Don't Miss!
- Technology
PVRನಿಂದ ಭರ್ಜರಿ ಸಿಹಿಸುದ್ದಿ; ಸಿನಿಮಾ ಪ್ರಿಯರ ಕಣ್ಣಿಗೆ ಹಬ್ಬದ ಸಂಭ್ರಮ!
- Sports
Asia Cup 2023: ಪಾಕ್ನಲ್ಲಿ ಭಾರತ ಏಷ್ಯಾಕಪ್ ಆಡದಿದ್ದರೆ, ವಿಶ್ವಕಪ್ ಆಡಲ್ಲ; ಎಚ್ಚರಿಕೆ ನೀಡಿದ ಪಿಸಿಬಿ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮದುವೆ ಆಗ್ತಿದ್ದಂತೆ ಪತಿಗೆ ₹20 ಕೋಟಿ ಬಂಗಲೆ ಗಿಫ್ಟ್: ನಯನತಾರಾ ತಿರುಪತಿ ದರ್ಶನ!
ಲೇಡಿ ಸೂಪರ್‌ಸ್ಟಾರ್ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆನೇ ಒಂದು ಸಿನಿಮಾದಂತಿತ್ತು. ಇಬ್ಬರ ಲವ್ ಸ್ಟೋರಿ ರಿವೀಲ್ ಆಗುತ್ತಿದ್ದಂತೆ ಕಾಲಿವುಡ್‌ನ ಪ್ರಣಯ ಪಕ್ಷಿಗಳ ಮದುವೆಯನ್ನೇ ಅಭಿಮಾನಿಗಳು ಎದುರು ನೋಡುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಇಬ್ಬರ ಮದುವೆ ಆಗೇ ಬಿಟ್ಟರು ಅನ್ನುವಷ್ಟು ಸುದ್ದಿಯಾಗಿದ್ದರು.
ಕೊನೆಗೂ ಲೇಡಿ ಸೂಪರ್‌ಸ್ಟಾರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 09 ರಂದು ನಿರ್ದೇಶಕ ವಿಘ್ನೇಶ್ ಹಾಗೂ ನಯನತಾರಾ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ತಮಿಳುನಾಡಿನ ಮಹಾಬಲಿಪುರಂನ ಸ್ಟಾರ್ ಹೊಟೇಲ್‌ನಲ್ಲಿ ಈ ಜೋಡಿ ಅದ್ಧೂರಿಯಾಗಿ ಮದುವೆಯಾಗಿದೆ.
ಅಧಿಕೃತವಾಗಿ
ಮದುವೆಯಾದ
ನಯನತಾರಾ:
ವಿವಾಹಕ್ಕೆ
ಬಂದ
ವಿಜಯ್
ವಿಡಿಯೋ
ವೈರಲ್!
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯಾಗಿ ಒಂದು ದಿನದ ಬಳಿಕ ಮದುವೆಯಷ್ಟೇ ದುಬಾರಿ ಸುದ್ದಿಗಳು ಹೊರಬೀಳುತ್ತಿವೆ. ಪತಿ ವಿಘ್ನೇಶ್ ಶಿವನ್‌ಗೆ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮದುವೆ ಉಡುಗೊರೆಯನ್ನು ನೀಡಿದ್ದಾರಂತೆ. ಇದೇ ವಿಷಯವೀಗ ನ್ಯಾಷನಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ವಿಘ್ನೇಶ್‌ಗೆ ₹20 ಕೋಟಿ ಬಂಗಲೆ ಗಿಫ್ಟ್
ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆಯಾಗಿ ಇನ್ನೂ ಒಂದು ದಿನವೂ ಕಳೆದಿಲ್ಲ. ಆಗಲೇ ಮದುವೆಯ ಬಳಿಕ ವಿಘ್ನೇಶ್‌ಗೆ ಸಿಕ್ಕಿರುವ ಐಶಾರಾಮಿ ಉಡುಗೊರೆಗಳ ಬಗ್ಗೆನೇ ಸುದ್ದಿಯಾಗುತ್ತಿದೆ. ನಯನತಾರಾ ತನ್ನ ಪತಿ ವಿಘ್ನೇಶ್ ಶಿವನ್‌ಗೆ ಸುಮಾರು ₹20 ಕೋಟಿ ಬೆಲೆ ಬಾಳುವ ದುಬಾರಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಷಯ ಇವರಿಬ್ಬರ ಮದುವೆಗಿಂತ ಹೆಚ್ಚು ಚರ್ಚೆಯಾಗುತ್ತಿದೆ.
ಲೇಡಿ
ಸೂಪರ್‌ಸ್ಟಾರ್
ನಯನತಾರಾ
ವೃತ್ತಿ
ಬದುಕಿನ
ಕೆಲ
ಕರಾಳ
ಸತ್ಯಗಳು

