Don't Miss!
- Sports
ಟಿ20 ವಿಶ್ವಕಪ್ ಗೆದ್ದ ಶಫಾಲಿ ವರ್ಮಾ ಪಡೆಗೆ ಬಿಸಿಸಿಐ ಸನ್ಮಾನ: 5 ಕೋಟಿ ರುಪಾಯಿ ಬಹುಮಾನ
- News
ತಂಬಾಕು ನಿಯಂತ್ರಣಕ್ಕೆ ಮೈಸೂರು ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು, ಇಲ್ಲಿದೆ ವಿವರ
- Lifestyle
ಬಜೆಟ್ನಲ್ಲಿ ಪ್ರಸ್ತಾಪವಾದ ಸಿಕಲ್ ಸೆಲ್ ಅನಿಮಿಯಾ ಕಾಯಿಲೆ ಎಷ್ಟು ಡೇಂಜರಸ್ ಗೊತ್ತೆ?
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
10 ದಿನ 300 ಕೋಟಿ: ಕಮಾಲ್ ಮಾಡಿದ ಕಮಲ್ ಹಾಸನ್ 'ವಿಕ್ರಂ'
ನಟ ಕಮಲ್ ಹಾಸನ್ ಅಭಿನಯದ 'ವಿಕ್ರಂ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮೂಲಕ ಕಮಲ್ ಹಾಸನ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಅದೇ ಹಳೇ ಸ್ಟೈಲ್‌ನಲ್ಲಿ ರಗಡ್ ಲುಕ್ ನಲ್ಲಿ ವಿಕ್ರಂ ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ ನಟ ಕಮಲ್ ಹಾಸನ್. ಈ ಚಿತ್ರ ಕಮಲ್ ಹಾಸನ್ ಸಿನಿಮಾ ಜರ್ನಿಯಲ್ಲಿ ಹೊಸ ದಾಖಲೆ ಬರೆದಿದೆ.
ನಿರೀಕ್ಷೆ ಮಟ್ಟವನ್ನು ಮೀರಿ ವಿಕ್ರಂ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಮಲ್ ಹಾಸನ್ ಜೊತೆಗೆ ನಿರ್ದೇಶಕ ಲೊಕೇಶ್ ಕನಗರಾಜ್ ನಿರ್ದೇಶನದ ಪರಿಗೆ ಜನ ಸೈ ಎನ್ನುತ್ತಿದ್ದಾರೆ.
ಕನ್ನಡದಲ್ಲೇ
ಕನ್ನಡಿಗರಿಗೆ
ಕಮಲ್
ಹಾಸನ್
ಧನ್ಯವಾದ!
ನಟ ಕಮಲ್ ಹಾಸನ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಗ್ಯಾಪ್ ಬಳಿಕ ಬಂದಿರುವ ಕಮಲ್ ಹಾಸನ್, ಅಭಿಮಾನಿಗಳಿಗೆ ತಮ್ಮ ಪಾತ್ರದ ಮೂಲಕ ಕಿಕ್ ಕೊಟ್ಟಿದ್ದಾರೆ. ಮೊದಲ ದಿನ ಬಿಗ್ ಓಪನಿಂಗ್ ಪಡೆದುಕೊಳ್ಳುವ ಮೂಲಕ 300 ಕೋಟಿಯ ಗಡಿ ದಾಟಿದೆ.

'ವಿಕ್ರಂ' ಕಮಲ್ ಹಾಸನ್ ದೊಡ್ಡ ಯಶಸ್ಸು!
ಕಮಲ್ ಹಾಸನ್ ಅಭಿನಯದ ವಿಕ್ರಂ ನಟ ಕಮಲ್ ಹಾಸನ್ ಸಿನಿಮಾ ಜರ್ನಿಯಲ್ಲಿ ಹೊಸ ದಾಖಲೆ ಬರೆದಿದೆ. 'ವಿಕ್ರಂ' ಸಿನಿಮಾ ಕಮಲ್ ಹಾಸನ್ ಗೆ ದೊಡ್ಡ ಯಶಸ್ಸು ತಂದು ಕೊಟ್ಟಿದೆ. ದಶಕಗಳಿಂದ ಸಿನಿಮಾರಂಗದಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ಕೊಟ್ಟ ಕಮಲ್ ಹಾಸನ್ ಇದೇ ಮೊದಲ ಬಾರಿಗೆ ಚಿತ್ರದ ಮೂಲಕ ಹೊಸ ರೆಕಾರ್ಡ್ ಮಾಡಿದ್ದಾರೆ. 'ವಿಕ್ರಂ' ಸಿನಿಮಾ ಕಮಲ್ ಹಾಸನ್ ಸಿನಿಮಾ ವೃತ್ತಿಬ ದುಕಿನಲ್ಲಿ ಅತಿಹೆಚ್ಚು ಗಳಿಕೆ ಕಂಡ ಸಿನಿಮಾವಾಗಿದೆ. ಇದೇ ಖುಷಿಯಲ್ಲಿ ಕಮಲ್ ಹಾಸನ್ ಚಿತ್ರತಂಡದ ಹಲವರಿಗೆ ಉಡುಗೊರೆಗಳನ್ನು ಕೊಟ್ಟಿದ್ದಾರೆ.
'ವಿಕ್ರಂ'
ಗೆದ್ದಿದ್ದಕ್ಕೆ
ರೊಚ್ಚಿಗೆದ್ದು
ಉಡುಗೊರೆ
ನೀಡಿದ
ಕಮಲ್:
ರೊಲೆಕ್ಸ್,
13
ಬೈಕ್
ಯಾರಿಗೆ
ಏನೇನು?

