For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಹೊಸ ಚಿತ್ರಕ್ಕಾಗಿ ಮತ್ತೆ 'ಆ ನಟಿ' ಬಂದ್ರು!

  |

  ಸೂಪರ್ ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 168ನೇ ಚಿತ್ರದಲ್ಲಿ ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಮೀನಾ, ಖುಷ್ಬೂ, ಕೀರ್ತಿ ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೀಗ, ಮತ್ತೊಬ್ಬ ನಟಿಯ ಆಗಮನವಾಗಿದೆ.

  ಸರ್ಪ್ರೈಸ್ ಎಂಬಂತೆ 'ಲೇಡಿ ಸೂಪರ್ ಸ್ಟಾರ್' ನಯನತಾರಾ ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೌದು, ಸನ್ ಪಿಕ್ಚರ್ಸ್ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದೆ.

  ಈ ಹಿಂದೆಯಷ್ಟೆ ತೆರೆಕಂಡಿದ್ದ 'ದರ್ಬಾರ್' ಚಿತ್ರದಲ್ಲಿ ರಜನಿಕಾಂತ್ ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ತಲೈವಾ ಚಿತ್ರದಲ್ಲಿ ನಯನತಾರಾ ಎಂಟ್ರಿಯಾಗಿರುವುದು ಕಾಲಿವುಡ್ ಪ್ರೇಕ್ಷಕರಿಗೆ ನಂಬಲ ಕಷ್ಟವಾಗುತ್ತಿದೆ. ಆದರೂ ಇದು ನಿಜ ಎನ್ನುವುದನ್ನು ಕೇಳಿ ಅಭಿಮಾನಿಗಳು ಖುಷಿ ಪಡ್ತಿದ್ದಾರೆ.

  'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?'ನಯನತಾರಾ' ಹೆಸರಿಟ್ಟಿದ್ದು ಯಾರು....ಇಬ್ಬರಲ್ಲಿ ಯಾರಿಗೆ ಈ ಕ್ರೆಡಿಟ್?

  ಚಂದ್ರಮುಖಿ, ದರ್ಬಾರ್ ಬಳಿಕ ಮೂರನೇ ಸಲ ರಜನಿ ಚಿತ್ರದಲ್ಲಿ ನಯನತಾರಾ ನಟಿಸುತ್ತಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಹೀರೋಯಿನ್ ಆಗಿದ್ದಾರಾ ಅಥವಾ ಅತಿಥಿ ಪಾತ್ರ ಮಾಡ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.

  ನಟಿ ನಯನತಾರಾ ಸಹಾಯಕರಿಗೆ 1 ದಿನದ ವೇತನ ಇಷ್ಟೊಂದಾ?ನಟಿ ನಯನತಾರಾ ಸಹಾಯಕರಿಗೆ 1 ದಿನದ ವೇತನ ಇಷ್ಟೊಂದಾ?

  ಸದ್ಯದ ಮಾಹಿತಿ ಪ್ರಕಾರ, ಕೀರ್ತಿ ಸುರೇಶ್ ರಜನಿಯ ಮಗಳು, ಖುಷ್ಬೂ ಪತ್ನಿ ಪಾತ್ರ ಹಾಗೂ ಮೀನಾ ಪ್ರಮುಖ ವಿಲನ್ ಆಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ನಯನತಾರಾ ಎಂಟ್ರಿ ಸರ್ಪ್ರೈಸ್ ಆಗಿದ್ದು ಪಾತ್ರದ ಬಗ್ಗೆ ಮಂದಿನ ದಿನದಲ್ಲಿ ಬಹಿರಂಗವಾಗುವ ಸಾಧ್ಯತೆ ಇದೆ.

  ಇನ್ನುಳಿದಂತೆ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಗೀತೆಯನ್ನು ಎಸ್ ಪಿ ಬಾಲಸುಬ್ರಮಣ್ಯಂ ಹಾಡಲಿದ್ದಾರೆ. ಡಿ ಇಮ್ಮನ್ ಸಂಗೀತ ಒದಗಿಸಲಿದ್ದಾರೆ. ವಿವೇಕ್ ಸಾಹಿತ್ಯ ರಚಿಸಲಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ 168ನೇ ಚಿತ್ರ ತೆರೆಗೆ ಬರಲಿದೆ.

  English summary
  Sun pictures announced another heroin of rajinikanth 168th movie. after darbar nayanatara joins with rajini third time in siva directorial movie.
  Saturday, February 1, 2020, 12:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X