For Quick Alerts
  ALLOW NOTIFICATIONS  
  For Daily Alerts

  ತಮಿಳು ನಟ ಶರತ್ ಕುಮಾರ್‌ಗೆ ಕೊರೊನಾ ವೈರಸ್ ದೃಢ

  |

  ತಮಿಳು ಚಿತ್ರರಂಗದ ಹಿರಿಯ ನಟ ಶರತ್ ಕುಮಾರ್ ಅವರಿಗೆ ಕೊರೊನಾ ವೈರಸ್ ತಗುಲಿದೆ. ಈ ವಿಚಾರವನ್ನು ಅವರ ಪತ್ನಿ ರಾಧಿಕಾ ಶರತ್ ಕುಮಾರ್ ಟ್ವಿಟ್ಟರ್ ಮೂಲಕ ಖಚಿತಪಡಿಸಿದ್ದಾರೆ.

  ಶರತ್ ಕುಮಾರ್ ಅವರಿಗೆ ಕೊರೊನಾ ರೋಗದ ಯಾವುದೇ ಲಕ್ಷಣಗಳಿಲ್ಲ, ಆರೋಗ್ಯವಾಗಿದ್ದಾರೆ ಎಂದು ರಾಧಿಕಾ ಮಾಹಿತಿ ನೀಡಿದ್ದಾರೆ.

  ಮೇಘನಾ ಮತ್ತು ಮಗುವಿಗೆ ಕೊರೊನಾ: ಎಲ್ಲರೂ ಆರೋಗ್ಯವಾಗಿದ್ದೇವೆ ಎಂದ ನಟಿ

  ''ಶರತ್ ಕುಮಾರ್ ಅವರಿಗೆ ಇಂದು ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿದ್ದಾರೆ. ಅವರಿಗೆ ರೋಗಲಕ್ಷಣಗಳಿಲ್ಲ. ವೈದ್ಯರು ಒಳ್ಳೆಯ ಚಿಕಿತ್ಸೆ ಕೊಡ್ತಿದ್ದಾರೆ. ಆದಷ್ಟೂ ಬೇಗ ಚೇತರಿಕೆ ಕಾಣಲಿದ್ದಾರೆ ಎಂಬ ಭರವಸೆ ಇದೆ'' ಎಂದು ರಾಧಿಕಾ ಟ್ವೀಟ್ ಮಾಡಿದ್ದಾರೆ.

  ಇದೇ ವಿಚಾರವಾಗಿ ವರಲಕ್ಷ್ಮಿ ಶರತ್ ಕುಮಾರ್ ಸಹ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ''ಅಪ್ಪನಿಗೆ ಕೊರೊನಾ ವೈರಸ್ ದೃಢಪಟ್ಟಿದೆ. ಪ್ರಸ್ತುತ ಹೈದರಾಬಾದ್‌ನಲ್ಲಿದ್ದಾರೆ. ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಲಿದ್ದಾರೆ'' ಎಂದು ಹೇಳಿದ್ದಾರೆ.

  ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದ ಮಾಸ್ಟರ್ ಆನಂದ್ | Filmibeat Kannada

  ಇನ್ನು ಮಣಿರತ್ನಂ ನಿರ್ದೇಶನದಲ್ಲಿ ತಯಾರಾಗುತ್ತಿರುವ 'ಪೊನ್ನಿಯನ್ ಸೆಲ್ವನ್' ಸಿನಿಮಾದಲ್ಲಿ ಶರತ್ ಕುಮಾರ್ ನಟಿಸುತ್ತಿದ್ದಾರೆ. ಈ ಕಡೆ ಕನ್ನಡದಲ್ಲಿ ರೆಮೋ ಮತ್ತು ಯುವರತ್ನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  Tamil senior actor Sarath Kumar Tested COVID19 Positive today. he is asymptomatic and stable.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X