For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ-ಗಾಯಕ ಟಿ ಎಸ್ ರಾಘವೇಂದ್ರ ನಿಧನ

  |

  ಹಿರಿಯ ನಟ ಹಾಗೂ ಗಾಯಕ ಟಿ ಎಸ್ ರಾಘವೇಂದ್ರ ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಟಿ ಎಸ್ ರಾಘವೇಂದ್ರ ಅವರ ಪಾರ್ಥಿವ ಶರೀರವನ್ನು ಚೆನ್ನೈ ಕೆಕೆ ನಗರದಲ್ಲಿರುವ ಸ್ವಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂತ್ಯಕ್ರಿಯೆ ಮಾಡಲಾಗಿದೆ.

  ರಾಘವೇಂದ್ರ ಮೂಲ ಹೆಸರು ರಾಘವೇಂದರ್ ತಮ್ಮ ಪತ್ನಿ ಸುಲೋಚನಾ ಮತ್ತು ಕಲ್ಪನಾ ಮತ್ತು ಪ್ರಸನ್ನ ಎಂಬ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಮಗಳು ವೃತ್ತಿಯಲ್ಲಿ ಗಾಯಕರಾಗಿದ್ದಾರೆ. ರಾಘವೇಂದ್ರ ಅವರ ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ಚಿತ್ರರಂಗದ ಹಲವರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

  ಕೆ ಬಾಲಚಂದಿರ್ ನಿರ್ದೇಶನದ ಸಿಂಧು-ಭೈರವಿ ಚಿತ್ರದಲ್ಲಿ ರಾಘವೇಂದ್ರ ಅವರನ್ನು ಆಯ್ಕೆ ಮಾಡಿಕೊಂಡಿದ್ದರು. ಈ ಸಿನಿಮಾದಲ್ಲಿ ಸುಹಾಸಿನಿ ಅವರ ಮಲ ತಂದೆ ಹಾಗೂ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು. ಈ ಪಾತ್ರಕ್ಕಾಗಿ ಮೆಚ್ಚುಗೆ ಪಡೆದುಕೊಂಡಿದ್ದರು.

  ವಿಕ್ರಮ್, ಜನನಾಯಗಂ, ಹರಿಚಂದ್ರ, ನೀ ವರುವಾಯ್ ಎನಾ ಅಂತಹ ಪ್ರಮುಖ ಸಿನಿಮಾಗಳಲ್ಲಿ ರಾಘವೇಂದ್ರ ಅಭಿನಯಿಸಿದ್ದಾರೆ. 2005ರಲ್ಲಿ ತೆರೆಕಂಡಿದ್ದ 'ಪೊನ್ ಮೆಗಲೈ' ಸಿನಿಮಾದಲ್ಲಿ ಕೊನೆಯ ಬಾರಿಗೆ ರಾಘವೇಂದ್ರ ಕಾಣಿಸಿಕೊಂಡಿದ್ದರು.

  ಕೆಲವು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಕೂಡ ಮಾಡಿದ್ದಾರೆ. ಯಾಗ ಸಲೈ, ಉಯಿರ್ ಮತ್ತು ಪಾದಿಕಥ ಪಾಡಮ್ ಚಿತ್ರದ ಗೀತೆಗಳಿಗೆ ಸಂಗೀತ ನೀಡಿದ್ದಾರೆ.

  Read more about: death died ಸಾವು ನಿಧನ
  English summary
  Tamil senior actor and singer TS Raghavendra passed away on january 29th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X