For Quick Alerts
  ALLOW NOTIFICATIONS  
  For Daily Alerts

  50 ದಿನ ಪೂರೈಸಿದ 'ಪೊನ್ನಿಯಿನ್ ಸೆಲ್ವನ್': 500 ಕೋಟಿ ಗಳಿಸಿದ್ರು ಪ್ಯಾನ್ ಇಂಡಿಯಾ ಹಿಟ್ ಆಗಲಿಲ್ಲ!

  |

  'ಕಾಂತಾರ' ಸಿನಿಮಾ ಜೊತೆಗೆ ತೆರೆಗಪ್ಪಳಿಸಿದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಕೂಎ 50 ದಿನ ಕಂಪ್ಲೀಟ್ ಮಾಡಿದೆ. ಮಣಿರತ್ನಂ ನಿರ್ದೇಶನದ ಈ ಕಾಸ್ಟ್ಯೂಮ್ ಡ್ರಾಮಾ ಬರೋಬ್ಬರಿ 500 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆದರೆ ಇದನ್ನು ಪ್ಯಾನ್ ಇಂಡಿಯಾ ಹಿಟ್ ಎಂದು ಒಪ್ಪಲು ಸಾಧ್ಯವಿಲ್ಲ.

  ಚಿಯಾನ್ ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ ಹಾಗೂ ತ್ರಿಷಾರಂತಹ ಘಟಾನುಘಟಿ ಕಲಾವಿದರು ನಟಿಸಿದ ಸಿನಿಮಾ 'ಪೊನ್ನಿಯಿನ್ ಸೆಲ್ವನ್'. ಕಲ್ಲಿ ಕೃಷ್ಣಮೂರ್ತಿ ಬರೆದ ಕಾದಂಬರಿ ಆಧರಿಸಿ ಮಣಿರತ್ನಂ ಈ ಸಿನಿಮಾ ತೆರೆಗೆ ತಂದಿದ್ದರು. ಲೈಕಾ ಪ್ರೊಡಕ್ಷನ್ ಹಾಗೂ ಮದ್ರಾಸ್ ಟಾಕೀಸ್ ಸಂಸ್ಥೆಗಳು ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದವು. 200 ಕೋಟಿಗೂ ಅಧಿಕ ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ತಯಾರಾಗಿತ್ತು. ತಮಿಳುನಾಡಿನಲ್ಲಿ ಸಿನಿಮಾ ಅದ್ಭುತ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತ್ತು.

  'ಕಾಂತಾರ' ಗೆಲುವನ್ನು ಪಂಜುರ್ಲಿ,ಗುಳಿಗ ದೈವಗೆ ಅರ್ಪಿಸಿದ ರಿಷಬ್ ಶೆಟ್ಟಿ: 50 ದಿನದಲ್ಲಾದ ಕಲೆಕ್ಷನ್ ಇಷ್ಟು!'ಕಾಂತಾರ' ಗೆಲುವನ್ನು ಪಂಜುರ್ಲಿ,ಗುಳಿಗ ದೈವಗೆ ಅರ್ಪಿಸಿದ ರಿಷಬ್ ಶೆಟ್ಟಿ: 50 ದಿನದಲ್ಲಾದ ಕಲೆಕ್ಷನ್ ಇಷ್ಟು!

  ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸೆಪ್ಟೆಂಬರ್ 30ರಂದು ತೆರೆಗೆ ಬಂದಿತ್ತು. ವಿಶ್ವದಾದ್ಯಂತ ಬಹಳ ದೊಡ್ಡಮಟ್ಟದಲ್ಲೇ ಸಿನಿಮಾ ರಿಲೀಸ್ ಆಗಿತ್ತು. ಆದರೆ ಎಲ್ಲಾ ಕಡೆ ಚಿತ್ರಕ್ಕೆ ಒಳ್ಳೆ ಓಪನಿಂಗ್ ಸಿಗಲಿಲ್ಲ. ತಮಿಳುನಾಡು ಬಿಟ್ಟರೆ ಬೇರೆ ಕಡೆಗಳಲ್ಲಿ ಸಿನಿಮಾ ಒಳ್ಳೆ ಪರ್ಫಾರ್ಮೆನ್ಸ್ ಮಾಡಲಿಲ್ಲ. 'ಪೊನ್ನಿಯಿನ್ ಸೆಲ್ವನ್' ಹೆಸರಿನಲ್ಲೇ ಇರುವ ಕಾದಂಬರಿ ಬಹಳ ಹೆಸರು ಮಾಡಿತ್ತು. 1000 ವರ್ಷಗಳ ಹಿಂದಿನ ಚೋಳರ ಸಾಮ್ರಾಜ್ಯದ ಕಥೆಯನ್ನು ಆಧರಿಸಿ ಕಲ್ಕಿ ಕೃಷ್ಣಮೂರ್ತಿ ಕಾದಂಬರಿ ಬರೆದಿದ್ದರು. ಕಾದಂಬರಿ ಓದಿದವರು ಸಿನಿಮಾ ಹೇಗೆ ಮಾಡಿದ್ದಾರೆ ಎಂದು ಮುಗಿಬಿದ್ದು ನೋಡಿದ್ದರು.

  ಕಲ್ಕಿ ಕೃಷ್ಣಮೂರ್ತಿ ಕಾದಂಬರಿಯನ್ನು ಮಣಿರತ್ನಂ ಎಷ್ಟರಮಟ್ಟಿಗೆ ತೆರೆಗೆ ತಂದಿದ್ದಾರೆ ಎಂದು ಕುತೂಹಲದಿಂದ ನೋಡಿದ್ದರು. ಬಹುತೇಕರು ಮೆಚ್ಚಿಕೊಂಡರು. ವಿಕ್ರಂ, ಐಶ್, ಕಾರ್ತಿ, ರವಿ, ತ್ರಿಷಾ ಎಲ್ಲರೂ ಅದ್ಭುತ ಅಭಿನಯ ಪ್ರದರ್ಶಿಸಿದ್ದರು. ಎಲ್ಲಾ ವಿಭಾಗಗಳಲ್ಲೂ ಸಿನಿಮಾ ಫಸ್ಟ್ ಕ್ಲಾಸ್ ಎನ್ನಿಸಿಕೊಂಡಿತ್ತು. ಆದರೆ ತಮಿಳು ಪ್ರೇಕ್ಷಕರಿಗೆ ಬಿಟ್ಟರೆ ಉಳಿದವರಿಗೆ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಇಷ್ಟವಾಗಲಿಲ್ಲ. ಬಹುತೇಕರು ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಜೊತೆಗೆ ಹೋಲಿಸಿ ನೋಡಿದ್ದರು. ಹಾಗಾಗಿ ಸಹಜವಾಗಿಯೇ ನಿರಾಸೆ ಎದುರಾಗಿತ್ತು. ತೆಲುಗು ಪ್ರೇಕ್ಷಕರು ಚೆನ್ನಾಗಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಿದ್ದರು.

