For Quick Alerts
  ALLOW NOTIFICATIONS  
  For Daily Alerts

  ಮೈಕೆಲ್ ಜಾಕ್ಸನ್ ಜೊತೆ ತಮಿಳು ಸ್ಟಾರ್ ನಟ ಅಜಿತ್ ದಂಪತಿ; ಫೋಟೋ ವೈರಲ್

  By ಫಿಲ್ಮ್ ಡೆಸ್ಕ್
  |

  ಪಾಪ್ ಲೋಕದ ಕಿಂಗ್ ಮೈಕೆಲ್ ಜಾಕ್ಸನ್ ನಿಧನ ಹೊಂದಿ ಒಂದು ದಶಕದ ಮೇಲಾಗಿದೆ. ಮೈಕೆಲ್ ಜಾಕ್ಸನ್ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನ ಬಳಗ ಹೊಂದಿದ್ದರು. ಪಾಪ್ ದೊರೆಯ ಅಭಿಮಾನಿಗಳಲ್ಲಿ ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ಸಹ ಒಬ್ಬರು.

  ಹೌದು, ಮೈಕೆಲ್ ಜಾಕ್ಸನ್ ಜೊತೆ ತಮಿಳಿನ ಸ್ಟಾರ್ ನಟ ಅಜಿತ್ ಕುಮಾರ್ ದಂಪತಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಭಿಮಾನಿಗಳು ಅಜಿತ್, ಮೈಕೆಲ್ ಜೊತೆ ಇರುವ ಪೋಟೋವನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿ ಮಾಡಿದ್ದಾರೆ.

  ಚಿತ್ರೀಕರಣ ವೇಳೆ ಗಾಯಗೊಂಡ ನಟ ಅಜಿತ್; ಹೈದರಾಬಾದ್ ನಲ್ಲಿ ಚಿಕಿತ್ಸೆ

  ಪಾಪ್ ದೊರೆಯ ಜೊತೆ ಇರುವ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಇದು ಯಾವ ಸಮಯದಲ್ಲಿ ಕ್ಲಿಕ್ಕಿಸಿದ ಫೋಟೋ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮೈಕೆಲ್ ಜಾಕ್ಸನ್ ಜೊತೆ ನಿಂತಿರುವ ಫೋಟೋ ಎಲ್ಲರ ಗಮನ ಸೆಳೆಯುತ್ತಿದೆ.

  ಅಜಿತ್ ಸದ್ಯ ವಲಿಮೈ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ತಲಾ ಅಜಿತ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಉತ್ತರ ಭಾರತದಲ್ಲಿ ಚಿತ್ರೀಕರಣ ಮಾಡುತ್ತಿದೆ.

  ಮುಂದಿನ ಚಿತ್ರೀಕರಣವನ್ನು ದಕ್ಷಿಣ ಆಫ್ರಿಕಾದಲ್ಲಿ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ. ಚಿತ್ರದ ಪ್ರಮುಖ ಆಕ್ಷನ್ ದೃಶ್ಯಗಳನ್ನು ದಕ್ಷಿಣ ಆಫ್ರಿಕಾದಲ್ಲಿ ಸೆರೆಹಿಡಿಯಲು ಸಿನಿಮಾತಂಡ ನಿರ್ಧರಿಸಿದೆ.

  ಬಾಕ್ಸರ್ ಮುಂದೆ ಘರ್ಜಿಸಲಿದ್ದಾರೆ ಉಪೇಂದ್ರ | Filmibeat Kannada

  ವಲಿಮೈ ಸಿನಿಮಾದಲ್ಲಿ ಹುಮಾ ಖುರೇಷಿ, ಕಾರ್ತಿಕೇಯ, ರಾಜ್ ಅಯ್ಯಪ್ಪ ಸೇರಿದಂತೆ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಆಕ್ಷನ್ ದೃಶ್ಯಗಳಿದ್ದು ಆಕ್ಷನ್ ಪ್ರಿಯರಿಗೆ ಈ ಸಿನಿಮಾ ತುಂಬಾ ಇಷ್ಟವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

  English summary
  Tamil Actor Ajith Kumar and wife Shalini old photo with michael jackson goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X