For Quick Alerts
  ALLOW NOTIFICATIONS  
  For Daily Alerts

  ತಮಿಳು ಸಿನಿಮಾರಂಗ ವೇಶ್ಯಾಗೃಹ ಇದ್ದಂತೆ: ಮೋದಿಗೆ ದೂರು ಹೇಳಿದ ನಟಿ

  By ಫಿಲ್ಮಿಬೀಟ್ ಡೆಸ್ಕ್
  |

  ತಮಿಳುನಾಡಿನಲ್ಲಿ ಮೀರಾ ಮಿಥುನ್ ಹೆಸರಿನ ನಟಿ ಕಮ್ ಮಾಡೆಲ್ ಒಬ್ಬರಿದ್ದಾರೆ ಕೇವಲ ತಮ್ಮ ವಿವಾದಾತ್ಮಕ ಹೇಳಿಕೆಗಳು, ಗ್ಲಾಮರಸ್ ಚಿತ್ರಗಳಿಂದಷ್ಟೆ ಅವರು ಖ್ಯಾತರು.

  ಸುದ್ದಿಯಲ್ಲಿರುರಬೇಕೆಂಬ ಹಂಬಲದಿಂದ ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ನಟಿ ಈಗ ಎಲ್ಲೆ ಮೀರಿ ಇಡೀಯ ತಮಿಳು ಚಿತ್ರೋದ್ಯಮವನ್ನೇ ಕೀಳು ಅಭಿರುಚಿಯಿಂದ ಕೂಡಿದ ಬೈಗುಳ ಬಳಸಿ ಬೈದಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ದೂರು ಸಹ ಹೇಳಿದ್ದಾರೆ.

  ದಕ್ಷಿಣ ಭಾರತದ ಹಳೆಯ ಹಾಗೂ ಶ್ರೀಮಂತ ಚಿತ್ರೋದ್ಯಮ ಎನಿಸಿಕೊಂಡಿರುವ ತಮಿಳು ಚಿತ್ರೋದ್ಯಮವನ್ನು ವೇಶ್ಯಾಗೃಹಕ್ಕೆ ಮೀರಾ ಮಿಥುನ್ ಹೋಲಿಸಿದ್ದಾರೆ. ತಮಿಳುನಾಡಿನಲ್ಲಿ ನನ್ನ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಸಹ ಆರೋಪಿಸಿದ್ದಾರೆ. ನಟಿಯ ಈ ಹೇಳಿಕೆಗೆ ತಮಿಳುನಾಡಿನ ಸಿನಿ ಪ್ರೇಕ್ಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

  ವಿಡಿಯೋ ಪ್ರಕಟಿಸಿರುವ ಮೀರಾ ಮಿಥುನ್, ತನ್ನನ್ನು ತಾನು ಭಾರತದ ಸೂಪರ್ ಮಾಡೆಲ್ ಎಂದು ಸಂಭೋಧಿಸಿಕೊಂಡು, ಪ್ರಧಾನಿ ಮೋದಿಗೆ ತಮಿಳುನಾಡು ಹಾಗೂ ಅಲ್ಲಿನ ಚಿತ್ರರಂಗದ ಕುರಿತಾಗಿ ದೂರುಗಳನ್ನು ಹೇಳಿದ್ದಾರೆ. ''ತಮಿಳುನಾಡಿನಲ್ಲಿ ಮಹಿಳೆಯರ ಮೇಲೆ ಪ್ರತಿ ಸೆಕೆಂಡ್‌ ದೌರ್ಜನ್ಯ ನಡೆಯುತ್ತಿದೆ. ಅದರಲ್ಲಿಯೂ ತಮಿಳುನಾಡು ಸಿನಿಮಾ ಉದ್ಯಮವಂತೂ ವೇಶ್ಯಾಗೃಹದಂದಾತಿಗಿದ್ದು, ಸ್ವಜನಪಕ್ಷಪಾತ ಎನ್ನುವುದು ಅತಿಯಾಗಿದೆ'' ಎಂದಿದ್ದಾರೆ.