ದಾಖಲಾತಿ ಕೆಲಸ ಮುಗಿದಿದೆ
ಹೌದು, ನೀವು ಕೇಳುತ್ತಿರುವ ಇದೇ ಸುದ್ದಿ ನ್ಯಾಷನಲ್ ಲೆವೆಲ್‌ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಕೆಲವು ವರದಿಗಳ ಪ್ರಕಾರ, ಬಂಗಲೆಯ ನೋಂದಣಿ ಕೆಲಸಗಳು ಕೂಡ ಮುಗಿದಿದೆ ಎನ್ನಲಾಗಿದೆ. ನಯನತಾರಾ ಖರೀದಿಸಿದ ಬಂಗಲೆಯನ್ನು ಈಗಾಗಲೇ ವಿಘ್ನೇಶ್ ಶಿವನ್ ಹೆಸರಿಗೆ ನೋಂದಣಿಯನ್ನು ಮಾಡಿಸಿದ್ದಾರಂತೆ ನಯನತಾರಾ. ಇನ್ನು ಈ ಬಂಗಲೆ ಎಲ್ಲಿದೆ? ಈ ಬಂಗಲೆಯ ವಿಶೇಷತೆಯೇನು? ಅನ್ನುವುದು ಇನ್ನಷ್ಟು ಕುತೂಹಲ ಕೆರಳಿಸಿದೆ.

ವಿಘ್ನೇಶ್ ಕುಟುಂಬಕ್ಕೆ ಉಡುಗೊರೆ
ನಯನತಾರಾ ಕೇವಲ ಪತಿ ವಿಘ್ನೇಶ್ ಶಿವನ್‌ಗೆ ದುವಾರಿ ಉಡುಗೊರೆಯನ್ನು ನೀಡಿಲ್ಲ. ವಿಘ್ನೇಶ್ ಸಹೋದರಿ ಐಶ್ವರ್ಯಾಗೆ 30 ಬಗೆಯ ಬಂಗಾರದ ಒಡವೆಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಇನ್ನೂ ಬೆಲೆ ಬಾಳುವ ಉಡುಗೊರೆಯನ್ನು ವಿಘ್ನೇಶ್ ಕುಟುಂಬಕ್ಕೆ ಅವರ ಹತ್ತಿರದ ಸಂಬಂಧಿಗಳಿಗೆ ನಯನತಾರಾ ನೀಡಿದ್ದಾರೆ.
ಹೊಸ
ಬಿಸಿನೆಸ್‌ಗೆ
ಕೈಯಿಟ್ಟ
ನಯನತಾರಾ:
100
ಕೋಟಿ
ಹೂಡಿಕೆ!

ಪತ್ನಿಗೆ ₹5 ಕೋಟಿ ಬೆಲೆಯ ಜ್ಯುವೆಲರಿ
ವಿಘ್ನೇಶ್ ಶಿವನ್ ಕೂಡ ನಯನತಾರಾಗೂ ದುಬಾರಿ ಉಡುಗೊರೆಯನ್ನೇ ನೀಡಿದ್ದಾರೆ. ಮದುವೆ ಸಮಾರಂಭದಲ್ಲಿ ನಯನತಾರಾ ತೊಟ್ಟ ಒಡವೆಗಳ ಒಟ್ಟು ಬೆಲೆ ₹2.5 ಕೋಟಿಯಿಂದ ₹3 ಕೋಟಿ ಎಂದು ಹೇಳಲಾಗುತ್ತಿದೆ. ಅಲ್ಲದೆ ನಯನತಾರಾಗಾಗಿ ₹5 ಕೋಟಿ ಬೆಲೆಯ ಡೈಮಂಡ್ ರಿಂಗ್ ಅನ್ನೂ ಉಡುಗೊರೆಯಾಗಿ ನೀಡಿದ್ದಾರಂತೆ.

ತಿರುಪತಿಯಲ್ಲಿ ನಯನತಾರಾ-ವಿಘ್ನೇಶ್
ವಿವಾಹದ ಬಳಿಕ ನಯನತಾರಾ ಹಾಗೂ ವಿಘ್ನೇಶ್ ಶಿವನ್ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ಆಶೀರ್ವಾದ ಪಡೆದಿದ್ದಾರೆ. ಹಳದಿ ಸೀರೆಯುಟ್ಟು ಪತಿ ವಿಘ್ನೇಶ್ ಕೈ ಹಿಡಿದು ನಯನತಾರಾ ದೇವರ ದರ್ಶನ ಪಡೆದಿದ್ದಾರೆ. ಮೂಲಗಳ ಪ್ರಕಾರ, ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ತಿರುಪತಿಯಲ್ಲಿಯೇ ವಿವಾಹವಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಇದು ಸಾಧ್ಯವಾಗಿರಲಿಲ್ಲ.