10 ದಿನಕ್ಕೆ 300 ಕೋಟಿ ರೂ. ಗಳಿಕೆ!
ವಿಕ್ರಂ ಸಿನಿಮಾ ನಿರೀಕ್ಷೆಯ ಮಟ್ಟವನ್ನು ಮೀರಿ ಹೆಚ್ಚಿನ ಗಳಿಕೆ ಕಂಡಿದೆ. ಸಿನಿಮಾ ಹತ್ತನೇ ದಿನಕ್ಕೆ 300 ಕೋಟಿ ರೂ ಕಲೆಹಾಕಿದೆ. ಎರಡನೇ ವೀಕೆಂಡ್ ಮುಗಿಯುತ್ತಿದ್ದಂತೆಯೇ ವಿಕ್ರಮ್ ಬಾಕ್ಸಾಫೀಸ್ ಗಳಿಕೆ ಹೊರಬಂದಿದೆ. 10 ದಿನಕ್ಕೆ ವಿಕ್ರಮ್ 300 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. 'ವಿಕ್ರಂ' ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಕೇವಲ ತಮಿಳಿನಲ್ಲಿ ರಿಲೀಸಾದ ವಿಕ್ರಂ ಇಷ್ಟು ದೊಡ್ಡ ಮಟ್ಟದ ಗಳಿಕೆ ಕಂಡಿರುವುದು ತಮಿಳು ಚಿತ್ರರಂಗದಲ್ಲಿ ದೊಡ್ಡ ದಾಖಲೆಯೇ ಸರಿ.

ಮೊದಲ ದಿನ 45 ಕೋಟಿ ರೂ.!
ವಿಕ್ರಂ ಸಿನಿಮಾ ನಿರೀಕ್ಷೆಯಂತೆಯೇ ರಿಲೀಸ್ ದಿನವೇ ದೊಡ್ಡಮಟ್ಟದ ಓಪನಿಂಗ್ ಪಡೆದುಕೊಂಡಿದೆ. ಜೂನ್ ಮೂರಕ್ಕೆ ರಿಲೀಸಾದ ವಿಕ್ರಂ ಸಿನಿಮಾ ಮೊದಲ ದಿನ 45 ಕೋಟಿ ರೂ ಕಲೆಹಾಕಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚು ಮಾಡಿಕೊಂಡಿರುವ ವಿಕ್ರಮ ಸಿನಿಮಾ ವಿಶ್ವದಾದ್ಯಂತ ಹತ್ತನೇ ದಿನಕ್ಕೆ 300 ಕೋಟಿ ರೂ ಗಳಿಕೆ ಮಾಡಿದೆ. ಈ ಸಿನಿಮಾ ಪಾನ್ ಇಂಡಿಯಾ ಚಿತ್ರಗಳು ಮಾತ್ರವಲ್ಲ ಕಂಟೆಂಟ್ ಉತ್ತಮವಾಗಿದ್ದರೆ ಪಾನ್ ಇಂಡಿಯಾ ಟ್ಯಾಗ್ ಬೇಕಾಗಿಲ್ಲ ಎನ್ನುವುದನ್ನು ವಿಕ್ರಂ ಸಿನಿಮಾ ಸಾಬೀತು ಮಾಡಿದೆ.
'ವಿಕ್ರಂ'
ಹಿಟ್:
ನಿರ್ದೇಶಕನಿಗೆ
ಕಾರು
ಉಡುಗೊರೆ
ಕೊಟ್ಟ
ಕಮಲ್
ಹಾಸನ್,
ಬೆಲೆ
ಎಷ್ಟು
ಗೊತ್ತೆ?

ಒಟ್ಟಾರೆ ಲಾಭ 500 ಕೋಟಿ ರೂ.!
'ವಿಕ್ರಂ' ಸಿನಿಮಾ ರಿಲೀಸ್‌ಗೂ ಮುನ್ನವೇ 200 ಕೋಟಿ ರೂ. ಲಾಭ ಕಂಡಿತ್ತು. ಕಮಲಹಾಸನ್ ಸಿನಿಮಾ ಜರ್ನಿಯಲ್ಲಿ ಮೊದಲ ರೆಕಾರ್ಡ್. ಈಗ ಹತ್ತು ದಿನಕ್ಕೆ 300 ಕೋಟಿ ರೂ. ಗಳಿಕೆ ಕಂಡಿದ್ದು ಒಟ್ಟಾರೆ ಸಿನಿಮಾದ ಗಳಿಕೆ 500 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಎರಡು ವಾರ ಕಳೆದರೂ ಕೂಡ ವಿಕ್ರಂ ಸಿನಿಮಾದ ಬಾಕ್ಸಾಫೀಸ್ ಗಳಿಕೆ ಮುಂದುವರೆದಿದ್ದು, ಮತ್ತಷ್ಟು ದಾಖಲೆ ಬರೆಯುವ ನಿರೀಕ್ಷೆ ಇದೆ.