  'ಪೊನ್ನಿಯಿನ್ ಸೆಲ್ವನ್' 500 ಕೋಟಿ ಕಲೆಕ್ಷನ್ ಮಾಡಿರೋದಾಗಿ ಚಿತ್ರತಂಡ ಘೋಷಿಸಿದೆ. ಆದರೆ ಅದರಲ್ಲಿ ಬಹುತೇಕ ಕಲೆಕ್ಷನ್ ಆಗಿರೋದು ಬರೀ ತಮಿಳುನಾಡಿನಲ್ಲಿ. ಬಾಲಿವುಡ್, ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ ಮಣಿರತ್ನಂ ಸಿನಿಮಾ ಹವಾ ನಡೆಯಲೇ ಇಲ್ಲ. ಸಿನಿಮಾ ರಿಲೀಸ್ ಆಗಿ 2 ವಾರಕ್ಕೆ ಬೇರೆ ರಾಜ್ಯಗಳಲ್ಲಿ ಸೈಲೆಂಟ್ ಆಗಿತ್ತು. ಓವರ್‌ಸೀಸ್‌ನಲ್ಲಿ ಪರವಾಗಿಲ್ಲ ಎನ್ನಿಸಿಕೊಂಡಿತ್ತು. ಇದೇ ಕಾರಣಕ್ಕೆ 500 ಕೋಟಿ ಗಳಿಸಿದರೂ 'ಪೊನ್ನಿಯಿನ್ ಸೆಲ್ವನ್' ಪ್ಯಾನ್ ಇಂಡಿಯಾ ಹಿಟ್ ಅಲ್ಲ, ಬರೀ ತಮಿಳುನಾಡು ಹಿಟ್ ಎನ್ನುತ್ತಿದ್ದಾರೆ.

  50 ದಿನ ಪೂರೈಸುವುದಕ್ಕೂ ಮೊದಲೇ ಸಿನಿಮಾ ಓಟಿಟಿಗೆ ಬಂದು ಬಿಡ್ತು. ಸಿನಿಮಾ ಕಲೆಕ್ಷನ್ ಬಗ್ಗೆ ಅನುಮಾನ ವ್ಯಕ್ತಪಡಿಸುವವರು ಕೂಡ ಇದ್ದಾರೆ. ಕೇವಲ 16 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ 'ಕಾಂತಾರ' ಸಿನಿಮಾ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. 50 ದಿನ ಪೂರೈಸಿ ಸಿನಿಮಾ ಇಂದಿಗೂ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಪರಭಾಷಿಕರಿಂದ ಸಿಕ್ಕಿದ ರೆಸ್ಪಾನ್ಸ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ತಮಿಳುನಾಡಿನಲ್ಲೇ 100 ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ 4 ವಾರ ಪೂರೈಸಿದೆ. ಹಾಗಾಗಿ 'ಕಾಂತಾರ' ನಿಜಕ್ಕೂ ಪ್ಯಾನ್ ಇಂಡಿಯಾ ಹಿಟ್ ಸಿನಿಮಾ ಎನ್ನಬಹುದು.

  Mani Ratnam directed Ponniyin Selvan Movie Completes 50 Days

  'ಪೊನ್ನಿಯಿನ್ ಸೆಲ್ವನ್' ಕಾದಂಬರಿ ಬಹಳ ದೊಡ್ಡದು. ಅಷ್ಟು ಕಥೆಯನ್ನು ಒಂದೇ ಸಿನಿಮಾದಲ್ಲಿ ಹೇಳಲು ಸಾಧ್ಯವಿಲ್ಲ ಎಂದೇ ಇಷ್ಟು ದಿನ ಯಾರು ಕೂಡ ಕಥೆಯನ್ನು ಸಿನಿಮಾ ಮಾಡುವ ಸಾಹಸ ಮಾಡಿರಲಿಲ್ಲ. ಇದೀಗ 2 ಭಾಗಗಳಾಗಿ ಮಣಿರತ್ನಂ ಸಿನಿಮಾ ಕಟ್ಟಿಕೊಟ್ಟಿದ್ದಾರೆ. 2ನೇ ಭಾಗದ ಚಿತ್ರೀಕರಣ ಕೂಡ ಬಹುತೇಕ ಮುಕ್ತಾಯವಾಗಿದೆ. ಏಪ್ರಿಲ್ ಕೊನೆವಾರದಲ್ಲಿ 'ಪೊನ್ನಿಯಿನ್ ಸೆಲ್ವನ್' - 2 ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

  English summary
  Mani Ratnam directed Ponniyin Selvan Movie Completes 50 Days. PS1 Movie Hit Only in Tamil nadu. Ponniyin Selvan -1 has grossed 500 crore globally. Know more.
  Saturday, November 19, 2022, 6:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X