Don't Miss!
- News
ಬೆಂಗಳೂರು ಪ್ರವಾಹ, ಮೂಲಸೌಕರ್ಯ ಕುರಿತು ಟೀಕೆ ಮಾಡುತ್ತಿದ್ದಾಗ ಸ್ವಾಮೀಜಿಯಿಂದ ಮೈಕ್ ಕಿತ್ತುಕೊಂಡ ಬೊಮ್ಮಾಯಿ- ವಿಡಿಯೊ ನೋಡಿ
- Technology
ಏರ್ಟೆಲ್ನ ಈ ಹೊಸ ರೀಚಾರ್ಜ್ ಪ್ಲ್ಯಾನ್ನಲ್ಲಿ ದಿನವಿಡೀ ಇಂಟರ್ನೆಟ್ ಬಳಸಿದ್ರೂ ಡೇಟಾ ಖಾಲಿಯಾಗಲ್ಲ!
- Sports
IND vs NZ 1st T20: ಭಾರತ vs ನ್ಯೂಜಿಲೆಂಡ್ ಫ್ಯಾಂಟಸಿ ಡ್ರೀಮ್ ಟೀಂ; ಸಂಭಾವ್ಯ ತಂಡಗಳು
- Automobiles
ಓಲಾ ಎಸ್1 ಪ್ರೊ ಸ್ಕೂಟರ್ಗೆ ಭರ್ಜರಿ ಡಿಸ್ಕೌಂಟ್ ಘೋಷಣೆ
- Lifestyle
Shani Asta 2023 : ಶನಿ ಅಸ್ತ 2023: ದ್ವಾದಶ ರಾಶಿಗಳ ಮೇಲೆ ಇದರ ಪ್ರಭಾವ ಹಾಗೂ ಪರಿಹಾರ
- Finance
ಹಿಂಡೆನ್ಬರ್ಗ್ ವರದಿ ಎಫೆಕ್ಟ್: ಅದಾನಿ ಸ್ಟಾಕ್ ಶೇ.20ರಷ್ಟು ಕುಸಿತ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Varisu trailer: ಮಾಸ್‌ಗೆ ಮಾಸ್, ಕ್ಲಾಸ್‌ಗೆ ಕ್ಲಾಸ್: ವಾರಸ್ದಾರನಾಗಿ ದಳಪತಿ ದಂಗಲ್
ದಳಪತಿ ವಿಜಯ್- ರಶ್ಮಿಕಾ ಮಂದಣ್ಣ ನಟನೆಯ 'ವಾರೀಸು' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಸೇರಿದಿ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಟ್ಟಿರುವುದು ಗೊತ್ತಾಗುತ್ತಿದೆ. ಟ್ರೈಲರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.
ವಂಶಿ ಪೈಡಿಪಲ್ಲಿ ನಿರ್ದೇಶನ ಆಕ್ಷನ್ ಎಂಟರ್‌ಟೈನರ್ ಸಿನಿಮಾ 'ವಾರೀಸು' ಏಕಕಾಲಕ್ಕೆ ತೆಲುಗಿನಲ್ಲೂ ತೆರೆಗೆ ಬರ್ತಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ತೆಲುಗು ನಿರ್ಮಾಪಕ ದಿಲ್ ರಾಜು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಿಸಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಕೇವಲ 20 ನಿಮಿಷಗಳಲ್ಲಿ 2.2 ಮಿಲಿಯನ್ ವೀವ್ಸ್ ಸಾಧಿಸಿ ಗಮನ ಸೆಳೆದಿದೆ. ಯೂಟ್ಯೂಬ್‌ನಲ್ಲಿ ರಾಕೆಟ್ ವೇಗದಲ್ಲಿ ವೀವ್ಸ್, ಲೈಕ್ಸ್ ಸಿಕ್ತಿದೆ. ಟ್ರೈಲರ್ ನೋಡ್ತಿದ್ರೆ ಪಕ್ಕಾ ಪೈಸಾ ವಸೂಲ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ.
