For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಕಾರ್ತಿ ಕುಟುಂಬದಲ್ಲಿ ಸಂಭ್ರಮ: ಅಭಿಮಾನಿಗಳಿಂದ ಅಭಿನಂದನೆ ಮಹಾಪೂರ

  |

  ತಮಿಳಿನ ಖ್ಯಾತ ನಟ ಕಾರ್ತಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ನಟ ಕಾರ್ತಿ ಎರಡನೇ ಬಾರಿ ತಂದೆಯಾಗುತ್ತಿರುವ ಖುಷಿಯಲ್ಲಿದ್ದಾರೆ. ಕಾರ್ತಿ ಪತ್ನಿ ರಂಜನಿ ಎರಡನೇ ಬಾರಿ ಗರ್ಭಿಣಿಯಾಗಿದ್ದು, ಈ ದಂಪತಿ ಈಗ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಕಾಲಿವುಡ್ ನ ಈ ಸುಂದರ ದಂಪತಿಗೆ ಅಭಿಮಾನಿಗಳಿಂದ ಅಭಿನಂದನೆಯ ಮಹಾಪೂರ ಹರಿದುಬರುತ್ತಿದೆ.

  ಕಾಲಿವುಡ್ ನ ಖ್ಯಾತ ನಟ ಕಾರ್ತಿ 2011ರಲ್ಲಿ ರಂಜನಿ ಜೊತೆ ಹಸೆಮಣೆ ಏರಿದ್ದಾರೆ. ಈ ಸುಂದರ ದಂಪತಿಗೆ 7 ವರ್ಷದ ಮುದ್ದಾದ ಹೆಣ್ಣು ಮಗಳಿದ್ದಾಳೆ. 2013ರಲ್ಲಿ ರಂಜನಿ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ. ಮಗಳಿಗೆ ಉಮಾಯಾಲ್ ಎಂದು ನಾಮಕರಣ ಮಾಡಿದ್ದಾರೆ. ಇದೀಗ ಏಳು ವರ್ಷದ ಬಳಿಕ ಮತ್ತೊಂದು ಮಗುವಿಗೆ ತಂದೆ ತಾಯಿಯಾಗುತ್ತಿದ್ದಾರೆ. ಈ ಸಂತಸದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಒಂದಾಗುತ್ತಿದೆ ಸಹೋದರರ ಜೋಡಿ: ರೀಮೇಕ್ ಸಿನಿಮಾದಲ್ಲಿ ಕಾರ್ತಿ-ಸೂರ್ಯ

  ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ನಟ ಕಾರ್ತಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸೂಪರ್ ಹಿಟ್ ಕೈದಿ ಸಿನಿಮಾದ ಬಳಿಕ ಕಾರ್ತಿ ಅಭಿಮಾನಿಗಳ ಬಳಗ ಮತ್ತಷ್ಟು ದೊಡ್ಡದಾಗಿದೆ. ಸದ್ಯ ಕಾರ್ತಿ ಖ್ಯಾತ ನಿರ್ದೇಶಕ ಮಣಿರತ್ನಂ ಸಾರಥ್ಯದಲ್ಲಿ ಮೂಡಿಬರುತ್ತಿರುವ ಪೊನ್ನಿಯಿನ್ ಸೆಲ್ವನ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

  ಅತ್ತಿಗೆಯನ್ನು ಧ್ರುವ ಎಷ್ಟು ಪ್ರೀತಿಸುತ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ | Filmibeat Kannada

  ಈ ಸಿನಿಮಾ ಜೊತೆಗೆ ಕಾರ್ತಿ ಬಹುನಿರೀಕ್ಷೆಯ ಸುಲ್ತಾನ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಗೆ ನಾಯಕಿಯಾಗಿ ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಇದು ರಶ್ಮಿಕಾ ಅಭಿನಯದ ಮೊದಲ ತಮಿಳು ಸಿನಿಮಾವಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಕೊನೆಯ ಹಂತದ ಚಿತ್ರೀಕರಣ ಬಾಕಿಯುಳಿದಿದೆ. ಸುಲ್ತಾನ್ ಜೊತೆಗೆ ಇನ್ನೂ ಹೆಸರಿಡದ ಒಂದು ಸಿನಿಮಾದಲ್ಲಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

  English summary
  Tamil Actor Karthi and his wife Ranjani become parents for second time. Karthi and Ranjani welcomed their first child in year 2013.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X