For Quick Alerts
  ALLOW NOTIFICATIONS  
  For Daily Alerts

  ನಯನತಾರಾ-ವಿಘ್ನೇಶ್ ಜೋಡಿಗೆ ಮಗು: ತನಿಖೆಗೆ ಆದೇಶಿಸಿದ ತಮಿಳುನಾಡು ಸರ್ಕಾರ!

  |

  ತಾರಾ ಜೋಡಿ ನಯನತಾರಾ ಹಾಗೂ ವಿಗ್ನೇಶ್ ಶಿವನ್ ನಾಲ್ಕು ತಿಂಗಳ ಹಿಂದಷ್ಟೆ ವಿವಾಹವಾಗಿದ್ದರು. ಇಂದು ಬೆಳಿಗ್ಗೆ ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ತಾನು ಹಾಗೂ ನಯನತಾರಾ ಅವಳಿ ಮಕ್ಕಳಿಗೆ ಪೋಷಕರಾಗಿರುವ ಬಗ್ಗೆ ಘೋಷಿಸಿದ್ದರು.

  ಇದು ನೆಟ್ಟಿಗರಲ್ಲಿ ಆಶ್ಚರ್ಯ ಮೂಡಿಸಿತ್ತು. ಈ ಜೋಡಿಯು ಸೆರೋಗೇಟರಿ (ಬಾಡಿಗೆ ತಾಯ್ತನ) ವಿಧಾನದ ಮೂಲಕ ಮಗು ಪಡೆದಿರಬಹುದು ಎನ್ನಲಾಗಿದೆ. ಆದರೆ ಇದೀಗ ನಯನತಾರಾ-ವಿಗ್ನೇಶ್ ಶಿವನ್ ಜೋಡಿಯು ಮಗು ಪಡೆದ ವಿಧಾನದ ಬಗ್ಗೆ ತನಿಖೆಗೆ ತಮಿಳುನಾಡು ಸರ್ಕಾರ ಆದೇಶ ನೀಡಿದೆ.

  ಭಾರತದಲ್ಲಿ ಸೆರೊಗೇಟರಿ ವಿಧಾನದಲ್ಲಿ ಮಗು ಪಡೆಯುವುದನ್ನು ಕಾನೂನು ಬಾಹಿರ ಎಂದು ನಿಯಮ ಜಾರಿಯಲ್ಲಿದ್ದು, ನಯನತಾರಾ ಹಾಗೂ ವಿಗ್ನೇಶ್ ಶಿವನ್ ಒಂದೊಮ್ಮೆ ಸೆರೊಗೇಟರಿ ವಿಧಾನದ ಮೂಲಕ ಮಗು ಪಡೆದಿದ್ದರೆ ಅದು ಅಪರಾಧ ಎಂದಾಗುತ್ತದೆ.

  ನಯನತಾರಾ ಹಾಗೂ ವಿಘ್ನೇಶ್ ಶಿವನ್‌ ಅವರು ಮಗು ಪಡೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್, ''2022, ಜನವರಿಯಿಂದ ಭಾರತದಲ್ಲಿ ವಾಣಿಜ್ಯ ಕಾರಣಕ್ಕೆ ಬಾಡಿಗೆ ತಾಯ್ತನ ರದ್ದಾಗಿದ್ದು, ಅದೊಂದು ಕಾನೂನು ಬಾಹಿರ ಚಟುವಟಿಕೆ ಎನಿಸಿಕೊಂಡಿದೆ. ಹಾಗಾಗಿ ನಯನತಾರಾ-ವಿಘ್ನೇಶ್ ಶಿವನ್ ಜೋಡಿ ಮಗು ಪಡೆದ ರೀತಿಯ ಬಗ್ಗೆ ತನಿಖೆಗೆ ಒಳಪಡಿಸಲಾಗುವುದು'' ಎಂದಿದ್ದಾರೆ.