ರಜನೀಕಾಂತ್
ಅಲ್ಲ,
ವಿಜಯ್
ತಮಿಳಿನ
ಸೂಪರ್
ಸ್ಟಾರ್
ಎಂದ
ರಾಜಕಾರಣಿ!
ವಿಜಯ್ ನಟನೆಯ 'ಬೀಸ್ಟ್' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಹಾಗಾಗಿ ಸಹಜವಾಗಿಯೇ 'ವಾರೀಸು' ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅದಕ್ಕೆ ತಕ್ಕಂತೆ ಸಿನಿಮಾ ಪ್ರಮೋಷನ್ ರಿಲೀಸ್ ಪ್ಲ್ಯಾನ್ ನಡೀತಿದೆ.

ಸಿಂಪಲ್ ಕಥೆ ಭರ್ಜರಿ ಟ್ರೀಟ್‌ಮೆಂಟ್
ಟ್ರೈಲರ್ ನೋಡುತ್ತಿದ್ದರೆ 'ವಾರೀಸು' ರೊಟೀನ್ ಸ್ಟೋರಿ ಎನ್ನುವುದು ಗೊತ್ತಾಗುತ್ತಿದೆ. ಟ್ರೈಲರ್‌ನಲ್ಲಿ ದೊಡ್ಡ ಬ್ಯುಸಿನೆಸ್‌ಮನ್ ಫ್ಯಾಮಿಲಿಯ ಚಿಕ್ಕ ಮಗನಾಗಿ ವಿಜಯ್‌ನ ತೋರಿಸಲಾಗಿದೆ. ಆತ ತನ್ನ ಮನೆಯಿಂದ ದೂರಾಗಿ ತನ್ನದೇ ಲೋಕದಲ್ಲಿ ಜೀವನ ನಡೆಸುತ್ತಿರುತ್ತಾನೆ. ತನ್ನ ಕುಟುಂಬಕ್ಕೆ ಬ್ಯುಸಿನೆಸ್‌ನಲ್ಲಿ ಶತ್ರುಗಳು ಹುಟ್ಟಿಕೊಂಡಿದ್ದಾರೆ ಎಂದು ತಿಳಿದು ವಾರಸ್ದಾರನಾಗಿ ವಿಜಯ್ ವಾಪಸ್ ಬಂದು ಆ ಸಮಸ್ಯೆಗಳನ್ನು ಬಗೆಹರಿಸುತ್ತಾನೆ. ಇನ್ನು ಮನಸ್ತಾಪದಿಂದ ದೂರಾದ ಕುಟುಂಬ ಸದಸ್ಯರನ್ನು ಒಟ್ಟಿಗೆ ಸೇರಿಸುತ್ತಾನೆ.

ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನರ್
ಕಥೆ ಸಿಂಪಲ್ ಅನ್ನಿಸಿದರೂ ಅದರ ಟ್ರೀಟ್‌ಮೆಂಟ್ ಚೆನ್ನಾಗಿ ಇರುವಂತೆ ಕಾಣುತ್ತಿದೆ. ವಿಜಯ್ ಅಭಿನಯ ಅಭಿಮಾನಿಗಳಿಗೆ ಇಷ್ಟವಾಗಲಿದೆ. ಮನೆಯ ಹಿರಿಯನಾಗಿ ಶರತ್ ಕುಮಾರ್ ನಟಿಸಿದ್ದಾರೆ. ವಿಜಯ್ ಸಹೋದರರ ಪಾತ್ರಗಳಲ್ಲಿ ತೆಲುಗು ನಟ ಶ್ರೀಕಾಂತ್ ಹಾಗೂ ಶ್ಯಾಮ್ ಮಿಂಚಿದ್ದಾರೆ. ನಾಯಕಿಯಾಗಿ ರಶ್ಮಿಕಾ ಮಂದಣ್ಣ ಸಾಥ್ ಸಿಕ್ಕಿದೆ. ವಿಲನ್ ಆಗಿ ಪ್ರಕಾಶ್ ರಾಜ್ ಅಬ್ಬರಿಸಿದ್ದಾರೆ. ಒಂದು ಅವಿಭಕ್ತ ಕುಟುಂಬದ ಕಥೆ ಇದೆ. ಹಿರಿಯ ನಟಿ ಜಯಸುಧ ಡೈಲಾಗ್‌ಗಳು ಸಂಬಂಧಗಳ ಮಹತ್ವವನ್ನು ತಿಳಿಸುತ್ತದೆ.