  ''ನಾನು ಮೇಲ್ವರ್ಗದ, ಶ್ರೀಮಂತ ಕುಟುಂಬದ ಯುವತಿ''

  ''ನಾನು ಮೇಲ್ವರ್ಗದ, ಶ್ರೀಮಂತ ಕುಟುಂಬದ ಯುವತಿ''

  ''ಮಹಿಳೆಯರ ಪ್ರಗತಿ, ಮಹಿಳೆಯರಿಗೆ ಅವಕಾಶ ಎನ್ನುವುದು ತಮಿಳುನಾಡಿನಲ್ಲಿ ಇಲ್ಲೇ ಇಲ್ಲ. ನಾನು ಭಾರತದ ಸೂಪರ್ ಮಾಡೆಲ್ ಹಾಗೂ ಯುವ ಮಹಿಳಾ ಉದ್ಯಮಿಯೂ ಆಗಿದ್ದೇನೆ. ನನಗೆ ಸಹ ತಮಿಳುನಾಡಿನಲ್ಲಿ ಹಲವು ಪುರುಷರು ಬಹಳಷ್ಟು ಕಾಟ ಕೊಟ್ಟಿದ್ದಾರೆ. ಅದರಲ್ಲಿಯೂ ತಮಿಳುನಾಡು ಸಿನಿಮಾ ಉದ್ಯಮದವರು ನನಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಮೊದಲೇ ಹೇಳಿದಂತೆ ತಮಿಳುನಾಡು ಸಿನಿಮಾ ಉದ್ಯಮ ವೇಶ್ಯಾಗೃಹವಾಗಿದೆ. ನಾನು ಮೇಲ್ವರ್ಗದ, ಶ್ರೀಮಂತ ಕುಟುಂಬದಿಂದ ಬಂದವಳಾದ್ದರಿಂದ ಪುರುಷರು ನನ್ನ ಬಳಿ ಲಘುವಾಗಿ ಮಾತನಾಡುವುದು ನನಗೆ ಇಷ್ಟವಾಗುವುದಿಲ್ಲ'' ಎಂದಿದ್ದಾರೆ ಮೀರಾ ಮಿಥುನ್.

  ''ಯಶಸ್ವಿ, ಬುದ್ಧಿವಂತ ಯುವತಿಯಾದ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ''

  ''ಯಶಸ್ವಿ, ಬುದ್ಧಿವಂತ ಯುವತಿಯಾದ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ''

  ''ತಮಿಳುನಾಡಿನಲ್ಲಿ ಮಹಿಳೆಯರ ಮೇಲೆ ಸತತ ದೌರ್ಜನ್ಯ ಆಗುತ್ತಿರುವ ಕಾರಣ ತಾವುಗಳು ದಯವಿಟ್ಟು ತಮಿಳುನಾಡು ಮಹಿಳೆಯರ ಸುರಕ್ಷತೆಗಾಗಿ ಗಟ್ಟಿಯಾದ ಕಾಯ್ದೆಯೊಂದನ್ನು ತನ್ನಿ. ನಾನು ಹಲವು ರಾಜ್ಯಗಳಲ್ಲಿ ಓಡಾಡಿದ್ದೇನೆ, ಹಲವು ರಾಷ್ಟ್ರಗಳಲ್ಲಿ ತಂಗಿದ್ದೇನೆ. ಆದರೆ ನಾನು ಹುಟ್ಟಿ ಬೆಳೆದ ತಮಿಳುನಾಡಿನಲ್ಲಿಯೇ ನನ್ನನ್ನು ಹೆಚ್ಚು ಟಾರ್ಗೆಟ್ ಮಾಡಲಾಗುತ್ತಿದೆ. ನಾನೊಬ್ಬ ಯಶಸ್ವಿ, ಬುದ್ಧಿವಂತ ಹಾಗೂ ಇದ್ದದ್ದನ್ನು ಇದ್ದಂತೆ ಹೇಳುವ ಯುವತಿ ಆಗಿರುವುದೇ ಇದಕ್ಕೆ ಕಾರಣ'' ಎಂದಿದ್ದಾರೆ ಮೀರಾ ಮಿಥುನ್.

