Don't Miss!
- Sports
IND vs AUS: ಬಾರ್ಡರ್-ಗವಾಸ್ಕರ್ ಮೊದಲ ಟೆಸ್ಟ್ ಪಂದ್ಯಕ್ಕಾಗಿ ನಾಗ್ಪುರಕ್ಕೆ ಬಂದಿಳಿದ ಟೀಂ ಇಂಡಿಯಾ
- Lifestyle
ಮಗುವಿಗೆ ತುಂಬಾ ಜ್ವರ ಇದ್ದಾಗ ಏನು ಮಾಡಬೇಕು?
- News
ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ: ಬಸವರಾಜ ಬೊಮ್ಮಾಯಿ
- Finance
6 ತಿಂಗಳಲ್ಲಿ 2ನೇ ಬಾರಿಗೆ ಉದ್ಯೋಗಿಗಳನ್ನು ವಜಾಗೊಳಿಸಿದ Byju's: ಈ ಬಾರಿ ಎಷ್ಟು ನೌಕರರು?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಸಾಯಿಸಿ ಬಿಡ್ತೀವಿ ಎಂದು ಹೆದರಿಸಿದ್ದರು.. ಭಾರತಕ್ಕೆ ಬರೋದೇ ಅನುಮಾನ ಅಂದುಕೊಂಡಿದ್ದೆ": ಸನ್ನಿ ಲಿಯೋನ್
ಮಾಜಿ ನೀಲಿತಾರೆ ಸನ್ನಿ ಲಿಯೋನ್ ಸೌತ್ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಬಾಲಿವುಡ್ ಬೇಬಿ ಡಾಲ್‌ಗೆ ಮೊದಲು ಇದ್ದ ಕ್ರೇಜ್ ಈಗ ಇಲ್ಲ. ಬಾಲಿವುಡ್‌ನಲ್ಲಿ ಅಷ್ಟಾಗಿ ಅವಕಾಶಗಳು ಸಿಗುತ್ತಿಲ್ಲ. ಕನ್ನಡ ಸೇರಿದಂತೆ ಸೌತ್ ಸಿನಿಮಾ ಐಟಂ ಸಾಂಗ್ಸ್‌ನಲ್ಲಿ ಹೆಜ್ಜೆ ಹಾಕ್ತಿದ್ದಾರೆ.
ಸದ್ಯ ತಮಿಳು ಸಿನಿಮಾ ಪ್ರಮೋಷನ್‌ನಲ್ಲಿ ಭಾಗಿಯಾಗಿದ್ದ ಸನ್ನಿ ಶಾಕಿಂಗ್ ಅಂಶಗಳನ್ನು ಹಂಚಿಕೊಂಡಿದ್ದಾರೆ. ತಾವು ಪೋರ್ನ್ ಇಂಡಸ್ಟ್ರಿಗೆ ಬಂದ ಆರಂಭದಲ್ಲಿ ಎದುರಿಸಿದ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಅಸಲಿಗೆ ಭಾರತಕ್ಕೆ ಬರೋದೇ ಇಲ್ಲ ಅಂದುಕೊಂಡಿದ್ದೆ" ಎಂದು ಹೇಳಿದ್ದಾರೆ. 2011ರಲ್ಲಿ ಕರೆನ್‌ಜೀತ್ ಕೌರ್ ವೋಹ್ರಾ ಎಂಬ ಮೂಲ ಹೆಸರಿನ ಸನ್ನಿ ಹಿಂದಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಮರುವರ್ಷವೇ 'ಜಿಸ್ಮ್' ಸಿನಿಮಾ ಮೂಲಕ ಬಾಲಿವುಡ್‌ಗೂ ಅಡಿ ಇಟ್ಟಿದ್ದರು.
"ವಿಜಯ್
ನಂ
1
ಸ್ಟಾರ್
ಹೆಚ್ಚು
ಥಿಯೇಟರ್
ಕೊಡಿ"
ಎಂದು
ದಿಲ್
ರಾಜು:
ಅಜಿತ್
ಫ್ಯಾನ್ಸ್
ಅಕ್ರೋಶ!
ಬಿಟೌನ್ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಮೇಲೆ ಪೋರ್ನ್ ಇಂಡಸ್ಟ್ರಿಗೆ ಸನ್ನಿ ಗುಡ್‌ಬೈ ಹೇಳಿದ್ದರು. ಸದ್ಯ ಮುಂಬೈನಲ್ಲೇ ಮನೆ ಮಾಡಿ ಪತಿ, ಮಕ್ಕಳ ಜೊತೆ ವಾಸವಾಗಿದ್ದಾರೆ. ಪೋರ್ನ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಾಗ ಸಿಕ್ಕಾಪಟ್ಟೆ ಟ್ರೋಲ್ ಎದುರಿಸಿದ್ದರಂತೆ.

