For Quick Alerts
  ALLOW NOTIFICATIONS  
  For Daily Alerts

  'ಕಾಂಚನಾ' ಸಿನಿಮಾ ನಿರ್ಮಿಸಿದ್ದು ಏಕೆ? ಕಾರಣ ಬಿಚ್ಚಿಟ್ಟ ರಾಘವ್ ಲಾರೆನ್ಸ್

  |

  ನೃತ್ಯ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದ ರಾಘವ್ ಲಾರೆನ್ಸ್‌ ನಂತರ ನಿರ್ದೇಶಕನಾಗಿಯೂ ಯಶಸ್ವಿಯಾದರು. ಮೊದಲಿಗೆ 'ಮಾಸ್' ಎಂಬ ಮಾಸ್ ಸಿನಿಮಾ ನಿರ್ದೇಶಿಸಿದ್ದ ರಾಘವ್ ಲಾರೆನ್ಸ್‌ ಆ ನಂತರ ದೆವ್ವದ ಕತೆಗಳತ್ತ ಒಲವು ಹೆಚ್ಚು ಮಾಡಿಕೊಂಡರು.

  ದೆವ್ವದ ಸಿನಿಮಾಗಳು ರಾಘವ್ ಲಾರೆನ್ಸ್‌ ಗೆ ದೊಡ್ಡ ಯಶಸ್ಸನ್ನೂ ತಂದುಕೊಟ್ಟಿತು. ಅದರಲ್ಲಿಯೂ ರಾಘವ್ ನಿರ್ದೇಶಿಸಿ ನಟಿಸಿದ್ದ 'ಕಾಂಚನಾ' ದೊಡ್ಡ ಯಶಸ್ಸು ಗಳಿಸಿತು. ಅಷ್ಟೇ ಅಲ್ಲದೆ ಕನ್ನಡ ಸೇರಿದಂತೆ ಕೆಲವು ಭಾಷೆಗಳಿಗೆ ರೀಮೇಕ್ ಸಹ ಆಯಿತು.

  ಇದೀಗ ಹಿಂದಿಯಲ್ಲಿ ರಾಘವ್ ಲಾರೆನ್ಸ್ ಅವರೇ ಕಾಂಚನಾ ಸಿನಿಮಾವನ್ನು ರೀಮೇಕ್ ಮಾಡಿದ್ದು, ಮುಖ್ಯ ಪಾತ್ರದಲ್ಲಿ ಅಕ್ಷಯ್ ಕುಮಾರ್ ನಟಿಸಿದ್ದಾರೆ. ಈ ಸಮಯದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಘವ್ ಲಾರೆನ್ಸ್‌ ತಾವೇಕೆ ಕಾಂಚನಾ ಸಿನಿಮಾ ನಿರ್ದೇಶಿಸಿದೆ ಎಂದು ಹೇಳಿಕೊಂಡಿದ್ದಾರೆ.

  ರಾಘವ್ ಲಾರೆನ್ಸ್‌ ಟ್ರಸ್ಟ್‌ ಗೆ ಬಂದಿದ್ದ ತೃತಿಯಲಿಂಗಿ

  ರಾಘವ್ ಲಾರೆನ್ಸ್‌ ಟ್ರಸ್ಟ್‌ ಗೆ ಬಂದಿದ್ದ ತೃತಿಯಲಿಂಗಿ

  ರಾಘವ್ ಲಾರೆನ್ಸ್‌ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಟ್ರಸ್ಟ್ ಅನಾಥ ಮಕ್ಕಳಿಗೆ ಸೂರು ಒದಗಿಸುವ, ವಯಸ್ಸಾದವರಿಗೆ ನೆಲೆ ನೀಡುವ ಇನ್ನೂ ಅನೇಕ ಕಾರ್ಯಗಳನ್ನು ಮಾಡುತ್ತಿದೆ. ರಾಘವ್ ಅವರ ಟ್ರಸ್ಟ್‌ನಿಂದ ಸಹಾಯ ಅಪೇಕ್ಷಿಸಿ ಒಮ್ಮೆ ತೃತಿಯಲಿಂಗಿಗಳು ಕೆಲವರು ಬಂದಿದ್ದರಂತೆ.

