For Quick Alerts
  ALLOW NOTIFICATIONS  
  For Daily Alerts

  ತಮಿಳುನಾಡಿನಲ್ಲಿ ಸ್ಟಾರ್ ನಟರ ಜುಗಲ್‌ಬಂದಿ: ಕಮಲ್ ಹಾಸನ್ ಸಿಎಂ ಅಭ್ಯರ್ಥಿ?

  |

  ತಮಿಳುನಾಡು ರಾಜಕೀಯದಲ್ಲಿ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದೆ. ಏಪ್ರಿಲ್ 6 ರಂದು ತಮಿಳುನಾಡು ವಿಧಾನಸಭೆಗೆ ಮತದಾನ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸ್ಪರ್ಧೆ ಮಾಡಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಿತ್ತು. ಆದ್ರೆ, ಕೊನೆ ಘಳಿಗೆಯಲ್ಲಿ ತಲೈವಾ ಹಿಂದೆ ಸರಿದರು.

  ಮತ್ತೊಂದೆಡೆ ಕಮಲ್ ಹಾಸನ್ ಸಹ ಪಕ್ಷ ಸ್ಥಾಪಿಸಿದ್ದರು. ಆರಂಭದಲ್ಲಿ ಕಮಲ್ ಹಾಸನ್ ಪಕ್ಷ ಎಐಡಿಎಂಕೆ ಅಥವಾ ಡಿಎಂಕೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು ಎಂದು ಹೇಳಲಾಯಿತು. ಆದ್ರೀಗ, ಈ ಎರಡು ಪಕ್ಷಗಳಿಂದ ದೂರವಿರುವ ಕಮಲ್ ಹಾಸನ್ ತಮಿಳಿನ ಮತ್ತೊಬ್ಬ ಸ್ಟಾರ್ ನಟನ ಜೊತೆ ಕೈ ಜೋಡಿಸಿದ್ದಾರೆ. ಇದರ ಬೆನ್ನಲ್ಲೆ ಕಮಲ್ ಹಾಸನ್ ಸಿಎಂ ಅಭ್ಯರ್ಥಿ ಎಂದು ಘೋಷಣೆಯಾಗಿದೆ. ಮುಂದೆ ಓದಿ....

  ರಾಜಕೀಯ ಮತ್ತು ಸಿನಿಮಾದಿಂದ ದಿಢೀರ್ ಬ್ರೇಕ್ ಪಡೆದ ಕಮಲ್ ಹಾಸನ್: ಕಾರಣವೇನು?ರಾಜಕೀಯ ಮತ್ತು ಸಿನಿಮಾದಿಂದ ದಿಢೀರ್ ಬ್ರೇಕ್ ಪಡೆದ ಕಮಲ್ ಹಾಸನ್: ಕಾರಣವೇನು?

  ಶರತ್ ಕುಮಾರ್ ಪಕ್ಷದ ಜೊತೆ ಕಮಲ್ ಹೆಜ್ಜೆ!

  ಶರತ್ ಕುಮಾರ್ ಪಕ್ಷದ ಜೊತೆ ಕಮಲ್ ಹೆಜ್ಜೆ!

  ತಮಿಳು ನಟ ಶರತ್ ಕುಮಾರ್ ಸಾರಥ್ಯದ ಎಐಎಸ್‌ಎಂಕೆ (ಆಲ್ ಇಂಡಿಯಾ ಸಮತುವಾ ಮಕ್ಕಲ್ ಕಚ್ಚಿ) ಪಕ್ಷವೂ ಕಮಲ್ ಹಾಸನ್ ಸ್ಥಾಪನೆಯ ಮಕ್ಕಲ್ ನೀಧಿ ಮಯಂ ಪಕ್ಷದ ಜೊತೆ ಮೈತ್ರಿ ಘೋಷಿಸಿದೆ. ಈ ವಿಚಾರವನ್ನು ಖುದ್ದು ಶರತ್ ಕುಮಾರ್ ಪ್ರಕಟಣೆ ಮಾಡಿದ್ದು, ಕಮಲ್ ಹಾಸನ್ ನಮ್ಮ ಸಿಎಂ ಅಭ್ಯರ್ಥಿ ಎಂದು ತಿಳಿಸಿದ್ದಾರೆ. ಈ ಬಗ್ಗೆ ಎಂಎನ್‌ಎಂ ಪಕ್ಷ ಅಧಿಕೃತವಾಗಿ ಯಾವುದೇ ಪ್ರಕಟಣೆ ಮಾಡಿಲ್ಲ.

