For Quick Alerts
  ALLOW NOTIFICATIONS  
  For Daily Alerts

  ಮೀರಾ ಮಿಥುನ್ ಗಂಭೀರ ಆರೋಪಗಳಿಗೆ ನಟ ಸೂರ್ಯ ಪ್ರತಿಕ್ರಿಯೆ

  By ಫಿಲ್ಮ್ ಡೆಸ್ಕ್
  |

  ತಮಿಳು ನಟಿ ಮತ್ತು ಬಿಗ್ ಬಾಸ್ ಸ್ಪರ್ಧಿ ಮೀರಾ ಮಿಥುನ್ ನಟ ಸೂರ್ಯ ಮತ್ತು ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಇಬ್ಬರು ಸ್ಟಾರ್ ನಟರು ನೆಪೋಟಿಸಂಗೆ ಪ್ರೋತ್ಸಾಹ ನೀಡುತ್ತಿದ್ದಾರೆ, ತಮಿಳು ಚಿತ್ರರಂಗ ಈ ಇಬ್ಬರು ಸ್ಟಾರ್ ನಟರ ನಿಯಂತ್ರಣದಲ್ಲಿದೆ ಎಂದು ಕಿಡಿಕಾರಿದ್ದರು. ಮೀರಾ ಹೇಳಿಕೆ ಕಾಲಿವುಡ್ ನಲ್ಲಿ ಕಳೆದ ಕೆಲವು ದಿನಗಳಿಂದ ಚರ್ಚೆಗೆ ಕಾರಣವಾಗಿದೆ.

  ಎಲ್ಲಾ ನಮಗೆ ಬೇಕು ಅನ್ನೋರಲ್ಲ ನಾವು | ShivaRajKumar | DCM Ashwath Narayan | Filmibeat Kannada

  ಇದೀಗ ಮೀರಾ ಮಾಡಿರುವ ಆರೋಪಗಳಿಗೆ ನಟ ಸೂರ್ಯ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಸೂರ್ಯ ಮತ್ತು ವಿಜಯ್ ಬೆಂಬಲಕ್ಕೆ ನಿಂತ ಖ್ಯಾತ ನಿರ್ದೇಶಕ ಭಾರತಿರಾಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಮೀರಾ ಮಿಥುನ್ ಹೆಸರನ್ನು ಉಲ್ಲೇಖ ಮಾಡದೆ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಸೂರ್ಯ ಅಂತಹ ಕಾಮೆಂಟ್ ಗಳ ಕಡೆ ಗಮನ ಕೊಡದೆ, ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಮುಂದೆ ಓದಿ...

  ಬಾಲಿವುಡ್ ಗೆ ರಿಮೇಕ್ ಆಗ್ತಿದೆ ಹೆಮ್ಮೆಯ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಸಿನಿಮಾ: ನಾಯಕ ಇವರೆ

  ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳಿ

  ಸಮಯವನ್ನು ಸಮರ್ಥವಾಗಿ ಬಳಸಿಕೊಳ್ಳಿ

  ಈ ಬಗ್ಗೆ ಟ್ವೀಟ್ ಮಾಡಿರುವ ಸೂರ್ಯ ಅಭಿಮಾನಿಗಳಿಗೆ "ನನ್ನ ಸಹೋದರ, ಸಹೋದರಿಯರೆ ಸಮಯ ಮತ್ತು ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಂಡು, ರಚನಾತ್ಮಕ ವಿಷಯಗಳಿಗೆ ಸಮಯ ಕಳೆಯಬೇಕೆಂದು ನಾನು ಬಯಸುತ್ತೇನೆ. ಲೆಜಂಡರಿ ನಿರ್ದೇಶಕ ಭಾರತಿರಾಜ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು" ಎಂದು ಹೇಳಿದ್ದಾರೆ.

  ಅಂತಹ ಕಾಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡಬೇಡಿ

  ಅಂತಹ ಕಾಮೆಂಟ್ ಗಳಿಗೆ ಪ್ರತಿಕ್ರಿಯೆ ನೀಡಬೇಡಿ

  ಇನ್ನೂ ಸೂರ್ಯ ತಮ್ಮದೆ ಹಳೆಯ ಟ್ವೀಟ್ ಅಂದರೆ 2018ರಲ್ಲಿ ಮಾಡಿದ್ದ ಟ್ವೀಟ್ ಅನ್ನು ಮತ್ತೆ ಉಲ್ಲೇಖಿಸಿ ಅಭಿಮಾನಿಗಳು ಅಂತಹ ಕಾಮೆಂಟ್ ಗಳಿಗೆ ಪ್ರತಿಕ್ರಿಯಿಸಿ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳಬಾರದು ಎಂದಿದ್ದಾರೆ.

  ಒಂದಾಗುತ್ತಿದೆ ಸಹೋದರರ ಜೋಡಿ: ರೀಮೇಕ್ ಸಿನಿಮಾದಲ್ಲಿ ಕಾರ್ತಿ-ಸೂರ್ಯ

  ಮೀರಾ ಮಿಥುನ್ ಮಾಡಿರುವ ಆರೋಪಗಳು

  ಮೀರಾ ಮಿಥುನ್ ಮಾಡಿರುವ ಆರೋಪಗಳು

  ಮೀರಾ ಮಿಥುನ್ ತಮಿಳು ನಟ ಸೂರ್ಯ ಮತ್ತು ವಿಜಯ್ ಅವರನ್ನು 'ಕಾಲಿವುಡ್ ಮಾಫಿಯಾ ಗ್ಯಾಂಗ್' ಎಂದು ಕರೆದಿದ್ದರು. ಇಬ್ಬರು ನಟರು ತಮಿಳು ಚಿತ್ರಿರಂಗದಲ್ಲಿ ಸ್ವಜನಪಕ್ಷಪಾತವನ್ನು ಪ್ರೋತ್ಸಾಹಿಸುತ್ತಿದ್ದಾರೆ, ತಮಿಳು ಚಿತ್ರರಂಗವನ್ನು ನಿಯಂತ್ರಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ತನ್ನನ್ನು ಗುರಿಯಾಗಿಸಿಕೊಂಡು ಟ್ರೋಲ್ ಮಾಡಲು, ಟ್ರೋಲ್ ಪೇಜ್ ಗಳಿಗೆ ಹಣ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.

  ಸೂರ್ಯ ಸಿನಿಮಾಗಳು

  ಸೂರ್ಯ ಸಿನಿಮಾಗಳು

  ನಟ ಸೂರ್ಯ ಸದ್ಯ ಸೂರರೈ ಪೋಟ್ರು ಸಿನಿಮಾ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಬೇಕುತ್ತು. ಆದರೀಗ ಸಿನಿಮಾ ರಿಲೀಸ್ ಮುಂದ್ಕಕೆ ಹೋಗಿದೆ. ನಿರೀಕ್ಷೆಯನ್ನು ಹುಟ್ಟುಹಾಕಿರುವ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಸಿನಿಮಾ ಬಳಿಕ ಸೂರ್ಯ ಅಧಿಕೃತವಾಗಿ ಯಾವುದೆ ಸಿನಿಮಾ ಅನೌನ್ಸ್ ಮಾಡಿಲ್ಲ.

  English summary
  Tamil Actor Surya reaction to Meera Mithun Accusation. Tamil Actor Surya Thanks to Director Bharathiraja for his support.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X