ಮಣಿರತ್ನಂ ಚಿತ್ರದಿಂದ ಮತ್ತೊಬ್ಬ ಸ್ಟಾರ್ ನಟ ಔಟ್!

ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಲಿರುವ 'ಪೊನ್ನಿಯನ್ ಸೆಲ್ವನ್' ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಬಹುದೊಡ್ಡ ಕಲಾವಿದರ ಬಳಗ ಹೊಂದಿರುವ ಈ ಚಿತ್ರ ಯಾವಾಗ ಅರಂಭವಾಗುತ್ತೆ ಎಂಬ ನಿರೀಕ್ಷೆ ಸಿನಿಪ್ರಿಯರಲ್ಲಿದೆ.

ಸಿನಿಮಾ ಆರಂಭಕ್ಕೂ ಮುಂಚೆ ಈಗ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ. ಹೌದು, ಈ ಮೊದಲೇ ಸುದ್ದಿಯಾದಂತೆ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟ ಪಾರ್ಥಿಬನ್ ನಟಿಸಲಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಪಾರ್ಥಿಬನ್ ಈ ಚಿತ್ರದಿಂದ ಹೊರಬಂದಿದ್ದಾರೆ ಎಂಬ ನಿರಾಸೆ ಸುದ್ದಿ ಹೊರಬಿದ್ದಿದೆ.

ಡೇಟ್ ಹೊಂದಾಣಿಕೆಯಾಗದ ಕಾರಣ 'ಪೊನ್ನಿಯನ್ ಸೆಲ್ವನ್' ಚಿತ್ರವನ್ನು ಕೈಬಿಡಲು ಪಾರ್ಥಿಬನ್ ತೀರ್ಮಾನಿಸಿದ್ದಾರಂತೆ. ಆದರೆ ಈ ತೀರ್ಮಾನ ಅಭಿಮಾನಿಗಳಿಗೆ ಬೇಸರ ತರಿಸಿದೆ.

Tamil Actor Parthiban Out From Mani Ratnam Movie

ಇನ್ನು ಮತ್ತೊಂದೆಡೆ ಅನುಷ್ಕಾ ಶೆಟ್ಟಿ ಮುಖ್ಯ ಪಾತ್ರವೊಂದರಲ್ಲಿ ನಟಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಅದು ಕೂಡ ನೆರವೇರಲಿಲ್ಲ. ಅನುಷ್ಕಾ ಶೆಟ್ಟಿ ಕೂಡ ಈ ಚಿತ್ರದಲ್ಲಿ ನಟಿಸುವುದು ಬಹುತೇಕ ಅನುಮಾನವಾಗಿದೆ.

ಇನ್ನುಳಿದಂತೆ ಅಮಿತಾಭ್ ಬಚ್ಚನ್, ಐಶ್ವರ್ಯ ರೈ ಬಚ್ಚನ್, ತಮಿಳು ನಟಿ ಚಿಯಾನ್ ವಿಕ್ರಮ್, ಮಲಯಾಳಂ ನಟ ಲಾಲ್, ಕೀರ್ತಿ ಸುರೇಶ್, ತ್ರಿಷಾ, ಜಯಂ ರವಿ, ಕಾರ್ತಿ, ಜ್ಯೋತಿಕಾ ಸೇರಿದಂತೆ ಇನ್ನು ಹಲವರು ಈ ಸಿನಿಮಾದಲ್ಲಿರಲಿದ್ದಾರೆ.

ಮೂಲಗಳ ಪ್ರಕಾರ, ಈ ಚಿತ್ರ ಎರಡು ಭಾಗಗಳಾಗಿ ಮೂಡಿಬರಲಿದ್ದು, ಚಿತ್ರದ ಬಹುತೇಕ ಶೂಟಿಂಗ್ ಥೈಲ್ಯಾಂಡ್ ಅರಣ್ಯದಲ್ಲಿ ನಡೆಯಲಿದೆಯಂತೆ. ಮಣಿರತ್ನಂ, ಶಿವ ಅನಂತ. ಕುಮಾರವೇಲು, ಜೋಯ್ ಮೋಹನ್ ಈ ಚಿತ್ರಕ್ಕೆ ಚಿತ್ರಕತೆ ಮಾಡುತ್ತಿದ್ದಾರೆ.

More from Filmibeat

English summary
Tamil Actor R Parthiban decided to come out from Mani Ratnam's ponniyin selvan movie because of date issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X