For Quick Alerts
  ALLOW NOTIFICATIONS  
  For Daily Alerts

  ಬಳಕುವ ಬಳ್ಳಿಯಾದ ಖುಷ್ಬೂಗೆ ಅಭಿಮಾನಿಯಿಂದ ಮದುವೆ ಪ್ರಪೋಸಲ್; ನಟಿಯ ಉತ್ತರಕ್ಕೆ ಫ್ಯಾನ್ಸ್ ಫಿದಾ

  |

  ಬಹುಭಾಷಾ ನಟಿ ಖುಷ್ಬೂ ಮತ್ತೆ ಸುದ್ದಿಯಲ್ಲಿದ್ದಾರೆ. ಅಂದಹಾಗೆ ರಣಧೀರ ಸುಂದರಿ ಮತ್ತೆ ಸುದ್ದಿಯಾಗಿದ್ದು ಸಿನಿಮಾ ವಿಚಾರಕ್ಕಲ್ಲ, ದಪ್ಪಗಿದ್ದ ಖುಷ್ಬೂ ತೂಕ ಇಳಿಸಿಕೊಂಡು ಬಳಕುವ ಬಳ್ಳಿಯಂತೆ ಆಗಿ ಗಮನ ಸೆಳೆಯುತ್ತಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಹೀಗೆ ಏಕಾಏಕಿ ತೆಳ್ಳಗಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

  ಇತ್ತೀಚೆಗಷ್ಟೆ ಖುಷ್ಬೂ ತೆಳ್ಳಗಾಗಿರುವ ಒಂದು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಒಮ್ಮೆ ಅಚ್ಚರಿ ಪಟ್ಟಿದ್ದಾರೆ. ಸಖತ್ ಯಂಗ್ ಆಗಿ ಕಾಣಿಸುವ ಮೂಲಕ ಖುಷ್ಬೂ ಮತ್ತೆ 20 ವರ್ಷಗಳು ಹಿಂದೆ ಹೋಗಿದ್ದಾರೆ. ಖುಷ್ಬೂ ಫೋಟೋಗಳು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟಿರುವ ಖುಷ್ಬೂ ನೋಡಿ ಅಭಿಮಾನಿಯೊಬ್ಬರು ಮದುವೆ ಪ್ರಪೋಸಲ್ ಕಳುಹಿಸಿದ್ದಾರೆ. ಮುಂದೆ ಓದಿ...

  'ನಿಮ್ಮನ್ನು ಮದುವೆ ಆಗ್ತೀನಿ' ಎಂದ ಅಭಿಮಾನಿ

  'ನಿಮ್ಮನ್ನು ಮದುವೆ ಆಗ್ತೀನಿ' ಎಂದ ಅಭಿಮಾನಿ

  ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರು ಖುಷ್ಬೂಗೆ, 'ನಿಮ್ಮನ್ನು ಮದುವೆಯಾಗುತ್ತೇನೆ ಮೇಡಮ್' ಎಂದು ಕೇಳಿದ್ದಾರೆ. ಅಭಿಮಾನಿಯ ಟ್ವೀಟ್‌ಗೆ ಉತ್ತರ ಕೊಟ್ಟಿರುವ ಖುಷ್ಬೂ, "ಓಹ್..ಕ್ಷಮಿಸಿ ನೀವು ತುಂಬಾ ತಡವಾಗಿ ಕೇಳುತ್ತಿದ್ದೀರಿ. 21 ವರ್ಷ ತಡವಾಗಿ ಕೇಳುತ್ತಿದ್ದೀರಿ. ಆದರೆ ನನ್ನ ಗಂಡನನ್ನು ಒಮ್ಮೆ ಕೇಳುತ್ತೇನೆ" ಎಂದು ಹೇಳಿದ್ದಾರೆ. ಖುಷ್ಬೂ ಉತ್ತರ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  'ನನ್ನ ಪತಿಗೆ ನಾನು ಒಬ್ಬಳೇ ಪತ್ನಿ' ಎಂದ ಖುಷ್ಟೂ

  'ನನ್ನ ಪತಿಗೆ ನಾನು ಒಬ್ಬಳೇ ಪತ್ನಿ' ಎಂದ ಖುಷ್ಟೂ

  ಇಷ್ಟಕ್ಕೆ ಸುಮ್ಮನಾಗದ ಅಭಿಮಾನಿಗಳು ನಿಮ್ಮ ಪತಿ ಕಡೆಯಿಂದ ಯಾವ ಪ್ರತಿಕ್ರಿಯೆ ಸಿಕ್ತು ಎಂದು ಖುಷ್ಬೂ ಬಳಿ ಮತ್ತೆ ಪ್ರಶ್ನೆ ಮಾಡಿದ್ದಾರೆ. ಮಹೇಶ್ ಎನ್ನುವ ಅಭಿಮಾನಿ ಕಾಮೆಂಟ್ ಮಾಡಿ, "ನಿಮ್ಮ ಪತಿಯ ಕಡೆಯಿಂದ ಏನಾದರು ಉತ್ತರ ಸಿಕ್ಕಿತಾ?" ಎಂದು ಕೇಳಿದ್ದಾರೆ. ಮತ್ತೆ ಉತ್ತರಿಸಿದ ಖುಷ್ಬೂ, "ದುರದೃಷ್ಟವಶಾತ್ ನಾನು ಅವರಿಗೆ ಒಬ್ಬಳೇ ಪತ್ನಿ. ಹಾಗಾಗಿ ಅವರು ಕ್ಷಮಿಸಿ ಎಂದು ಹೇಳಿದರು. ಬಿಟ್ಟು ಕೊಡಲು ತಯಾರಿಲ್ಲ" ಎಂದು ಹೇಳಿದ್ದಾರೆ.

