Don't Miss!
- News
ನೋಡ ಬನ್ನಿರಾ ಪರಶುರಾಮ ಥೀಮ್ ಪಾರ್ಕ್: ಸಚಿವ ಸುನಿಲ್ ಕುಮಾರ್ ಸಂದರ್ಶನ
- Sports
ರಿಷಭ್ ಪಂತ್ ಆರೋಗ್ಯದಲ್ಲಿ ಭಾರೀ ಚೇತರಿಕೆ: ಈ ವಾರವೇ ಆಸ್ಪತ್ರೆಯಿಂದ ಡಿಶ್ಚಾರ್ಜ್ ಸಾಧ್ಯತೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Lifestyle
Horoscope Today 30 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿಶಾಲ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ 'ಮನಸೆಲ್ಲಾ ನೀನೆ' ನಟಿ
ತಮಿಳಿನ ಖ್ಯಾತ ನಟ, ನಿರ್ಮಾಪಕ ವಿಶಾಲ್ ವಿರುದ್ಧ ನಟಿಯೊಬ್ಬರು ಲೈಂಗಿಕ ಕಿರುಕುಳದ ಗುರುತರ ಆರೋಪ ಮಾಡಿದ್ದಾರೆ. ವಿಶಾಲ್ ಹಾಗೂ ಆತನ ಕೆಲವು ಗೆಳೆಯರು ಹಲವಾರು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದಿದ್ದಾರೆ ನಟಿ ಗಾಯತ್ರಿ ರಘುರಾಮ್.
ಕನ್ನಡದ 'ಮನಸೆಲ್ಲಾ ನೀನೆ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಗಾಯತ್ರಿ ರಘುರಾಮ್ ಆ ನಂತರ ಕೊರಿಯೋಗ್ರಾಫರ್ ಆಗಿ ಗುರಿತಿಸಿಕೊಂಡರು. ಆ ನಂತರ ಬಿಗ್‌ಬಾಸ್ ಸ್ಪರ್ಧೆಯಿಂದ ಅವರಿಗೆ ಹೆಚ್ಚಿನ ಖ್ಯಾತಿ ದೊರಕಿತು. ನಂತರ ಈಗ ಬಿಜೆಪಿ ಸೇರಿ ರಾಜಕಾರಣಿ ಆಗಿದ್ದಾರೆ.
ನಟ ವಿಶಾಲ್ ಕುರಿತು ಸರಣಿ ಟ್ವೀಟ್ ಮಾಡಿರುವ ಗಾಯತ್ರಿ ರಘುರಾಮ್, 'ವಿಶಾಲ್ ಹಾಗೂ ಗೆಳೆಯರು ಚಿತ್ರೋದ್ಯಮಕ್ಕೆ ಬರುವ ಹೊಸ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಸಿಕೊಂಡು ಬಿಸಾಡುವ ಪ್ರವೃತ್ತಿ ವಿವರದ್ದು' ಎಂದಿದ್ದಾರೆ ಗಾಯತ್ರಿ.

ಬಳಸಿ ಬಿಸಾಡುವುದು ನಿನಗೆ ಅಭ್ಯಾಸವಾಗಿದೆ: ಗಾಯತ್ರಿ ರಘುರಾಮ್
'ಚಿತ್ರರಂಗದಲ್ಲಿ ಇರುವ ವ್ಯಕ್ತಿಯಾಗಿ ಮೊದಲಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು. ವಿಶಾಲ್ ಒಮ್ಮೆ ನಿನ್ನ ಸುತ್ತಲೂ ನೋಡು ಏನಾಗುತ್ತಿದೆ ಎಂದು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ನಟಿಯರ ಸ್ಥಿತಿ ಹೇಗಿದೆಯೆಂದು. ನಟಿಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡು. ನೀನು ಮತ್ತು ನಿನ್ನ ಗೆಳೆಯರು ಅದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡುವುದು ನಿಮಗೆ ಅಭ್ಯಾಸವಾಗಿ ಹೋಗಿದೆ. ಸಾಕಷ್ಟು ಮಂದಿ ನಟಿಯರು ನಿಮ್ಮಿಂದ ತೊಂದರೆ ಅನುಭವಿಸಿದ್ದಾರೆ ಎಂದಿದ್ದಾರೆ ಗಾಯತ್ರಿ.

