ಸ್ಟಾಪ್ ಇಟ್ಟಿರುವ ಲೋಕೇಶ್, ಈ ಸಿನಿಮಾ ಸಂಪೂರ್ಣ ಸ್ವಂತ ಸಿನಿಮಾ ಆಗಿರಲಿದೆ ಎಂದಿದ್ದಾರೆ. ಅಲ್ಲದೆ, ಒಬ್ಬ ಹೊಸ ಸಿನಿಮಾ ಬರಹಗಾರನೊಬ್ಬನ ಸಹಾಯದೊಂದಿಗೆ ಈ ಸಿನಿಮಾದ ಕತೆ, ಚಿತ್ರಕತೆಯನ್ನು ಲೋಕೇಶ್ ಕನಕರಾಜ್ ಬರೆದಿದ್ದಾರಂತೆ. ಹಾಗಾಗಿ ಈ ಸಿನಿಮಾ ವಿಶೇಷವಾಗಿರಲಿದೆ ಎಂಬ ನಂಬಿಕೆ ಅವರದ್ದು.

ಜನವರಿ ತಿಂಗಳಲ್ಲಿ ಚಿತ್ರೀಕರಣ
ಇನ್ನು ವಿಜಯ್-ಲೋಕೇಶ್‌ರ ಈ ಸಿನಿಮಾ ಜನವರಿ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭಿಸಲಿದೆ. ಸಿನಿಮಾದ ಸಂಗೀತ ನಿರ್ದೇಶಕರಾಗಿ ಅನಿರುದ್ಧ್ ಕೆಲಸ ಮಾಡಲಿದ್ದಾರೆ. ಈ ಹಿಂದೆ ಲೋಕೇಶ್ ನಿರ್ದೇಶನದ 'ಮಾಸ್ಟರ್' ಸಿನಿಮಾದಲ್ಲಿ ವಿಜಯ್ ನಟಿಸಿದ್ದರು. ವಿಜಯ್ ಸೇತುಪತಿ ವಿಲನ್ ಆಗಿ ನಟಿಸಿದ್ದ ಈ ಸಿನಿಮಾ ಬಹುದೊಡ್ಡ ಹಿಟ್ ಆಗಿತ್ತು. ಇನ್ನು ವಿಜಯ್ ನಟನೆಯ 'ವಾರಿಸು' ಸಿನಿಮಾ ಇದೇ ಜನವರಿ 12 ರಂದು ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಹ ನಟಿಸಿದ್ದಾರೆ.