For Quick Alerts
  ALLOW NOTIFICATIONS  
  For Daily Alerts

  ಅತಿ ಹೆಚ್ಚು ತೆರಿಗೆ ಕಟ್ಟಿ ಪ್ರಶಸ್ತಿ ಪಡೆದ ತಲೈವಾ- ಕಿಲಾಡಿಯ ಒಟ್ಟು ಆಸ್ತಿ ಮೌಲ್ಯ ಎಷ್ಟು?

  |

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ಆಕ್ಷನ್ ಕಿಂಗ್ ಅಕ್ಷಯ್ ಕುಮಾರ್. ಇಬ್ಬರಿಗೂ ಅವರದ್ದೇ ಆದ ಅಭಿಮಾನಿ ಬಳಗವಿದ್ದು, ಕೆಲ ದಿನಗಳ ಹಿಂದೆ '2.0' ಸಿನಿಮಾದಲ್ಲಿ ಇಬ್ಬರು ಎದುರುಬದುರಾಗಿ ನಟಿಸಿ, ಪ್ರೇಕ್ಷಕರ ಮನ ಗೆದ್ದಿದ್ದರು. ಇದೀಗ ಮತ್ತೆ ಇಬ್ಬರು ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸಿನಿಮಾ ವಿಚಾರಕ್ಕೆ ಅಲ್ಲ. ಬದಲಿಗೆ ಟ್ಯಾಕ್ಸ್‌ ಕಟ್ಟುವ ವಿಚಾರದಲ್ಲಿ ಸೂಪರ್ ಸ್ಟಾರ್‌ಗಳಿಬ್ಬರು ಭೇಷ್ ಅನ್ನಿಸಿಕೊಂಡಿದ್ದಾರೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರೆಗೆ ಕಟ್ಟಿದ ನಟ ಅನ್ನುವ ಹೆಗ್ಗಳಿಕೆ ರಜನಿಕಾಂತ್ ಪಾತ್ರರಾಗಿದ್ದು, ಆದಾಯ ತೆರಿಗೆ ದಿನೋತ್ಸವ ನಿಮಿತ್ತ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  ಮತ್ತೊಂದ್ಕಡೆ ನಟ ಅಕ್ಷಯ್‌ ಕುಮಾರ್ ಬಾಲಿವುಡ್‌ನಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ನಟ ಅನ್ನಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಗೌರವ ಪೂರ್ವಕವಾಗಿ ಆದಾಯ ತೆರಿಗೆ ಇಲಾಖೆ ಬಾಲಿವುಡ್ ಕಿಲಾಡಿಗೆ ಸನ್ಮಾನ್​ ಪತ್ರವನ್ನು ನೀಡಿದೆ. ಚಿತ್ರವೊಂದಕ್ಕೆ ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್ ನಟರು ಅದಕ್ಕೆ ತಕ್ಕಂತೆ ತೆರಿಗೆ ಪಾವತಿಸುವ ಮೂಲಕ ಎಲ್ಲರಿಗೂ ಮಾದರಿ ಆಗಿದ್ದಾರೆ. ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ವರ್ಷಕ್ಕೆ ಎಷ್ಟು ತೆರಿಗೆ ಕಟ್ಟುತ್ತಾರೆ? ಅವರ ಬಳಿ ಒಟ್ಟು ಎಷ್ಟು ಆಸ್ತಿ ಇದೆ ಎನ್ನುವ ಕುತೂಹಲ ಮೂಡುವುದು ಸಹಜ.

  'ನನ್ನ ಜೀವನದಲ್ಲಿ ಶೇಕಡಾ 10ರಷ್ಟು ಸಂತೋಷ, ನೆಮ್ಮದಿ ಉಳಿಯಲಿಲ್ಲ'- ರಜನಿಕಾಂತ್'ನನ್ನ ಜೀವನದಲ್ಲಿ ಶೇಕಡಾ 10ರಷ್ಟು ಸಂತೋಷ, ನೆಮ್ಮದಿ ಉಳಿಯಲಿಲ್ಲ'- ರಜನಿಕಾಂತ್

  ರಜನಿಕಾಂತ್ ಹಾಗೂ ಅಕ್ಷಯ್‌ ಕುಮಾರ್ ಇಬ್ಬರೂ ಜೀರೋ ಇಂದು ಹೀರೋ ಆಗಿ, ಸೂಪರ್ ಸ್ಟಾರ್‌ಗಳಾಗಿ ಬೆಳೆದವರು. ಇಂದು ಅತಿ ಹೆಚ್ಚು ತೆರಿಗೆ ಪಾವತಿಸಿ, ಪ್ರಶಸ್ತಿ ಪಡೆದುಕೊಂಡಿದ್ದಾರೆ ಅಂದರೆ ಅದರ ಹಿಂದೆ ದೊಡ್ಡ ಪರಿಶ್ರಮವಿದೆ. ತಪಸ್ಸಿದೆ. ಸಿನಿರಸಿಕರ ಪ್ರೀತಿ, ಆಶೀರ್ವಾದ ಇದೆ. ಎಲ್ಲವನ್ನೂ ಮೀರಿ ಅದೃಷ್ಟ ಅವರ ಕೈ ಹಿಡಿದಿದೆ. ಅಂದಾಜಿನ ಪ್ರಕಾರ, ತಲೈವಾ ಮತ್ತು ಅಕ್ಕಿ ಆಸ್ತಿ ಮೌಲ್ಯ ಎಷ್ಟು ಅನ್ನೋದನ್ನು ನೋಡುವುದಾದರೆ?

