For Quick Alerts
  ALLOW NOTIFICATIONS  
  For Daily Alerts

  ನಟ ಸಿಂಬು ಚಿತ್ರಕ್ಕೆ ಸಾಥ್ ನೀಡಿದ ರಕ್ಷಿತ್ ಶೆಟ್ಟಿ, ನಿವಿನ್ ಪೌಲಿ

  |

  ತಮಿಳು ನಟ ಸಿಂಬು ಅಭಿನಯದ ಮಾನಡು ಚಿತ್ರದ ಟ್ರೈಲರ್ ಅಕ್ಟೋಬರ್ 2 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ. ನಿರ್ಮಾಪಕಿ ಸುರೇಶ್ ಕಾಮಾಕ್ಷಿ ಅವರು ಈ ಕುರಿತು ಮಾಹಿತಿ ನೀಡಿದ್ದು, ಮಾನಡು ಚಿತ್ರದ ಟ್ರೈಲರ್‌ ಬಿಡುಗಡೆಗೆ ದಕ್ಷಿಣದ ಖ್ಯಾತ ಕಲಾವಿದರು ಸಾಥ್ ಕೊಡಲಿದ್ದಾರೆ ಎಂದು ತಿಳಿಸಿದ್ದರು.

  ತಮಿಳಿನಲ್ಲಿ ತಯಾರಾಗುತ್ತಿರುವ ಈ ಚಿತ್ರ ತೆಲುಗು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲೂ ರಿಲೀಸ್ ಆಗುತ್ತಿರುವುದು ವಿಶೇಷ. ಇದೀಗ, ಮಾನಡು ಸಿನಿಮಾ ಟ್ರೈಲರ್‌ನ್ನು ಆಯಾ ಭಾಷೆಯಲ್ಲಿ ಸ್ಟಾರ್ ನಟರು ಬಿಡುಗಡೆ ಮಾಡುತ್ತಿದ್ದಾರೆ.

  ಹೊಸ ಚಿತ್ರಕ್ಕಾಗಿ ಭಾರಿ ತೂಕ ಇಳಿಸಿಕೊಂಡು ಅಚ್ಚರಿ ನೀಡಿದ ಸಿಂಬು ಹೊಸ ಚಿತ್ರಕ್ಕಾಗಿ ಭಾರಿ ತೂಕ ಇಳಿಸಿಕೊಂಡು ಅಚ್ಚರಿ ನೀಡಿದ ಸಿಂಬು

  ತಮಿಳಿನಲ್ಲಿ ಎಆರ್ ಮುರುಗದಾಸ್, ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಮಲಯಾಳಂ ಭಾಷೆಯಲ್ಲಿ ನಿವಿನ್ ಪೌಲಿ ಹಾಗೂ ತೆಲುಗಿನಲ್ಲಿ ನಾನಿ ಟ್ರೈಲರ್ ಲಾಂಚ್ ಮಾಡಲಿದ್ದಾರೆ. ಅಕ್ಟೋಬರ್ 2 ರಂದು ಬೆಳಗ್ಗೆ 11.25ಕ್ಕೆ ಮಾನಡು ಟ್ರೈಲರ್ ರಿಲೀಸ್ ಆಗಲಿದೆ.

  ಇದಕ್ಕೂ ಮುಂಚೆ ಮಾನಡು ಚಿತ್ರದ ಫಸ್ಟ್ ಲುಕ್ ಟೀಸರ್ ಅನಾವರಣ ಮಾಡಿದಾಗಲೂ ಸ್ಟಾರ್ ನಟರು ಸಪೋರ್ಟ್ ಮಾಡಿದ್ದರು. ತೆಲುಗಿನಲ್ಲಿ ನಟ ರವಿತೇಜ, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರ್, ಹಿಂದಿಯಲ್ಲಿ ಸ್ಟಾರ್ ನಿರ್ದೇಶಕ ಅನುರಾಗ್ ಕಶ್ಯಪ್ ಹಾಗೂ ಕನ್ನಡದಲ್ಲಿ ಕಿಚ್ಚ ಸುದೀಪ್ ಟೀಸರ್ ರಿಲೀಸ್ ಮಾಡಿದ್ದರು.

  ತಮಿಳು ನಟ ಸಿಂಬು ಹೊಸ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್ತಮಿಳು ನಟ ಸಿಂಬು ಹೊಸ ಚಿತ್ರಕ್ಕೆ ಸಾಥ್ ನೀಡಿದ ಕಿಚ್ಚ ಸುದೀಪ್

  ಮಾನಡು ಸಿನಿಮಾ ರಾಜಕೀಯ ಥ್ರಿಲ್ಲರ್ ಕಥೆ ಹೊಂದಿದೆ. ವೆಂಕಟ್ ಪ್ರಭು ಈ ಚಿತ್ರ ನಿರ್ದೇಶಿಸಿದ್ದು, ಸುರೇಶ್ ಕೆ. ನಿರ್ಮಾಣ ಮಾಡಿದ್ದಾರೆ. ಸಿಂಬು ಜೊತೆ ಕಲ್ಯಾಣಿ ಪ್ರಿಯಾದರ್ಶಿನಿ, ಎಸ್‌ಜೆ ಸೂರ್ಯ, ಭಾರತೀರಾಜ, ಎಸ್‌.ಎ. ಚಂದ್ರಶೇಖರ್, ಕರುಣಾಕರ್ಣನ್, ಮನೋಜ್ ಭಾರತೀರಾಜ, ಉದಯ, ಅರವಿಂದ್ ಆಕಾಶ್, ರವಿಕಾಂತ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ತಾರಬಳಗದಲ್ಲಿದ್ದಾರೆ.

  Maanaadu Trailer will be released on october 2nd

  ಅಂದ್ಹಾಗೆ, ಮಾನಡು ಚಿತ್ರ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ ಇದಕ್ಕೂ ಮುಂಚೆ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ದೀಪಾವಳಿಗೆ ಬರುವುದಾಗಿ ಘೋಷಿಸಿರುವ ಕಾರಣ ಸ್ವಲ್ಪ ಚಿಂತೆಗೆ ಬಿದ್ದಿದೆ.

  ಹೊಸ ಚಿತ್ರಕ್ಕೆ ತೂಕ ಇಳಿಸಿಕೊಂಡ ಸಿಂಬು

  ಗೌತಮ್ ಮೆನನ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರಕ್ಕಾಗಿ ನಟ ಸಿಂಬು ಅಚ್ಚರಿ ಎನ್ನುವಂತೆ ಬಾಡಿ ಟ್ರಾನ್ಸ್‌ಫರ್‌ಮೇಶನ್ ಮಾಡಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ದೇಹದ 15 ಕೆಜಿ ತೂಕ ಇಳಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ತೂಕ ಕಡಿಮೆ ಮಾಡಿಕೊಂಡಿರುವ ಫೋಟೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದರು.

  English summary
  Tamil Actor Silambarasan starrer Maanadu movie trailer will be released on october 2nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X