  ತ್ರಿಲಿಂಗಿಗಳ ಕತೆ ಕೇಳಿದ ರಾಘವ್ ಲಾರೆನ್ಸ್

  ತ್ರಿಲಿಂಗಿಗಳ ಕತೆ ಕೇಳಿದ ರಾಘವ್ ಲಾರೆನ್ಸ್

  ಸಹಾಯ ಅಪೇಕ್ಷಿಸಿ ಬಂದ ತೃತಿಯಲಿಂಗಿ ಬಳಿ ರಾಘವ್ ಲಾರೆನ್ಸ್‌ ಸಾಕಷ್ಟು ಸಮಯ ಮಾತನಾಡಿದರಂತೆ, ಅವರ ಕತೆಗಳನ್ನೆಲ್ಲಾ ಕೇಳಿದರಂತೆ, ಅವರ ಸಮಸ್ಯೆಗಳನ್ನು ಆಲಿಸಿದರಂತೆ, ಆಗ ಅವರಿಗೆ ಅನಿಸಿದ್ದು ತೃತಿಯಲಿಂಗಿಗಳಿಗಾಗಿ ಏನಾದರೂ ಮಾಡಲೇ ಬೇಕು ಎಂದು.

  ತೃತಿಯಲಿಂಗಿಗಳ ಬಗ್ಗೆ ಸಿನಿಮಾಗಳು ಗಮನ ಹರಿಸಿಲ್ಲ

  ತೃತಿಯಲಿಂಗಿಗಳ ಬಗ್ಗೆ ಸಿನಿಮಾಗಳು ಗಮನ ಹರಿಸಿಲ್ಲ

  ತೃತಿಯಲಿಂಗಿಗಳ ಬಗ್ಗೆ ಸಿನಿಮಾಗಳು ಹೆಚ್ಚು ಗಮನ ಹರಿಸಿಲ್ಲ, ಅವರನ್ನು ತಮಾಷೆಯ ವಸ್ತುವಾಗಿ ಕೆಲವು ಸಿನಿಮಾಗಳಲ್ಲಿ ತೋರಿಸಲಾಗಿದೆ. ಹಾಗಾಗಿ ಅವರ ಬಗ್ಗೆ ಸಿನಿಮಾ ಮಾಡಿ, ಅವರ ಸಮಸ್ಯೆಯನ್ನು, ಅವರ ಜಗತ್ತನ್ನು ಪ್ರಪಂಚಕ್ಕೆ ಪರಿಚಯ ಮಾಡಬೇಕು ಎನಿಸಿ, 'ಕಾಂಚನಾ' ಸಿನಿಮಾ ಮಾಡಿದರಂತೆ ರಾಘವ್ ಲಾರೆನ್ಸ್.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada
  ಮನೆಗೆ ಬಂದು ಆಶೀರ್ವದಿಸಿದ ತೃತಿಯಲಿಂಗಿಗಳ

  ಮನೆಗೆ ಬಂದು ಆಶೀರ್ವದಿಸಿದ ತೃತಿಯಲಿಂಗಿಗಳ

  ಕಾಂಚನಾ ಸಿನಿಮಾ ಬಿಡುಗಡೆ ಆದ ಬಳಿಕ ದೊಡ್ಡ ಸಂಖ್ಯೆಯಲ್ಲಿ ತೃತಿಯಲಿಂಗಿಗಳ ರಾಘವ್ ಲಾರೆನ್ಸ್ ಮನೆಗೆ ಭೇಟಿ ಕೊಟ್ಟು, ಸನ್ಮಾನ ಮಾಡಿ, ಆಶೀರ್ವಾದ ಮಾಡಿ ಹೋದರಂತೆ. ಹೀಗೆಂದು ಸಂದರ್ಶನದಲ್ಲಿ ಹೇಳಿದ್ದಾರೆ ರಾಘವ್ ಲಾರೆನ್ಸ್.

  English summary
  Director Raghava Lawrence talked about why he made Kanchana movie. He said i wanted to show Transgenders problems to the world.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X