  14 ಕೆ.ಜಿ ತೂಕ ಇಳಿಸಿಕೊಂಡ ನಟಿ

  14 ಕೆ.ಜಿ ತೂಕ ಇಳಿಸಿಕೊಂಡ ನಟಿ

  ಖುಷ್ಬೂ ಪ್ರತಿಕ್ರಿಯೆ ಅಭಿಮಾನಿಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಎಂಥ ಉತ್ತರ ನೀಡಿದ್ದೀರಾ, ಹೇಗೆ ಹ್ಯಾಂಡಲ್ ಮಾಡುತ್ತಿದ್ದೀರಾ ಎಂದು ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂದಹಾಗೆ ಖುಷ್ಬೂ ಬರೋಬ್ಬರಿ 14 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ. ವರ್ಕೌಟ್, ಯೋಗ, ಡಯಟ್ ಅಂತ ಶ್ರಮಿಸಿರುವ ಖುಷ್ಬೂಗೆ ಉತ್ತಮ ಫಲಸಿಕ್ಕಿದೆ. ಗುಂಡು ಗುಂಡಾಗಿದ್ದ ಖುಷ್ಬೂ ತೆಳ್ಳಗಾಗಿ ಕಾಣಿಸಿಕೊಳ್ಳುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ.

  ಅಣ್ಣಾತೆ ಸಿನಿಮಾದಲ್ಲಿ ನಟನೆ

  ಅಣ್ಣಾತೆ ಸಿನಿಮಾದಲ್ಲಿ ನಟನೆ

  ರಾಜಕೀಯ ಮತ್ತು ಎರಡರಲ್ಲೂ ಬ್ಯುಸಿಯಾಗಿರುವ ಖುಷ್ಬೂ ಸದ್ಯ ಬಹುನಿರೀಕ್ಷೆಯ ಅಣ್ಣಾತೆ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸಿರುವ ಖುಷ್ಬೂ ಈಗಾಗಲೇ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದಲ್ಲಿ ಖುಷ್ಬೂ ಜೊತೆ ನಟಿ ಮೀನಾ ಕೂಡ ಕಾಣಿಸಿಕೊಂಡಿದ್ದಾರೆ. ಅಲ್ಲದೆ ನಯನತಾರಾ ಮತ್ತು ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

  ದೀಪಾವಳಿಗೆ ಅಣ್ಣಾತೆ ಬಿಡುಗಡೆ

  ದೀಪಾವಳಿಗೆ ಅಣ್ಣಾತೆ ಬಿಡುಗಡೆ

  ಈಗಾಗಲೇ ಅಣ್ಣಾತೆ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ಬ್ಯುಸಿಯಾಗಿದೆ. ಅಂದಹಾಗೆ ಈ ಸಿನಿಮಾ ಈ ವರ್ಷ ದೀಪಾಳಿಗೆ ತೆರೆಗೆ ಬರಲು ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಣ್ಣಾತೆ ದೀಪಾವಳಿಗೆ ಅಭಿಮಾನಿಗಳ ಮುಂದೆ ಬರಲಿದೆ.

  ಕನ್ನಡಾಭಿಮಾನಿಗಳ ಹೃದಯ ಗೆದ್ದಿರುವ ಖುಷ್ಬೂ

  ಕನ್ನಡಾಭಿಮಾನಿಗಳ ಹೃದಯ ಗೆದ್ದಿರುವ ಖುಷ್ಬೂ

  ನಟಿ ಖುಷ್ಬೂ ಕನ್ನಡದಲ್ಲೂ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಂದ್ರನ್ ನಟನೆಯ ರಣಧೀರ ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಖುಷ್ಬೂ ಮೊದಲ ಸಿನಿಮಾದಲ್ಲೇ ಕನ್ನಡಾಭಿಮಾನಿಗಳ ಹೃದಯ ಗೆದ್ದರು. ಬಳಿಕ ಅಂಜದ ಗಂಡು, ಯುಗ ಪುರುಷ, ಪ್ರೇಮಾಗ್ನಿ, ಹೃದಯ ಗೀತೆ, ಶಾಂತಿ ಕ್ರಾಂತಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಅದ್ಭುತ ಸಿನಿಮಾಗಳನ್ನು ನೀಡಿರುವ ಖುಷ್ಬೂ ಕೊನೆಯದಾಗಿ ಮ್ಯಾಜಿಕ್ ಅಜ್ಜಿ ಸಿನಿಮಾ ಮೂಲಕ ಮತ್ತೆ ಕನ್ನಡದಲ್ಲಿ ಮ್ಯಾಜಿಕ್ ಮಾಡಿದ್ದರು. ನಂತರ ಮತ್ತೆ ಖುಷ್ಬೂ ಕನ್ನಡ ಪ್ರೇಕ್ಷಕರ ಮುಂದೆ ಬಂದಿಲ್ಲ. ಮತ್ತೆ ಯಾವಾಗ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  English summary
  Actress Kushboo Sundar Fan Proposes to Marry Her; Actress Reply Goes Viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X