ಇಳಯರಾಜ ಹೊಸ ಸ್ಟುಡಿಯೋಗೆ ಭೇಟಿ ನೀಡಿದ ರಜನಿಕಾಂತ್

ಸಂಗೀತ ನಿರ್ದೇಶಕ ಇಳಯರಾಜ ಚೆನ್ನೈನಲ್ಲಿ ಹೊಸ ರೆಕಾರ್ಡಿಂಗ್ ಸ್ಟುಡಿಯೋ ಸ್ಥಾಪಿಸಿದ್ದರು ಎಂಬ ವಿಚಾರ ವರದಿಯಾಗಿತ್ತು. ಇದೀಗ, ಇಳಯರಾಜ ಸ್ಟುಡಿಯೋಗೆ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ನೀಡಿ ಸಮಯ ಕಳೆದಿದ್ದಾರೆ.

ಇಳಯರಾಜ ಸ್ಟುಡಿಯೋದಲ್ಲಿ ಸಾಂಗ್ ರೆಕಾರ್ಡಿಂಗ್‌ ಪ್ರಕ್ರಿಯೆ ಕಂಡು ರಜನಿಕಾಂತ್ ಎಂಜಾಯ್ ಮಾಡ್ತಿರುವ ವಿಡಿಯೋ ಹಾಗೂ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸಮಯದಲ್ಲಿ ಕೆಲವು ಹಳೆಯ ಹಾಡುಗಳನ್ನು ಸ್ಮರಿಸಿಕೊಂಡು ಇಳಯರಾಜ ಮತ್ತು ರಜನಿ ಸಮಯ ಕಳೆದಿದ್ದಾರೆ ಎಂದು ಪಿಂಕ್‌ವಿಲ್ಲ ವರದಿ ಮಾಡಿದೆ. ಅಂದ್ಹಾಗೆ, ರಜನಿ ನಟಿಸಿದ್ದ ದಳಪತಿ, ವೀರಂ ಅಂತಹ ಚಿತ್ರಗಳಲ್ಲಿ ಇಳಯರಾಜ ಸಂಗೀತ ನೀಡಿದ್ದರು.

Rajinikanth Visits Ilayarajas new recording studio

ಕಳೆದ ಡಿಸೆಂಬರ್ ತಿಂಗಳಲ್ಲಿ ಇಳಯರಾಜ ಅವರು ಪ್ರಸಾದ್ ಸ್ಟುಡಿಯೋ ಜೊತೆ ಜಗಳ ಮಾಡಿಕೊಂಡಿದ್ದರು. ಹಲವು ವರ್ಷಗಳ ಕಾಲ ಇಳಯರಾಜ ಪ್ರಸಾದ್ ಸ್ಟುಡಿಯೋದಲ್ಲೇ ಕೆಲಸ ಮಾಡ್ತಿದ್ದರು. ಪ್ರಸಾದ್ ಸ್ಟುಡಿಯೋದ ಜೊತೆ ಮೂಡಿ ಭಿನ್ನಾಭಿಪ್ರಾಯದಿಂದ ಇಳಯರಾಜ ಹೊರಬಂದರು. ಈಗ ಚೆನ್ನೈನಲ್ಲಿ ಇಳಯರಾಜ ಹೊಸ ಸ್ಟುಡಿಯೋ ಸ್ಥಾಪಿಸಿದ್ದಾರೆ.

ಮತ್ತೊಂದೆಡೆ ರಜನಿಕಾಂತ್ 'ಅಣ್ಣಾತ್ತೆ' ಚಿತ್ರೀಕರಣ ಮಾಡುತ್ತಿದ್ದಾರೆ. ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ಶೂಟಿಂಗ್‌ಗೆ ಬ್ರೇಕ್ ಹಾಕಲಾಗಿತ್ತು. ಮಾರ್ಚ್ ತಿಂಗಳಲ್ಲಿ ರಜನಿ ಮತ್ತೆ ಚಿತ್ರೀಕರಣ ಶುರು ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಶಿವ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಸನ್ ಪಿಕ್ಚರ್ಸ್ ಅಡಿಯಲ್ಲಿ ಕಲಾನಿಧಿ ಮಾರನ್ ನಿರ್ಮಾಣ ಮಾಡುತ್ತಿದ್ದಾರೆ. ರಜನಿಕಾಂತ್ ಜೊತೆ ಮೀನಾ, ಖುಷ್ಬೂ, ಕೀರ್ತಿ ಸುರೇಶ್, ನಯನತಾರ, ಪ್ರಕಾಶ್ ರಾಜ್ ನಟಿಸುತ್ತಿದ್ದಾರೆ. 2021ರ ನವೆಂಬರ್ 4 ರಂದು ಅಣ್ಣಾತ್ತೆ ಸಿನಿಮಾ ರಿಲೀಸ್ ಆಗಲಿದೆ.

More from Filmibeat

English summary
Superstar Rajinikanth visits Ilayaraja's new recording studio and spent time with legend music director in chennai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X