  ನನ್ನಂತೆ ಮುಖಚಹರೆ ಬದಲಾಯಿಸಿಕೊಳ್ಳುತ್ತಿದ್ದಾರೆ: ಮೀರಾ

  ನನ್ನಂತೆ ಮುಖಚಹರೆ ಬದಲಾಯಿಸಿಕೊಳ್ಳುತ್ತಿದ್ದಾರೆ: ಮೀರಾ

  ಇದು ಮಾತ್ರವೇ ಅಲ್ಲದೆ ಮತ್ತೊಂದು ವಿಚಿತ್ರ ವಿಷಯವನ್ನು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ''ತಮಿಳುನಾಡು ಸಿನಿಮಾ ಉದ್ಯಮದಲ್ಲಿ ಕೆಲವರು ನನ್ನಂತೆಯೇ ಮುಖ ಚಹರೆ ಬದಲಾಯಿಸಿಕೊಂಡು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹಲವು ನಟಿಯರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ನನ್ನಂತೆ ಮುಖಚಹರೆ ಬದಲು ಮಾಡಿಕೊಂಡಿದ್ದಾರೆ. ಅವರಿಗೆ ನಾನು ಎಚ್ಚರಿಕೆಯನ್ನಷ್ಟೆ ನೀಡಿದ್ದೇನೆ, ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಅದಕ್ಕೆ ನನ್ನ ಬಳಿ ಸಮಯವೂ ಇಲ್ಲ'' ಎಂದಿರುವ ಈ ನಟಿ, ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್‌ಗೂ ಮನವಿ ಮಾಡಿ, ''ನನ್ನ ಹಾಗೂ ನನ್ನ ಕುಟುಂಬದ ಬಗ್ಗೆ ಕೆಲವು ಯೂಟ್ಯೂಬ್‌ಗಳಲ್ಲಿ ಕೆಟ್ಟದಾಗಿ ಪ್ರಸಾರ ಮಾಡಲಾಗಿದೆ ಅವರನ್ನು ಬಂಧಿಸಿ ಶಿಕ್ಷೆ ನೀಡಿ'' ಎಂದು ಮನವಿ ಮಾಡಿದ್ದಾರೆ.

  ಜಾತಿ ನಿಂದನೆ ಮಾಡಿದ್ದ ಮೀರಾ ಮಿಥುನ್

  ಜಾತಿ ನಿಂದನೆ ಮಾಡಿದ್ದ ಮೀರಾ ಮಿಥುನ್

  ಕೆಲವು ದಿನಗಳ ಹಿಂದಷ್ಟೆ ಇದೇ ನಟಿ ಕಮ್ ಮಾಡೆಲ್ ತಮಿಳುನಾಡು ಸಿನಿಮಾ ಉದ್ಯಮದಲ್ಲಿರುವ ಪರಿಶಿಷ್ಟ ಜಾತಿ, ವರ್ಗದ ನಿರ್ದೇಶಕರು ಇತರೆ ಚಿತ್ರಕರ್ಮಿಗಳನ್ನು ಉದ್ಯಮದಿಂದ ಹೊರಗೆ ಹಾಕಬೇಕು ಎಂದು ಹೇಳಿದ್ದರು. ಇದು ಬಹಳ ವಿವಾದ ಎಬ್ಬಿಸಿತ್ತು. ಹಲವು ಸಂಘಗಳು, ಹಲವು ನೆಟ್ಟಿಗರು, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಮೀರಾ ಮಿಥುನ್ ಅನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯ ಹೇರಿದ್ದರು. ಇದೀಗ ಮೀರಾ ಮಿಥುನ್ ಹೀಗೆ ತಮಿಳುನಾಡು ಸಿನಿಮಾ ಉದ್ಯಮದ ವಿರುದ್ಧ ಕೆಟ್ಟದಾಗಿ ಮಾತನಾಡಿ ಸುದ್ದಿಗೆ ಬಂದಿದ್ದಾರೆ.

  English summary
  Actress, Model Meera Mithun complaints to Narendra Modi through a video about women safety in Tamil Nadu and Kollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X