For Quick Alerts
  ALLOW NOTIFICATIONS  
  For Daily Alerts

  ರಾಕಿ ಭಾಯ್‌, ಬಾಹುಬಲಿಗಿಂತ ಸ್ಪೀಡ್ 'ಪೊನ್ನಿಯನ್ ಸೆಲ್ವನ್': ಸೀಕ್ವೆಲ್ ರಿಲೀಸ್ ಡೇಟ್ ಬಂದೇಬಿಡ್ತು

  |

  ಮಣಿರತ್ನಂ ನಿರ್ದೇಶನದ ಐತಿಹಾಸಿಕ ಕಥಾಹಂದರದ 'ಪೊನ್ನಿಯನ್ ಸೆಲ್ವನ್' ಸಿನಿಮಾ ದಸರಾ ಸಂಭ್ರಮದಲ್ಲಿ ತೆರಗಪ್ಪಳಿಸಿತ್ತು. 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಚಿತ್ರದ ಚಿತ್ರದ ಸೀಕ್ವೆಲ್ ರಿಲೀಸ್ ಡೇಟ್ ಘೋಷಿಸಿದೆ.

  ಕಲ್ಕಿ ಕೃಷ್ಣ ಮೂರ್ತಿ ಬರೆದ ಕಾದಂಬರಿ ಆಧರಿಸಿ ಈ ಸಿನಿಮಾ ನಿರ್ಮಾಣ ಆಗಿತ್ತು. ವಿಕ್ರಂ, ಐಶ್ವರ್ಯ ರೈ, ಕಾರ್ತಿ, ಜಯಂ ರವಿ, ತ್ರಿಷಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಚಿತ್ರದಲ್ಲಿ ಚೋಳರು ಮತ್ತು ಪಾಂಡ್ಯರ ಕಥೆ ಹೇಳಲಾಗಿತ್ತು. ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದವು. 250 ಕೋಟಿ ಬಜೆಟ್‌ನಲ್ಲಿ 2 ಭಾಗಗಳಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಮೊದಲ ಭಾಗ ಬಿಡುಗಡೆಯಾಗಿ 7 ತಿಂಗಳಿಗೆ 2ನೇ ಭಾಗ ತೆರೆಗೆ ಬರ್ತಿದೆ.

  "ಸಾಯಿಸಿ ಬಿಡ್ತೀವಿ ಎಂದು ಹೆದರಿಸಿದ್ದರು.. ಭಾರತಕ್ಕೆ ಬರೋದೇ ಅನುಮಾನ ಅಂದುಕೊಂಡಿದ್ದೆ": ಸನ್ನಿ ಲಿಯೋನ್

  ಈಗಾಗಲೇ 'PS1' ನೋಡಿದವರು 'PS2' ಸಿನಿಮಾ ನೋಡಲು ಕಾಯುತ್ತಿದ್ದಾರೆ. ಒಮ್ಮೆಲೆ 2 ಭಾಗಗಳ ಚಿತ್ರೀಕರಣ ನಡೆದಿತ್ತು. ಸೀಕ್ವೆಲ್‌ನಲ್ಲಿ ಉಳಿದಿರುವ ಸನ್ನಿವೇಶಗಳ ಚಿತ್ರೀಕರಣ ಈಗ ನಡೀತಿದೆ. ಆದಷ್ಟು ಬೇಗ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸಿನಿಮಾ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ.

  ಏಪ್ರಿಲ್ 28ಕ್ಕೆ 'PS2' ರಿಲೀಸ್

  ಏಪ್ರಿಲ್ 28ಕ್ಕೆ 'PS2' ರಿಲೀಸ್

  ಸಮ್ಮರ್‌ನಲ್ಲಿ 'PS2' ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಮುಂದಿನ ವರ್ಷ ಏಪ್ರಿಲ್ 28ಕ್ಕೆ ಪೊನ್ನಿಯಿನ್ ಸೆಲ್ವನ್ ಕಥೆ ಮುಂದುವರೆಯಲಿದೆ. ಮೊದಲ ಚಿತ್ರಕ್ಕೆ ದೇಶದ ವಿವಿಧ ನಗರಗಳಲ್ಲಿ ಸುತ್ತಾಡಿ ಚಿತ್ರತಂಡ ಪ್ರಚಾರ ಮಾಡಿತ್ತು. ಇದೀಗ ಸೀಕ್ವೆಲ್ ವಿಚಾರದಲ್ಲೂ ಅದೇ ರೀತಿಯ ಪ್ಲ್ಯಾನ್ ನಡೀತಿದೆ. ಸೆಪ್ಟೆಂಬರ್ 30ಕ್ಕೆ ಪ್ರೀಕ್ವೆಲ್ ರಿಲೀಸ್ ಆಗಿತ್ತು. 7 ತಿಂಗಳ ನಂತರ ಸೀಕ್ವೆಲ್ ಪ್ರೇಕ್ಷಕರ ಮುಂದೆ ಬರ್ತಿದೆ. ಇಷ್ಟು ದೊಡ್ಡ ಸಿನಿಮಾ ಸೀಕ್ವೆಲ್‌ನ ಇಷ್ಟು ಬೇಗ ತೆರೆಗೆ ತರುತ್ತಿರುವುದು ಇದೇ ಮೊದಲು.

