ರಜನೀಕಾಂತ್ ರಾಜಕೀಯ ಪ್ರವೇಶ ಪಕ್ಕಾ: ಡಿಸೆಂಬರ್ 31ಕ್ಕೆ ಪಕ್ಷ ಘೋಷಣೆ
ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಇದ್ದ ಎಲ್ಲಾ ಅನುಮಾನಗಳು ನಿವಾರಣೆಯಾಗಿವೆ. ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
Recommended Video
ರಜನೀಕಾಂತ್ ಅವರು ರಾಜಕೀಯ ಪ್ರವೇಶಿಸುವುದು ಪಕ್ಕಾ ಆಗಿದೆ. ಅವರೇ ಇಂದು ಮಾಡಿರುವ ಟ್ವೀಟ್‌ನಂತೆ, ಡಿಸೆಂಬರ್ 31 ರಂದು ಪಕ್ಷದ ಘೋಷಣೆ ಮಾಡಲಿರುವ ರಜನೀಕಾಂತ್, ಜನವರಿಯಲ್ಲಿ ಪಕ್ಷವನ್ನು ಲಾಂಚ್ ಮಾಡಲಿದ್ದಾರೆ.
ಭಾರಿ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ರಜನೀಕಾಂತ್ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯಲು ಹಲವು ಪಕ್ಷಗಳು ಯತ್ನಿಸಿದ್ದವು, ಆದರೆ ಪಕ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ಅವರು, ತಮ್ಮದೇ ರಾಜಕೀಯ ಪಕ್ಷ ಸ್ಥಾಪನೆ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಇದೀಗ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಸಿನಿಮಾ ನಟರು ರಾಜಕೀಯ ಪ್ರವೇಶಿಸಿ ಭಾರಿ ಯಶಸ್ಸಾಗಿರುವ ದೊಡ್ಡ ಇತಿಹಾಸವೇ ಇದೆ. ಎಂಜಿಆರ್, ಜಯಲಲಿತಾ ಸೇರಿ ಹಲವು ಸಿನಿಮಾ ನಟರುಗಳು ರಾಜಕೀಯ ಪ್ರವೇಶಿಸಿ ಯಶಸ್ಸು ಗಳಿಸಿದ್ದಾರೆ.
ರಜನೀಕಾಂತ್ ಸಮಕಾಲೀನರಾದ ರಜನಿಕಾಂತ್ ಈಗಾಗಲೇ ಮಕ್ಕಳ್ ನಿಧಿ ಮಯಂ ಎಂಬ ಪಕ್ಷ ಸ್ಥಾಪಿಸಿಯಾಗಿದೆ. ಈಗ ರಜನೀಕಾಂತ್ ಅವರು ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದು, ಪಕ್ಷದ ಹೆಸರು ಏನಿರುತ್ತದೆ, ಪಕ್ಷದ ಲಾಂಛನ ಏನಿರುತ್ತದೆ ಎಂಬ ಕುತೂಹಲ ಕೆರಳಿದೆ.


Click it and Unblock the Notifications











