For Quick Alerts
  ALLOW NOTIFICATIONS  
  For Daily Alerts

  ತೆವಳುತ್ತಾ ಚಿತ್ರೀಕರಣ 'ಮುಗಿಸಿದ' ಮಾಗಿದ ನಿರ್ದೇಶಕ ಮಣಿರತ್ನಂ

  |

  ಭಾರತದ ಟಾಪ್ ನಿರ್ದೇಶಕರಲ್ಲಿ ಒಬ್ಬರಾದ ಮಣಿರತ್ನಂ ಅವರು ಎರಡು ವರ್ಷಗಳ ಬಳಿಕ ನಿರ್ದೇಶಕನ ಟೋಪಿ ಧರಿಸಿದ್ದಾರೆ. ಭಾರಿ ಬಜೆಟ್‌ನ ಬಹುತಾರಾಗಣದ ಐತಿಹಾಸಿಕ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ನಿರ್ದೇಶಿಸುತ್ತಿದ್ದಾರೆ ಮಣಿರತ್ನಂ.

  ಈ ಸಿನಿಮಾದ ಚಿತ್ರೀಕರಣ ಬಹುನಿಧಾನವಾಗಿ ಸಾಗುತ್ತಿದೆ. ದೊಡ್ಡ-ದೊಡ್ಡ ಸ್ಟಾರ್ ನಟರುಗಳು ಸಿನಿಮಾದಲ್ಲಿ ಇರುವ ಕಾರಣ ಡೇಟ್ಸ್ ಸಮಸ್ಯೆ ಇತರ ಸಮಸ್ಯೆಗಳು ಮಣಿರತ್ನಂ ಅವರನ್ನು ಕಾಡಿವೆ. ಎಲ್ಲದಕ್ಕೂ ಮುಖ್ಯವಾಗಿ ಕೊರೊನಾ ಕಾರಣಕ್ಕೆ ಸಿನಿಮಾದ ಚಿತ್ರೀಕರಣ ಸಾಕಷ್ಟು ತಡವಾಗಿದೆ.

  ಇದೀಗ ಸಿನಿಮಾದ ಬಹುದೊಡ್ಡ ಶೆಡ್ಯೂಲ್ ಅನ್ನು ಅಂತೂ ಮುಗಿಸಿದ್ದಾರೆ ನಿರ್ದೇಶಕ ಮಣಿರತ್ನಂ. ಕೆಲವು ತಿಂಗಳಿನಿಂದ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿ ಸೆಟ್ ಹಾಕಿ ಸತತವಾಗಿ ಚಿತ್ರೀಕರಣದಲ್ಲಿ ತೊಡಗಿದ್ದರು ಮಣಿರತ್ನಂ. ಕೊನೆಗೆ ರಾಮೋಜಿ ರಾವ್ ಫಿಲಂ ಸಿಟಿಯಲ್ಲಿನ ಚಿತ್ರೀಕರಣವನ್ನು ಮುಗಿಸಿದ್ದಾರೆ.

  ಹಾಗೆಂದು ಸಿನಿಮಾದ ಪೂರ್ಣ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಇನ್ನೂ ಬಹಳಷ್ಟು ಭಾಗದ ಚಿತ್ರೀಕರಣ ಬಾಕಿ ಇದೆ. ಅದೆಲ್ಲವೂ ಮುಗಿಯುವ ವೇಳೆಗೆ ಈ ವರ್ಷಾಂತ್ಯ ಸನಿಹಕ್ಕೆ ಬಂದಿರುತ್ತದೆ.

  'ಪೊನ್ನಿಯಿನ್ ಸೆಲ್ವನ್' ಸಿನಿಮಾವು ಅದೇ ಹೆಸರಿನ ಕಾದಂಬರಿ ಆಧರಿತ ಸಿನಿಮಾ ಆಗಿದೆ. ಈ ಸಿನಿಮಾದಲ್ಲಿ ಐಶ್ವರ್ಯಾ ರೈ, ಚಿಯಾನ್ ವಿಕ್ರಂ, ತ್ರಿಷಾ, ಜಯಂ ರವಿ, ಕಾರ್ತಿ, ಐಶ್ವರ್ಯ ಲಕ್ಷ್ಮಿ, ಸೋಬಿತ್ ಧುಲಿಪಾಲ, ಪ್ರಭು, ಪ್ರಕಾಶ್ ರೈ, ವಿಕ್ರಮ್ ಪ್ರಭು ಅವರುಗಳು ನಟಿಸಲಿದ್ದಾರೆ. ಇದೇ ಸಿನಿಮಾ ಮೂಲಕ ಅಜಿತ್ ಪತ್ನಿ ಶಾಲಿನಿ ಅಜಿತ್ ಮರಳಿ ಸಿನಿಮಾಕ್ಕೆ ಬರಲಿದ್ದಾರೆ ಎನ್ನಲಾಗುತ್ತಿದೆ.

  ಉ.ಕರ್ನಾಟಕದ ಜನ ಮಾಡಿದ ಸಹಾಯ ನೆನಪಿಸಿಕೊಂಡ ಡಿ ಬಾಸ್ | Roberrt Pre Release Event Hubli | Filmibeat Kannada

  ಹಲವಾರು ಸಿನಿಮಾಗಳಲ್ಲಿ ಬಾಲನಟಿಯಾಗಿ ಹಾಗೂ ನಾಯಕ ನಟಿಯಾಗಿ ನಟಿಸಿದ್ದ ಶಾಲಿನಿ ಅಜಿತ್ 2001 ರಲ್ಲಿ ಕೊನೆಯ ಸಿನಿಮಾದಲ್ಲಿ ನಟಿಸಿದ್ದರು. ಮದುವೆ ಆದ ಬಳಿಕ ಸಿನಿಮಾ ರಂಗದಿಂದ ದೂರ ಉಳಿದರು ಶಾಲಿನಿ. ಈ ಹಿಂದೆ ಮಣಿರತ್ನಂ ನಿರ್ದೇಶನದ 'ಅಲೈಪಾಯುತೆ' ಸಿನಿಮಾದಲ್ಲಿ ನಟಿಸಿದ್ದರು ಶಾಲಿನಿ.

  English summary
  Ponniyin Selvam movie latest schedule wrapped up recently. Movie crew posted photos on social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X