Don't Miss!
- Technology
ಚೀನಾಗೆ ಬಿಗ್ ಶಾಕ್ ನೀಡಿದ ಭಾರತ! 138 ಬೆಟ್ಟಿಂಗ್ ಆ್ಯಪ್ಗಳಿಗೆ ಗೇಟ್ಪಾಸ್!
- News
ಬರಲಿವೆ ಎಲಿವೇಟೆಡ್ ಇಂಟರ್ಸಿಟಿ ಸೆಮಿ-ಹೈಸ್ಪೀಡ್ ರೈಲುಗಳು: ಭಾರತ ಹಾಗೂ ಕರ್ನಾಟಕದ ಯಾವ ನಗರಗಳ ನಡುವೆ ಸಂಚಾರ?
- Automobiles
ಗ್ರಾಹಕರೇ... ಮಾರುತಿ ಸುಜುಕಿಯಿಂದ ಮಹತ್ವದ ಘೋಷಣೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Sports
IND vs AUS: ಭಾರತದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಆಸ್ಟ್ರೇಲಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಲೆಜೆಂಡ್
- Finance
Twitter: ಟ್ವಿಟ್ಟರ್ನಲ್ಲಿ ಗೋಲ್ಡ್ ಬ್ಯಾಡ್ಜ್ ಉಳಿಸಿಕೊಳ್ಳಬೇಕಾದರೆ ಇಷ್ಟು ಮೊತ್ತ ಪಾವತಿಸಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬ್ರೇಕ್ ಅಪ್ ನೋವು ದೂರ ಮಾಡಿದ ಲಾಕ್‌ಡೌನ್: ಶೃತಿ ಹಾಸನ್
ವೈಯಕ್ತಿಕ ವಿಷಯಗಳ ಬಗ್ಗೆ ಹೆಚ್ಚು ಮಾತನಾಡದ ನಟಿ ಶೃತಿ ಹಾಸನ್, ಬ್ರೇಕ್ ಅಪ್ ಸಮಯದಲ್ಲಿ ತಾವು ಅನುಭವಿಸಿದ ನೋವು ಹಾಗೂ ಅದರಿಂದ ಹೊರಬಂದ ಬಗೆಯ ಬಗ್ಗೆ ಮಾತನಾಡಿದ್ದಾರೆ.
ನಟಿ ಶೃತಿ ಹಾಸನ್ ಹಾಗೂ ಸಂಗೀತಗಾರ ಮೈಕಲ್ ಕೋರ್ಸೆಲ್ ಪ್ರೀತಿಯಲ್ಲಿದ್ದರು. ಶೃತಿ ಹಾಸನ್-ಮೈಕ್ ಕೋರ್ಸೆಲ್ ಒಟ್ಟಿಗೆ ಇರುವ ಹಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಆದರೆ ಏಕಾ-ಏಕಿ ಈ ಜೋಡಿ ಬೇರಾಯಿತು. ಕಳೆದ ವರ್ಷದ ಅಂತ್ಯದಲ್ಲಿ ಇಬ್ಬರೂ ತಮ್ಮ ಪ್ರೀತಿ-ಪ್ರೇಮ-ಪ್ರಣಯಕ್ಕೆ ಪೂರ್ಣವಿರಾಮವಿಟ್ಟರು. ಆ ಸಂದರ್ಭದಲ್ಲಿ ಸಾಕಷ್ಟು ನೋವು ಅನುಭವಿಸಿದ್ದರಂತೆ ಶೃತಿ ಹಾಸನ್.

ಮದ್ಯದ ದಾಸಿಯಾಗಿದ್ದ ಶೃತಿ ಹಾಸನ್
ವಿಪರೀತ ಕುಡಿಯುವುದು ಅಭ್ಯಾಸ ಮಾಡಿಕೊಂಡಿದ್ದ ಶೃತಿ ಹಾಸನ್, ದೇಹದ ಆರೋಗ್ಯದ ಬಗ್ಗೆಯೂ ಗಮನ ಕಳೆದುಕೊಂಡಿದ್ದರು. ನಂತರ ಲಾಕ್‌ಡೌನ್ ಶುರುವಾಗುವುದಕ್ಕೆ ಕೆಲವೇ ದಿನಗಳ ಮುಂಚೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಶೃತಿ ಹಾಸನ್.

ಸಿಂಗಲ್ ಆಗಿರುವುದನ್ನು ಇಷ್ಟಪಡುತ್ತಿದ್ದೇನೆ: ಶೃತಿ
ತಮ್ಮ ನೋವಿನ ದಿನಗಳ ಬಗ್ಗೆ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿರುವ ಶೃತಿ ಹಾಸನ್, 'ಮೊದಲಿಗೆ ಒಂಟಿತನದ ಬಗ್ಗೆ ಬಹಳ ಭಯಪಡುತ್ತಿದ್ದೆ. ಲಾಕ್‌ಡೌನ್ ಸಯದಲ್ಲಿ ಒಂಟಿತನದ ಬಗ್ಗೆ ಭಯ ಮಾಯವಾಗಿದೆ. ಆರು ತಿಂಗಳಾಯಿತು, ನಾನು ಒಬ್ಬಳೇ ಇದ್ದೇನೆ, ಸಿಂಗಲ್ ಆಗಿರುವುದನ್ನು ಇಷ್ಟಪಡುತ್ತಿದ್ದೇನೆ' ಎಂದಿದ್ದಾರೆ ಶೃತಿ ಹಾಸನ್.

ಹಾಸನ್ ಹೆಸರಿಲ್ಲದಿದ್ದರೂ ಸಕ್ಸಸ್ ಆಗುತ್ತಿದ್ದೆ: ಶೃತಿ ಹಾಸನ್
ನೆಪೊಟಿಸಮ್ ಬಗ್ಗೆಯೂ ಮಾತನಾಡಿರುವ ಶೃತಿ ಹಾಸನ್, ಚಿತ್ರರಂಗದಲ್ಲಿ ಸ್ವಜನಪಕ್ಷಪಾತ ಇದ್ದೇ ಇದೆ. ನನ್ನ ಹೆಸರಿನ ಹಿಂದೆಯೂ ಹಾಸನ್ ಎಂದಿದೆ. ಆದರೆ ಹೀಗೆ ಹೆಸರಿನ ಹಿಂದೆ ಹಾಸನ್ ಇರದಿದ್ದರೂ ನಾನು ಪ್ರತಿಭೆಯಿಂದ ಈ ಸ್ಥಾನ ಗಳಿಸುತ್ತಿದ್ದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ ಶೃತಿ ಹಾಸನ್.
Recommended Video

ಹಲವು ಸಿನಿಮಾಗಳಲ್ಲಿ ಶೃತಿ ಬ್ಯುಸಿ
ನಟಿ ಶೃತಿ ಹಾಸನ್ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಪವನ್ ಕಲ್ಯಾಣ್ ನಟನೆಯ 'ವಕೀಲ್ ಸಾಬ್', ರವಿ ತೇಜಾ ನಟನೆಯ ಕ್ರ್ಯಾಕ್, ವಿಜಯ್ ಸೇತುಪತಿ ನಟನೆಯ ಲಾಭಂ, ತಮಿಳಿನ ಪುತ್ತಂ ಪುದು ಕಾಲೈ ಎಂಬ ಸಿನಿಮಾದಲ್ಲಿ ಸಹ ಶೃತಿ ನಟಿಸುತ್ತಿದ್ದಾರೆ.