ಬೆದರಿಕೆ ಮೇಲ್‌ಗಳು ಬರ್ತಿತ್ತು
"ನನ್ನ ಕರಿಯರ್ ಆರಂಭದಲ್ಲಿ ನನಗೆ ಬೆದರಿಕೆ ಮೇಲ್‌ಗಳು ಬರುತ್ತಿದ್ದವು. ಸಾಯಿಸಿಬಿಡ್ತೀವಿ ಎಂದು ಕೆಲವರು ಮೆಸೇಜ್ ಕಳುಹಿಸುತ್ತಿದ್ದರು. ಇದನ್ನು ನೋಡಿ ಭಾರತದ ಜನ ನನ್ನ ಮೇಲೆ ಬಹಳ ಕೋಪ ಇದೆ ಎಂದುಕೊಂಡಿದ್ದೆ. ಆ ಬೆದರಿಕೆಗಳು ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದವು. ಆಗ ನನ್ನ ವಯಸ್ಸು 20 ವರ್ಷ. ನನಗೆ ಯಾವುದು ಸರಿ ಯಾವುದು ತಪ್ಪು ಎಂದು ಹೇಳುವವರು ಇರಲಿಲ್ಲ" ಎಂದಿದ್ದಾರೆ.
" ಅಂತಹ ಬೆದರಿಕೆಗಳು ಈಗ ಬಂದರೆ ನನಗೇನು ಅನ್ನಿಸುವುದಿಲ್ಲ. ಯಾಕಂದರೆ ಈಗ ನಾನು ಮಾನಸಿಕವಾಗಿ ಬಹಳ ಗಟ್ಟಿಯಾಗಿದ್ದೇನೆ" ಎಂದು ಆ ದಿನಗಳನ್ನು ನೆನೆದು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ. ಸದ್ಯ ಸನ್ನಿ ಲಿಯೋನ್ 'ಓ ಮೈ ಘೋಸ್ಟ್' ಎನ್ನು ತಮಿಳು ಹಾರರ್ ಕಾಮಿಡಿ ಚಿತ್ರದಲ್ಲಿ ಮಿಂಚಿದ್ದಾರೆ. ಚಿತ್ರದ ಪ್ರಮೋಷನ್‌ಗಾಗಿ ತಮಿಳುನಾಡಿನಲ್ಲಿ ಬೀಡು ಬಿಟ್ಟಿದ್ದಾರೆ.

ಮಾಲಿವುಡ್‌ಗೂ ಸನ್ನಿ ಎಂಟ್ರಿ
ಸನ್ನಿ ಲಿಯೋನ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಆದರೆ ಬಾಲಿವುಡ್‌ಗಿಂತ ಜಾಸ್ತಿ ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ರಂಗೀಲಾ' ಸಿನಿಮಾ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ತಮಿಳಿನಲ್ಲಿ 'ಓ ಮೈ ಘೋಸ್ಟ್' ಜೊತೆಗೆ 'ವೀರಮ ದೇವಿ', 'ಶೇರೊ' ಸಿನಿಮಾಗಳಲ್ಲಿ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ 'ಕೋಕ ಕೋಲ', 'ಹೆಲೆನ್' ಹಾಗೂ 'ದಿ ಬ್ಯಾಟಲ್ ಆಫ್ ಭೀಮ ಕೊರೆಂಗನ್' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕನ್ನಡ ಸಿನಿಮಾಗಳಲ್ಲೂ ಸನ್ನಿ ಮಿಂಚು
'ಡಿಕೆ' ಸಿನಿಮಾದಲ್ಲಿ ಜೋಗಿ ಪ್ರೇಮ್ ಜೊತೆ ಸೇಸಮ್ಮ ಆಗಿ ಸನ್ನಿ ಲಿಯೋನ್ ಕುಣಿದಿದ್ದರು. ನಂತರ 'ಲವ್ ಯು ಆಲಿಯಾ' ಚಿತ್ರದಲ್ಲೂ ಕುಣಿದು ಹೋಗಿದ್ದರು. ಈ ವರ್ಷ 'ಚಾಂಪಿಯನ್' ಸಿನಿಮಾದಲ್ಲಿ 'ಡಿಂಗರ ಬಿಲ್ಲಿ'ಯಾಗಿ ಬಿಂದಾಸ್ ಆಗಿ ಸ್ಟೆಪ್ಸ್ ಹಾಕಿದ್ದರು. ಕೆಲ ದಿನಗಳ ಹಿಂದೆ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದು ಹೋಗಿದ್ದರು. ಮಂಡ್ಯದಲ್ಲಿ ಸನ್ನಿ ಲಿಯೋನ್ ಅಭಿಮಾನಿ ಸಂಘ ಕೂಡ ಇದೆ.