For Quick Alerts
  ALLOW NOTIFICATIONS  
  For Daily Alerts

  ರಾಜಕೀಯದಿಂದ ಹಿಂದೆ ಸರಿದ ರಜನಿ: 'ನಿಮ್ಮ ನಿರ್ಧಾರದ ಪರ ನಿಲ್ಲುವೆ' ಎಂದ ಖುಷ್ಬೂ

  |

  ಸೂಪರ್ ಸ್ಟಾರ್ ರಜನಿಕಾಂತ್ ಡಿಸೆಂಬರ್ 31 ರಂದು ತಮ್ಮ ರಾಜಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಮಂಗಳವಾರ ಬೆಳಗ್ಗೆ ನಿರಾಸೆಯ ಸುದ್ದಿ ಹೊರಬಿದ್ದಿದೆ.

  Recommended Video

  ಉಲ್ಟಾ ಹೊಡೆದ Rajni ರಾಜಕೀಯ ಜೀವನ | Filmibeat Kannada

  ಆರೋಗ್ಯದ ಕಾರಣ ನೀಡಿರುವ ರಜನಿಕಾಂತ್ ಸಕ್ರಿಯ ರಾಜಕೀಯದಿಂದ ನಾನು ಹಿಂದೆ ಸರಿಯುತ್ತಿದ್ದೇನೆ ಎಂದು ಪ್ರಕಟಿಸಿದ್ದಾರೆ. ರಜನಿಕಾಂತ್ ಅವರನ್ನು ರಾಜಕೀಯಕ್ಕೆ ನಿರೀಕ್ಷಿಸುತ್ತಿದ್ದವರಿಗೆ ಈ ಸುದ್ದಿ ಭಾರಿ ನಿರಾಸೆ ತಂದಿದೆ.

  ತಲೈವಾ ಅವರ ನಿರ್ಧಾರವನ್ನು ಹಿರಿಯ ನಟಿ, ಬಿಜೆಪಿ ಕಾರ್ಯಕರ್ತೆ ಖುಷ್ಬೂ ಸ್ವಾಗತಿಸಿದ್ದಾರೆ. ''ನಿಮ್ಮ ನಿರ್ಧಾರದಿಂದ ಪ್ರತಿಯೊಬ್ಬ ತಮಿಳಿಗರ ಹೃದಯ ಛಿದ್ರವಾಗಿದೆ, ಆದರೂ ನಿಮ್ಮ ನಿರ್ಧಾರದ ಪರ ನಾನು ನಿಲ್ಲುತ್ತೇನೆ'' ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.

  ''ಆತ್ಮೀಯ ರಜನಿಕಾಂತ್ ಸರ್, ನಿಮ್ಮ ನಿರ್ಧಾರ ಪ್ರತಿಯೊಬ್ಬ ತಮಿಳರ ಹೃದಯವನ್ನು ಛಿದ್ರಗೊಳಿಸಿದೆ. ಆದರೆ, ನಿಮ್ಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಿಂತ ಬೇರೆ ವಿಷಯಗಳು ಮುಖ್ಯವಲ್ಲ ಎಂದು ನಾನು ನಿಜವಾಗಿಯೂ ಅರ್ಥಮಾಡಿಕೊಳ್ಳಬಲ್ಲೆ. ನಿಮ್ಮ ಹಿತೈಷಿಯಾಗಿ, ಓರ್ವ ಸ್ನೇಹಿತೆಯಾಗಿ ನಿಮ್ಮ ನಿರ್ಧಾರದ ಪರ ನಿಲ್ಲುತ್ತೇನೆ. ನೀವು ನನಗೆ ಬಹಳ ಮುಖ್ಯ ಹಾಗೂ ಅಮೂಲ್ಯ ವ್ಯಕ್ತಿ. ಕಾಳಜಿ ವಹಿಸಿ ಮತ್ತು ಸಂತೋಷವಾಗಿರಿ'' ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.

  ಈ ಹಿಂದೆ ರಜನಿಕಾಂತ್ ಅವರ ಆರೋಗ್ಯದ ಬಗ್ಗೆ ಊಹಾಪೋಹಗಳು ಉಂಟಾಗಿದ್ದವು. ತಲೈವಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹಾಗಾಗಿ, ರಾಜಕೀಯವಾಗಿ ಮುಂದುವರಿಯುವುದಿಲ್ಲ ಎಂಬ ಸುದ್ದಿ ವರದಿಯಾಗಿತ್ತು. ಆ ಸಂದರ್ಭದಲ್ಲಿ ಸ್ಪಷ್ಟನೆ ನೀಡಿದ್ದ ರಜನಿ ''ಆರೋಗ್ಯದ ವಿಚಾರದಲ್ಲಿ ನಾನು ಬಳಲಿದ್ದೇನೆ, ಆದರೆ ರಾಜಕೀಯವಾಗಿ ಹಿಂದೆ ಸರಿಯುತ್ತಿಲ್ಲ'' ಎಂದು ತಿಳಿಸಿದ್ದಾರೆ.

  Khushbu Sundar Reaction to Rajinikanth Decision to Not Entering Politics

  ಆಗ ರಜನಿ ಅವರ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಖುಷ್ಬೂ ''ಪ್ರೀತಿಯ ರಜನಿಕಾಂತ್ ಸರ್. ನಿಮ್ಮ ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಿಂತ ಬೇರೇನೂ ಮುಖ್ಯವಲ್ಲ. ನೀವು ನಮ್ಮ ಅಮೂಲ್ಯ ರತ್ನ. ನೀವು ನಮ್ಮ ನಿಧಿ. ಆರೋಗ್ಯದೃಷ್ಟಿಯಿಂದ ಮತ್ತು ಇತರೆ ದೃಷ್ಟಿಯಿಂದ ನಿಮಗೆ ಉತ್ತಮವಾದುದನ್ನು ನೀವು ಮಾಡಿ. ನಿಮ್ಮ ಮೇಲಿನ ನಮ್ಮ ಪ್ರೀತಿಯನ್ನು ಯಾವುದೂ ಬದಲಾಗುವುದಿಲ್ಲ. ನಮ್ಮ ಜೀವನದುದ್ದಕ್ಕೂ ನಿಮ್ಮನ್ನು ಆರಾಧಿಸುವುದನ್ನು ಮುಂದುವರಿಸುತ್ತೇವೆ'' ಎಂದು ಹೇಳಿದ್ದರು.

  ಖುಷ್ಬೂ ಅವರ ಅಂದಿನ ಟ್ವೀಟ್ ಹಾಗೂ ಈಗ ಮಾಡಿರುವ ಟ್ವೀಟ್‌ನಲ್ಲಿ ಅಂತಹ ವ್ಯತ್ಯಾಸ ಇಲ್ಲ. ರಜನಿಕಾಂತ್ ಅವರ ಮೇಲಿನ ಅಭಿಮಾನ ಮತ್ತು ಅವರ ಆರೋಗ್ಯದ ವಿಚಾರದಲ್ಲಿ ಖುಷ್ಬೂ ಅವರಿಗಿರುವ ಕಾಳಜಿಗೆ ನೆಟ್ಟಿಗರು ಹಾಗೂ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  English summary
  Tamil senior actress and Tamilnadu Bjp member Khushbu Sundar reaction to rajinikanth decision to Not Entering Politics.
  Tuesday, December 29, 2020, 16:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X