For Quick Alerts
  ALLOW NOTIFICATIONS  
  For Daily Alerts

  ಸಂಗೀತ ಮಾಂತ್ರಿಕ ಇಳಯರಾಜ, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ರಾಜ್ಯಸಭೆಗೆ ನಾಮನಿರ್ದೇಶನ

  |

  ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ, ಜನಪ್ರಿಯ ಸಿನಿಮಾ ಕತೆಗಾರ ವಿ.ವಿಜಯೇಂದ್ರ ಪ್ರಸಾದ್ ಅವರನ್ನು ಕೇಂದ್ರ ಸರ್ಕಾರವು ರಾಜ್ಯಸಭೆಗೆ ನಾಮ‌ ನಿರ್ದೇಶನ ಮಾಡಿದೆ.

  ಬುಧವಾರದಂದು ಒಟ್ಟು ನಾಲ್ಕು ಮಂದಿಯನ್ನು ರಾಜ್ಯಸಭೆಗೆ ನಾಮ‌ನಿರ್ದೇಶನ ಮಾಡಲಾಗಿದ್ದು, ಅದರಲ್ಲಿ ಸಿನಿಮಾ ಕ್ಷೇತ್ರದಿಂದ ವಿಜಯೇಂದ್ರ ಪ್ರಸಾದ್ ಹಾಗೂ ಇಳಯರಾಜ ಅವರನ್ನು ಆರಿಸಲಾಗಿದೆ.

  ಖ್ಯಾತ ಅಥ್ಲೀಟ್ ಪಿ.ಟಿ ಉಷಾ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ರಾಜ್ಯಸಭೆ ಪ್ರವೇಶಿಸುವ ಗೌರವ ಧಕ್ಕಿದೆ.

  ರಾಜ್ಯಸಭೆಗೆ ಆಯ್ಕೆ ಆದವ ನಾಲ್ವರ ಬಗ್ಗೆ ಪ್ರತ್ಯೇಕ ಟ್ವೀಟ್ ಗಳನ್ನು ಮಾಡಿರುವ ಪ್ರಧಾನಿ ಮೋದಿ, ವಿಜಯೇಂದ್ರ ಪ್ರಸಾದ್ ಕುರಿತಂತೆ, 'ವಿಜಯೇಂದ್ರ ಪ್ರಸಾದ್ ಅವರು ದಶಕಗಳಿಂದ ಮನೊರಂಜನಾ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರ ಕಾರ್ಯವು ಭಾರತದ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ಕಾರ್ಯ ಮಾಡಿದೆ. ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿದ್ದಕ್ಕೆ ಅವರಿಗೆ ಧನ್ಯವಾದ ಹೇಳುತ್ತೇನೆ' ಎಂದಿದ್ದಾರೆ.

  ಸಂಗೀತ ನಿರ್ದೇಶಕ ಇಳಯರಾಜ ಬಗ್ಗೆ ಟ್ವೀಟ್ ಮಾಡಿರುವ ಮೋದಿ, 'ಇಳಯರಾಜ ಅವರು ತಮ್ಮ ಸೃಜನಶೀಲ ಮೇರುಪ್ರತಿಭೆಯಿಂದ ಹಲವು ಪೀಳಿಗೆಗಳ ಜನ ಪುಳಕಿತಗೊಳ್ಳುವಂತೆ ಮಾಡಿದ್ದಾರೆ. ಅವರ ಸಂಗೀತ ಹಲವು ಭಾವಗಳನ್ನು ಪ್ರತಿಬಂಬಿಸುತ್ತದೆ. ಅವರ ಜೀವನ ಪಯಣವೂ ಸಹ ಸ್ಪೂರ್ತಿದಾಯಲವಾದುದು. ಬಹಳ ಸಾಮಾನ್ಯ ಹಿನ್ನೆಲೆಯಿಂದ ಬಂದ ಅವರು ಮಹತ್ತರವಾದುದನ್ನು ಸಾಧಿಸಿದ್ದಾರೆ. ಅವರು ರಾಜ್ಯಸಭೆಗೆ ನಾಮನಿರ್ದೇಶನಗೊಂಡಿದ್ದನ್ನು ನಾನು ಸ್ವಾಗತಿಸುತ್ತೇನೆ' ಎಂದಿದ್ದಾರೆ.

  ಕತೆಗಾರ ವಿಜಯೇಂದ್ರ ಪ್ರಸಾದ್, ನಿರ್ದೇಶಕ ರಾಜಮೌಳಿಯ ತಂದೆಯಾಗಿದ್ದು, ರಾಜಮೌಳಿ ನಿರ್ದೇಶನದ ಬಹುಪಾಲು ಸಿನಿಮಾಗಳಿಗೆ ಕತೆ ಬರೆದಿರುವವರು ಅವರೇ. 'ಬಾಹುಬಲಿ' ಇತ್ತೀಚಿನ 'RRR' ಸೇರಿದಂತೆ ಹಲವಾರು ಸೂಪರ್ ಹಿಟ್ ಸಿನಿಮಾಗಳಿಗೆ ಕತೆ ಒದಗಿಸಿದ್ದಾರೆ. ಕನ್ನಡದ 'ಅಪ್ಪಾಜಿ' ಸಿನಿಮಾಕ್ಕೂ ಕತೆ ವರೆದವರು ವಿಜಯೇಂದ್ರ ಪ್ರಸಾದ್, ಸಲ್ಮಾನ್ ಖಾನ್ ರ ಸೂಪರ್ ಹಿಟ್ ಸಿನಿಮಾ 'ಬಜರಂಗಿ ಭಾಯಿಜಾನ್' ಸಿನಿಮಾಕ್ಕೂ ಕತೆ ಬರೆದವರು ವಿಜಯೇಂದ್ರ ಪ್ರಸಾದ್ ಅವರೇ.

  ಇನ್ನು ಸಂಗೀತ ಮಾಂತ್ರಿಕ ಇಳಯರಾಜ ಈವರೆಗೆ ಸಾವಿರಾರು ಹಿಟ್ ಹಾಡುಗಳನ್ನು ನೀಡಿದ್ದಾರೆ. 1970 ರಿಂದಲೂ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಇಳಯರಾಜ ಕನ್ನಡ, ತೆಲುಗು, ತಮಿಳು, ಹಿಂದಿ ಸಿನಿಮಾಗಳಿಗೂ ಸಂಗೀತ ಒದಗಿಸಿದ್ದಾರೆ.

  English summary
  Music director Ilayaraja and famous Story writer Vijayendra Prasad nominated to Rajya Sabha with two others.
  Thursday, July 7, 2022, 8:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X