  "ವಿಜಯ್ ನಂ 1 ಸ್ಟಾರ್ ಹೆಚ್ಚು ಥಿಯೇಟರ್ ಕೊಡಿ" ಎಂದು ದಿಲ್ ರಾಜು: ಅಜಿತ್ ಫ್ಯಾನ್ಸ್ ಅಕ್ರೋಶ!

  500 ಕೋಟಿ ಬಾಚಿದ್ದ ಸಿನಿಮಾ

  500 ಕೋಟಿ ಬಾಚಿದ್ದ ಸಿನಿಮಾ

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ಎಲ್ಲಾ ವಿಭಾಗದಲ್ಲೂ ಅದ್ಭುತ ಅನ್ನಿಸಿಕೊಂಡಿತ್ತು. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಒಟ್ಟು 500 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಆದರೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಸಕ್ಸಸ್ ಕಾಣಲಿಲ್ಲ. ಚಿತ್ರದ ಬಹುತೇಕ ಕಲೆಕ್ಷನ್ ತಮಿಳುನಾಡಿನಿಂದಲೇ ಬಂದಿತ್ತು. ಹೊರ ರಾಜ್ಯಗಳಲ್ಲಿ ಸಿನಿಮಾ ಸದ್ದು ಮಾಡಲೇಯಿಲ್ಲ. ಟಾಲಿವುಡ್ ಮಂದಿ 'ಬಾಹುಬಲಿ' ಜೊತೆ ಹೋಲಿಸಿ 'ಪೊನ್ನಿಯಿನ್ ಸೆಲ್ವನ್' ಚಿತ್ರವನ್ನು ಟ್ರೋಲ್ ಮಾಡಿದ್ದರು.

  'PS2' ಟೀಸರ್ ರಿಲೀಸ್

  'PS2' ಟೀಸರ್ ರಿಲೀಸ್

  ಸೀಕ್ವೆಲ್ ಸಿನಿಮಾದ ಸಣ್ಣ ಟೀಸರ್ ಝಲಕ್ ಶೇರ್ ಮಾಡಿ ಚಿತ್ರತಂಡ ರಿಲೀಸ್ ಡೇಟ್ ಘೋಷಿಸಿದೆ. ಟೀಸರ್‌ನಲ್ಲಿ ಆದಿತ್ಯ ಕರಿಕಾಲನ್ ವಿಕ್ರಂ, ಅರುಲ್‌ಮೊಳಿ ವರ್ಮನ್, ಜಯಂ ರವಿ, ವಲ್ಲವರಾಯ ವಂದಿಯದೇವನ್ ಕಾರ್ತಿ ಹಾಗೂ ನಂದಿನಿ ಐಶ್ವರ್ಯ ರೈ ಝಲಕ್ ನೋಡಬಹುದು. ಎ. ಆರ್ ರೆಹಮಾನ್ ಮ್ಯೂಸಿಕ್‌ನಲ್ಲಿ ಈ ಕಾಸ್ಟ್ಯೂಮ್ ಡ್ರಾಮಾ ಮತ್ತಷ್ಟು ಅದ್ಭುತ ಅನುಭವ ನೀಡುವಂತಿದೆ. ಪ್ರೀಕ್ವೆಲ್‌ನಲ್ಲಿ ಪಾತ್ರಗಳ ಪರಿಚಯದ ಜೊತೆಗೆ ಕಥೆಗೆ ಪೀಠಿಕೆ ಹಾಕಲಾಗಿದೆ. ಸೀಕ್ವೆಲ್‌ನಲ್ಲಿ ಮಣಿರತ್ನಂ ಅಸಲಿ ಕಥೆ ಹೇಳಲು ಬರ್ತಿದ್ದಾರೆ.

  ಬಿಗ್ ಬಾಕ್ಸಾಫೀಸ್ ಕ್ಲ್ಯಾಶ್

  ಬಿಗ್ ಬಾಕ್ಸಾಫೀಸ್ ಕ್ಲ್ಯಾಶ್

  ಏಪ್ರಿಲ್ ಕೊನೆ ವಾರದಲ್ಲಿ ಮತ್ತೆರಡು ದೊಡ್ಡ ಸಿನಿಮಾಗಳ ರಿಲೀಸ್ ಡೇಟ್ ಘೋಷಣೆ ಆಗಿದೆ. 'PS2' ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ 3 ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ. ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಹಾಗೂ ಮಹೇಸ್ ಬಾಬು - ತ್ರಿವಿಕ್ರಮ್ ಕಾಂಬಿನೇಷನ್‌ ಸಿನಿಮಾ ಅದೇ ಸಮಯಕ್ಕೆ ತೆರೆಗೆ ಬರಲಿದೆ.

  English summary
  Maniratnam Directed PS2 will hit the big screens on 28 April 2023. Multi Starrer Ponniyin Selvan 2 First glimpse Also Released. Know more.
  Wednesday, December 28, 2022, 18:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X