   ತಲೈವಾ ಬಳಿ ಇರುವ ಆಸ್ತಿ ಎಷ್ಟು?

  ತಲೈವಾ ಬಳಿ ಇರುವ ಆಸ್ತಿ ಎಷ್ಟು?

  ಸೂಪರ್ ಸ್ಟಾರ್ ರಜನಿಕಾಂತ್ ಬಳಿ ನೂರಾರು ಕೋಟಿ ರೂ. ಆಸ್ತಿ ಇದ್ದರೂ ಅವರು ಸರಳ ಜೀವನವನ್ನು ನಡೆಸಿದ್ದೇ ಹೆಚ್ಚು. ಸಿನಿಮಾಗಳಲ್ಲಿ ನಟಿಸುವಾಗ ಬಿಟ್ಟರೆ ಉಳಿದಂತೆ ಬಿಳಿ ಶರ್ಟ್, ಬಿಳಿ ಪಂಚೆಯಲ್ಲೇ ರಜನಿಕಾಂತ್ ಕಾಣಿಸಿಕೊಳ್ಳುತ್ತಾರೆ. ಚಿತ್ರವೊಂದಕ್ಕೆ 50 ಕೋಟಿಗೂ ಅಧಿಕ ಸಂಭಾವನೆ ಪಡೆಯುವ ತಲೈವಾ ಬಳಿ ಐಷಾರಾಮಿ ಬಂಗಲೆಗಳು ಹಾಗೂ ದುಬಾರಿ ಕಾರುಗಳಿವೆ. ಅಂದಾಜು 400 ಕೋಟಿ ರೂ.ಗೂ ಅಧಿಕ ಆಸ್ತಿ ರಜನಿಕಾಂತ್ ಬಳಿ ಇದೆ ಅನ್ನಲಾಗ್ತಿದೆ.

  ದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಮಾಡಿದರೆ ತಪ್ಪೇನು? ಅಕ್ಷಯ್ ಪ್ರಶ್ನೆದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಮಾಡಿದರೆ ತಪ್ಪೇನು? ಅಕ್ಷಯ್ ಪ್ರಶ್ನೆ

   ಐಷಾರಾಮಿ ಬಂಗಲೆ, 1 ಕಲ್ಯಾಣ ಮಂಟಪ, ದುಬಾರಿ ಕಾರುಗಳು!

  ಐಷಾರಾಮಿ ಬಂಗಲೆ, 1 ಕಲ್ಯಾಣ ಮಂಟಪ, ದುಬಾರಿ ಕಾರುಗಳು!

  ಚೆನ್ನೈನ ಪೋಯಸ್ ಗಾರ್ಡನ್‌ನಲ್ಲಿ ತಲೈವಾ ಐಷಾರಾಮಿ ಮನೆ ಹೊಂದಿದ್ದಾರೆ. ಇದರ ಬೆಲೆ ಸುಮಾರು 35 ಕೋಟಿ ರೂ. ಎಂದು ಅಂದಾಜಿಸಲಾಗುತ್ತದೆ. ಇನ್ನು ಅವರ ಗ್ಯಾರೇಜ್‌ನಲ್ಲಿ ಐಷಾರಾಮಿ ಕಾರುಗಳೂ ಇವೆ. ಕಸ್ಟಮೈಸ್ಡ್ ಲಿಮೋಸಿನ್ ಜೊತೆಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೇರಿದಂತೆ ದುಬಾರಿ ಕಾರುಗಳಿವೆ. ಅಲ್ಲದೇ ಚೆನ್ನೈನಲ್ಲಿ‘ರಾಘವೇಂದ್ರ ಕಲ್ಯಾಣ ಮಂಟಪ' ಹೆಸರಿನ ಒಂದು ಕಲ್ಯಾಣ ಮಂಟಪವೂ ಇದೆ. ವರದಿಗಳ ಪ್ರಕಾರ ಇದರ ಬೆಲೆ 20 ಕೋಟಿ ರೂಪಾಯಿ. ಆದರೆ ಕೋಟಿಗಟ್ಟಲೆ ಆಸ್ತಿ ಇದ್ದರೂ ಜವಾಬ್ದಾರಿಯಿಂದ ಸೂಪರ್ ಸ್ಟಾರ್ ಆದಾಯ ತೆರಿಗೆ ಕಟ್ಟುತ್ತಾರೆ.