ನಟಿಯರು ನಿನ್ನಿಂದ ದೂರ ಓಡುತ್ತಾರೆ: ಗಾಯತ್ರಿ
ನೀನು ಪದೇ-ಪದೇ ಪೀಡಿಸುವ ಕಾರಣದಿಂದ ನಾಯಕ ನಟಿಯರಂತೂ ನಿನ್ನನ್ನು ಕಂಡು ದೂರ ಓಡುತ್ತಾರೆ. ಈ ವಿಷಯ ನಿನಗೆ ಗೊತ್ತಿದೆಯೇ? ಎಂದು ಪ್ರಶ್ನಿಸಿರುವ ಗಾಯತ್ರಿ, 'ಸಿನಿಮಾ ರಂಗದ ಯುವತಿಯರನ್ನು ಕಾಪಾಡಲು ನೀನು ನಿನ್ನ ಹೀರೋತನ ಪ್ರದರ್ಶಿಸಬೇಕಿತ್ತು. ಆದರೆ ನೀನು ವಿಲನ್‌ನಂತೆ ವರ್ತಿಸಿದೆ ಎಂದಿದ್ದಾರೆ.

ನ್ಯಾಯಾಲಯದಲ್ಲಿ ವಿಶಾಲ್‌ಗೆ ಹಿನ್ನೆಲೆ
ವಿಶಾಲ್ ಮೇಲೆ ಇತ್ತೀಚಿನ ದಿನಗಳಲ್ಲಿ ಒಂದರ ಹಿಂದೊಂದರಂತೆ ಆರೋಪಗಳು ಬರುತ್ತಲೇ ಇವೆ. ವಿಶಾಲ್ ನಟಿಸಿದ್ದ 'ಆಕ್ಷನ್' ಹೆಸರಿನ ಸಿನಿಮಾ ನಿರ್ಮಾಪಕರು ವಿಶಾಲ್ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರು. ನಿರ್ಮಾಪಕರಿಗೆ ಎಂಟು ಕೋಟಿ ಹಣ ನೀಡುವಂತೆ ನ್ಯಾಯಾಲಯವು ವಿಶಾಲ್‌ಗೆ ಸೂಚಿಸಿತ್ತು. ಮತ್ತೊಂದೆಡೆ ಯುವತಿ ಅನಿಶಾ ಜೊತೆಗೆ ಆಗಿದ್ದ ನಿಶ್ಚಿತಾರ್ಥವೂ ಮುರಿದು ಬಿತ್ತು.
Recommended Video

ಮಾಜಿ ಸಿಬ್ಬಂದಿಯಿಂದ ಗುರುತರ ಆರೋಪ
ಇನ್ನು ನಟ ವಿಶಾಲ್ ತೆರಿಗೆ ಸರಿಯಾಗಿ ಪಾವತಿಸಿಲ್ಲ ಎಂದು ದೂರು ದಾಖಲಾಗಿತ್ತು. ನಂತರ ವಿಶಾಲ್‌ರ ನಿರ್ಮಾಣ ಸಂಸ್ಥೆಯ ಮಹಿಳಾ ಉದ್ಯಮಿ ಒಬ್ಬರ ಮೇಲೆ ವಿಶಾಲ್ ಆರೋಪ ಮಾಡಿದರು. ಅವರೂ ಸಹ ವಿಶಾಲ್ ವಿರುದ್ಧ ಗುರುತರ ಆರೋಪಗಳನ್ನೇ ಮಾಡಿದರು. ಕೊನೆಗೆ ವಿಶಾಲ್ ಕಡೆಯವರು ಆ ಮಹಿಳಾ ಸಿಬ್ಬಂದಿಯ ಕಾರು ಗಾಜು ಒಡೆದಿದ್ದುದು ಸುದ್ದಿಯಾಗಿತ್ತು.