ದಳಪತಿ ಡೈಲಾಗ್ಸ್, ಆಕ್ಷನ್ ಧಮಾಕ
ಬರೋಬ್ಬರಿ 250 ಕೋಟಿ ಬಜೆಟ್‌ನಲ್ಲಿ 'ವಾರೀಸು' ಸಿನಿಮಾ ನಿರ್ಮಾಣ ಆಗಿದೆ ಎನ್ನಲಾಗ್ತಿದೆ. ಅದರಲ್ಲಿ ವಿಜಯ್‌ಗೆ ಸಂಭಾವನೆಯಾಗಿ 100 ಕೋಟಿ ಸಿಕ್ಕಿದೆಯಂತೆ. ಇನ್ನು ಎಲ್ಲಾ ಕಮರ್ಷಿಯಲ್ ಎಲಿಮೆಂಟ್ಸ್ ಮಿಕ್ಸ್ ಮಾಡಿ ಆಕ್ಷನ್ ಪ್ಯಾಕ್ಟ್ಡ್ ಟ್ರೈಲರ್ ಕಟ್ ಮಾಡಿದ್ದಾರೆ. ದಳಪತಿ ಆಕ್ಷನ್ ಧಮಾಕಾ ಮತ್ತು ಡೈಲಾಗ್ಸ್ ಅಭಿಮಾನಿಗಳಿಗೆ ಕಿಕ್ ಕೊಡ್ತಿದೆ. "ಪವರ್ ಸೀಟ್‌ನಲ್ಲಿ ಅಲ್ಲ, ಅದರಲ್ಲಿ ಕೂರುವವನಲ್ಲಿ ಇರುತ್ತದೆ" ಎನ್ನುವ ಡೈಲಾಗ್ಸ್ ವೈರಲ್ ಆಗಿದೆ.

ವಿಜಯ್ ಸಂಕ್ರಾಂತಿ ವಿನ್ನರ್?
ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಜನವರಿ 12ಕ್ಕೆ 'ವಾರೀಸು' ಸಿನಿಮಾ ತೆರೆಗೆ ಬರ್ತಿದೆ. ಈ ಬಾರಿ ಸುಗ್ಗಿ ಹಬ್ಬಕ್ಕೆ ತಮಿಳಿನ 2, ತೆಲುಗಿನ 2 ದೊಡ್ಡ ಸಿನಿಮಾಗಳು ರಿಲೀಸ್ ಆಗ್ತಿವೆ. 'ವಾರೀಸು' ಟ್ರೈಲರ್ ನೋಡಿದ ಅಭಿಮಾನಿಗಳು ಸುಗ್ಗಿ ಹಬ್ಬಕ್ಕೆ ಹೇಳಿ ಮಾಡಿಸಿದ ಸಿನಿಮಾ ಇದು ಎನ್ನುತ್ತಿದ್ದಾರೆ. ಸಂಕ್ರಾಂತಿಗೆ ಅಜಿತ್ ನಟನೆಯ 'ತುನಿವು' ಸಿನಿಮಾ ಕೂಡ ಬರ್ತಿದೆ. ಹಾಗಾಗಿ ಎರಡು ಸಿನಿಮಾಗಳಲ್ಲಿ ಯಾವ ಸಿನಿಮಾ ಗೆಲ್ಲುತ್ತದೆ ಎನ್ನುವ ಲೆಕ್ಕಾಚಾರ ನಡೀತಿದೆ.