   ಬಸ್‌ ಕಂಡೆಕ್ಟರ್ To ಸೂಪರ್ ಸ್ಟಾರ್

  ಬಸ್‌ ಕಂಡೆಕ್ಟರ್ To ಸೂಪರ್ ಸ್ಟಾರ್

  ಎಲ್ಲರಿಗೂ ಗೊತ್ತಿರುವಂತೆ ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ಶಿವಾಜಿರಾವ್ ಗಾಯಕ್‌ವಾಡ್, ಮುಂದೆ ಚೆನ್ನೈನಲ್ಲಿ ಅಭಿನಯದ ಪಟ್ಟುಗಳನ್ನು ಕಲಿತು ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟರು. ಮೊದಲು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ ರಜನಿಕಾಂತ್ ನಿಧಾನವಾಗಿ ಖಳನಟನ ಪಾತ್ರಗಳಲ್ಲಿ ಮಿಂಚಿ ಹರಿಸಿದರು. ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂ ಮತ್ತು ಅಭಿನಯದಿಂದ ಹೀರೊ ಆಗಿಯೂ ಸಕ್ಸಸ್ ಕಂಡರು. ಅಂದು ಬಸ್ ಕಂಡಕ್ಟರ್ ಆಗಿದ್ದವರು ಇಂದು ನೂರಾರು ಕೋಟಿ ಆಸ್ತಿಯ ಒಡೆಯರಾಗಿದ್ದಾರೆ.

   ಅಕ್ಷಯ್‌ ಒಟ್ಟು ಆಸ್ತಿ ಮೌಲ್ಯ ಅಂದಾಜು 370 ಕೋಟಿ ರೂ.?

  ಅಕ್ಷಯ್‌ ಒಟ್ಟು ಆಸ್ತಿ ಮೌಲ್ಯ ಅಂದಾಜು 370 ಕೋಟಿ ರೂ.?

  ಬಾಲಿವುಡ್ ಕಿಲಾಡಿ ಅಕ್ಷಯ್‌ ಕುಮಾರ್ ಕೂಡ ಚಿತ್ರವೊಂದಕ್ಕೆ 60 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ. ಅಕ್ಷಯ್ ಭಾರತದಲ್ಲಿ ಮತ್ತು ಕೆನಡಾದಲ್ಲಿ ಐಷಾರಾಮಿ ಕಟ್ಟಡಗಳು ಮತ್ತು ಕಾರುಗಳನ್ನು ಹೊಂದಿದ್ದಾರೆ. ಈ ಕಿಲಾಡಿ ಬಳಿ ಖಾಸಗಿ ಜೆಟ್ ಕೂಡ ಇದೆ. 2017ರಲ್ಲಿ ಅಕ್ಷಯ್ 29.5 ಕೋಟಿ ರೂ. ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಾಗಿತ್ತು.

   ಬ್ಯಾಂಕಾಕ್‌ ಹೋಟೆಲ್‌ನಲ್ಲಿ ವೇಯ್ಟರ್ ಆಗಿ ಅಕ್ಕಿ ಕೆಲಸ

  ಬ್ಯಾಂಕಾಕ್‌ ಹೋಟೆಲ್‌ನಲ್ಲಿ ವೇಯ್ಟರ್ ಆಗಿ ಅಕ್ಕಿ ಕೆಲಸ

  ಇನ್ನು ಅಕ್ಷಯ್‌ ಕುಮಾರ್ ಕೂಡ ಒಂದು ಕಾಲದಲ್ಲಿ ಬ್ಯಾಂಕಾಕ್‌ನ ರೆಸ್ಟೋರೆಂಟ್‌ವೊಂದರಲ್ಲಿ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲೇ ಮಾರ್ಷಲ್ ಆರ್ಟ್ಸ್ ಕಲಿತ ಕಿಲಾಡಿ ನಂತರ ಮುಂಬೈಗೆ ವಾಪಸ್ ಬಂದಿದ್ದರು. ನಿಧಾನವಾಗಿ ಮಾಡೆಲಿಂಗ್ ಶುರು ಮಾಡಿದ ಅಕ್ಷಯ್ ಮುಂದೆ ಬಾಲಿವುಡ್‌ನ ಆಕ್ಷನ್‌ ಕಿಂಗ್ ಪಟ್ಟಕ್ಕೇರಿದರು. ಇಂದು ನೂರಾರು ಕೋಟಿ ರೂ. ಆಸ್ತಿಯ ಒಡೆಯನಾಗಿ ಐಶಾರಾಮಿ ಜೀವನ ನಡೆಸುತ್ತಿದ್ದಾರೆ.

  Recommended Video

  Neetha Ashok | ಸಲ್ಮಾನ್ ಖಾನ್‌ನ ಕಂಡು ನೀತಾ ಅಶೋಕ್‌ ನರ್ವಸ್ | Vikrant Rona | Kiccha Sudeep *Press Meet
  English summary
  Highest Tax Payers Rajinikanth And Akshay Kumar Total Net Worth. Know More.
  Tuesday, July 26, 2022, 9:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X