  ನಯನತಾರಾ ಹಾಗೂ ವಿಘ್ನೇಶ್‌ ಜೋಡಿಗೆ ಆರೋಗ್ಯ ಇಲಾಖೆಯಿಂದ ಸಮನ್ಸ್ ಜಾರಿ ಮಾಡಲಾಗುತ್ತಿದ್ದು, ಈ ಜೋಡಿ ಯಾವ ಉತ್ತರ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  ಶಾರುಖ್ ಖಾನ್ ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು ಸೆರೊಗೇಟರಿ ಮಾದರಿಯಲ್ಲಿ ಮಗು ಪಡೆದಿದ್ದಾರೆ. ಆದರೆ ಇದೇ ವರ್ಷಾರಂಭದಿಂದ ಸೆರೊಗೇಟರಿ ವಿಧಾನವನ್ನು ರದ್ದು ಮಾಡಲಾಗಿದೆ. ಹಣ ನೀಡಿ ಬಾಡಿಗೆ ತಾಯಿಯ ಮೂಲಕ ಮಗು ಪಡೆವ ವಿಧಾನವನ್ನು ಕಾನೂನು ಬಾಹಿರ ಎಂದು ನಿಶ್ಚಯಿಸಲಾಗಿದೆ. ಒಂದೊಮ್ಮೆ ನಯನತಾರಾ-ವಿಘ್ನೇಶ್ ಅವರುಗಳು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದರೆ ಅವರು ಕಾನೂನಾತ್ಮಕ ಶಿಕ್ಷೆ ಎದುರಿಸಬೇಕಾಗುತ್ತದೆ.

  ನಟಿ ನಯನತಾರಾ-ವಿಘ್ನೇಶ್ ಶಿವನ್ ಅವರು ಬಹು ಸಮಯದಿಂದ ಪ್ರೀತಿಯಲ್ಲಿದ್ದರು. ಇದೇ ವರ್ಷದ ಜೂನ್ 9 ರಂದು ಈ ಜೋಡಿ ವಿವಾಹವಾದರು. ಇವರ ವಿವಾಹಕ್ಕೆ ಸೂಪರ್ ಸ್ಟಾರ್ ರಜನೀಕಾಂತ್, ಖ್ಯಾತ ನಟ ಶಾರುಖ್ ಖಾನ್ ಇನ್ನು ಹಲವು ಖ್ಯಾತನಾಮ ನಟ-ನಟಿಯರು ಭಾಗವಹಿಸಿದ್ದರು.

  ಮದುವೆ ಆದಾಗಿನಿಂದಲೂ ಒಂದಲ್ಲ ಒಂದು ವಿವಾದದಲ್ಲಿ ಈ ಜೋಡಿ ಸಿಲುಕುತ್ತಲೇ ಇದೆ. ಮದುವೆಯಾದ ಬಳಿಕ ತಿರುಪತಿಗೆ ತೆರಳಿದ್ದ ಜೋಡಿಯ ಮೇಲೆ ತಿರುಪತಿಯಲ್ಲಿ ಚಪ್ಪಲಿ ಧರಿಸಿ ಓಡಾಡಿ ದೇವಸ್ಥಾನಕ್ಕೆ ಅಪಮಾನ ಎಸಗಿದ ಆರೋಪ ಬಂದಿತ್ತು. ಬಳಿಕ ವಿಘ್ನೇಶ್ ಶಿವನ್ ಈ ಬಗ್ಗೆ ಕ್ಷಮೆ ಕೇಳಿದರು. ಆ ಬಳಿಕ ತಮ್ಮ ಮದುವೆ ವಿಡಿಯೋವನ್ನು ನೆಟ್‌ಫ್ಲಿಕ್ಸ್‌ ಗೆ ಮಾರಾಟ ಮಾಡಿದ ಬಗ್ಗೆಯೂ ಹಲವರು ಆಡಿಕೊಂಡರು. ಈಗ ಮಗುವಿನ ವಿಚಾರವಾಗಿಯೂ ವಿವಾದ ಎಳೆದುಕೊಂಡಿದ್ದಾರೆ.

  English summary
  Nayanthara and Vignesh Shivan became parents to twin babies. Tamil Nadu government orders probe, because in India surrogacy is illegal.
  Monday, October 10, 2022, 22:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X