  ಸ್ಟಾರ್ ನಟರ ಜುಗಲ್ ಬಂದಿ

  ಸ್ಟಾರ್ ನಟರ ಜುಗಲ್ ಬಂದಿ

  ರಜನಿಕಾಂತ್ ಮತ್ತು ಕಮಲ್ ಹಾಸನ್ ರಾಜಕೀಯವಾಗಿ ತಮಿಳುನಾಡನ್ನು ಮುನ್ನಡೆಸಲು ಒಂದಾಗಬಹುದು ಎಂಬ ಲೆಕ್ಕಾಚಾರವಿತ್ತು. ಆದ್ರೀಗ, ಕಮಲ್ ಹಾಸನ್ ಜೊತೆ ನಟ ಶರತ್ ಕುಮಾರ್ ಕೈ ಜೋಡಿಸಿದ್ದಾರೆ. ಫೆಬ್ರವರಿ 26 ರಂದು ಕಮಲ್ ಹಾಸನ್ ಅವರನ್ನು ಶರತ್ ಕುಮಾರ್ ಭೇಟಿ ಮಾಡಿ ಈ ಸಂಬಂಧ ಚರ್ಚಿಸಿದ್ದರು.

  ಸೋಲು ಕಂಡಿದ್ದ ಶರತ್ ಕುಮಾರ್

  ಸೋಲು ಕಂಡಿದ್ದ ಶರತ್ ಕುಮಾರ್

  ಕಳೆದ ವಿಧಾನಸಭೆಯಲ್ಲಿ ಶರತ್ ಕುಮಾರ್ ಎಐಡಿಎಂಕೆ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದರು. ತಿರಚಂದೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶರತ್ ಕುಮಾರ್ ಸೋಲು ಕಂಡಿದ್ದರು. ರಾಧಿಕಾ ಶರತ್ ಕುಮಾರ್ ಸಹ ತಮ್ಮ ಪತಿಯ ಪರವಾಗಿ ಮತಯಾಚನೆ ಮಾಡಿದ್ದರು.

  ರಾಧಿಕಾ ಶರತ್ ಕುಮಾರ್ ಸ್ಪರ್ಧೆ

  ರಾಧಿಕಾ ಶರತ್ ಕುಮಾರ್ ಸ್ಪರ್ಧೆ

  ಈ ಬಾರಿಯ ಚುನಾವಣೆಯಲ್ಲಿ ಶರತ್ ಕುಮಾರ್ ಪತ್ನಿ ರಾಧಿಕಾ ಸ್ಪರ್ಧೆ ಮಾಡುವ ಸಾಧ್ಯತೆ ಹೆಚ್ಚಿದೆ. ಎಐಎಸ್‌ಎಂಕೆ ಜನರಲ್ ಕಾರ್ಯದರ್ಶಿ ಸ್ಥಾನಕ್ಕೆ ರಾಧಿಕಾ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಮೂಲಕ ತಮಿಳುನಾಡು ರಾಜಕೀಯದಲ್ಲಿ ಈ ಬಾರಿ ಸಿನಿಮಾ ಸ್ಟಾರ್‌ಗಳ ಅಬ್ಬರ ಎಲ್ಲರ ಗಮನ ಸೆಳೆಯಲಿದೆ.

  Recommended Video

  ತೆಲುಗು ನೆಲದಲ್ಲಿ ಭರ್ಜರಿಯಾಗಿ ಅಬ್ಬರಿಸಲಿದ್ದಾರೆ ರಾಕಿ ಭಾಯ್ | KGF 2 | PrashanthNeel | Yash
  English summary
  AISMK Party founder Sarath Kumar announced Kamal Hassan Is Our CM Candidate.
  Thursday, March 4, 2021, 13:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X