ನಿಶ್ಚಿತಾರ್ಥ ಮುರಿದುಬಿದ್ದ ಬಳಿಕ ಮೊದಲ ಬಾರಿಗೆ ಮದುವೆ ಬಗ್ಗೆ ಮಾತನಾಡಿದ ನಟ ವಿಶಾಲ್

By ಫಿಲ್ಮ್ ಡೆಸ್ಕ್

ತಮಿಳು ನಟ ವಿಶಾಲ್ ಕಳೆದ ಎರಡು ವರ್ಷಗಳ ಹಿಂದೆ ಗೆಳತಿ ಅನಿಶಾ ರೆಡ್ಡಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರು. ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ಇಬ್ಬರ ಮದುವೆ ನಿಶ್ಚಿತಾರ್ಥದಲ್ಲೇ ಮುರಿದು ಬಿದ್ದಿತ್ತು.

ವಿಶಾಲ್ ಮದುವೆ ಬ್ರೇಕಪ್ ವಿಚಾರ ಗುಟ್ಟಾಗಿ ಉಳಿದಿಲ್ಲ. ಅಲ್ಲದೆ ವಿಶಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮಾಜಿ ಪ್ರೇಯಸಿ ಅನಿಶಾ ರೆಡ್ಡಿ ಇತ್ತೀಚಿಗೆ ಉದ್ಯಮಿ ಕೈ ಹಿಡಿದಿದ್ದಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿತ್ತು. ಆದರೆ ಇದ್ಯಾವುದರ ಬಗ್ಗೆಯೂ ವಿಶಾಲ್ ಪ್ರತಿಕ್ರಿಯೆ ನೀಡಿರಲಿಲ್ಲ.

ಇದೀಗ ಮೊದಲ ಬಾರಿಗೆ ಮದುವೆ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನಟ ವಿಶಾಲ್ ವೈಯಕ್ತಿಕ ಜೀವನದ ಮನಬಿಚ್ಚಿ ಮಾತನಾಡಿದ್ದಾರೆ. ಡೆಸ್ಟಿನಿಯನ್ನು ನಂಬುವ ವಿಶಾಲ್ ಸದ್ಯ ಸಿಂಗಲ್ ಆಗಿರುವುದಾಗಿ ಹೇಳಿದ್ದಾರೆ.

Tamil actor vishal talks about his marriage plan

'ಮದುವೆ ಸಮಯ ಬಂದಾಗ ಆದಾಗೆ ಆಗುತ್ತೆ. ಗೋ ವಿತ್ ಫ್ಲೋ ಎಂದು ನಾನು ಜೀವಿಸುತ್ತಿದ್ದೀನಿ. ನಾನು ನಟನಾಗುತ್ತೇನೆ, ನಿರ್ಮಾಪಕನಾಗುತ್ತೇನೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ' ಎಂದಿದ್ದಾರೆ.

'ನಾನು ನಿರ್ದೇಶಕನಾಗಬೇಕೆಂದು ಬಂದೆ. ನನ್ನ 16 ವರ್ಷದ ಪಯಣ ಇಷ್ಟು ಉತ್ತಮವಾಗಿರುತ್ತೆ ಎಂದು ಯಾವತ್ತು ಅಂದುಕೊಂಡಿರಲಿಲ್ಲ. ನಾನು ಯಾವತ್ತು ಪ್ಲಾನ್ ಮಾಡಿ ಮಾಡುವವನಲ್ಲ. ಮುಂದಿನ ಸಂದರ್ಶನದ ಸಮಯದಲ್ಲಿ ಗುಡ್ ನ್ಯೂಸ್ ಕೊಡಬಹುದು' ಎಂದು ಹೇಳಿದ್ದಾರೆ.

ನಟ ವಿಶಾಲ್ ಮತ್ತು ಅನಿಶಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. 2019 ಮಾರ್ಚ್ ನಲ್ಲಿ ವಿಶಾಲ್ ಮತ್ತು ಅನಿಶಾ ಅವರ ನಿಶ್ಚಿತಾರ್ಥ ನಡೆದಿತ್ತು. ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಬೇಕಿತ್ತು. ಆದರೆ ವಿಶಾಲ್ ಮತ್ತು ಅನಿಶಾ ಮದುವೆ ಬ್ರೇಕ್ ಅಪ್ ಮಾಡಿಕೊಳ್ಳುವ ಮೂಲಕ ಶಾಕ್ ನೀಡಿದ್ದರು.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ವಿಶಾಲ್, ಇತ್ತೀಚಿಗಷ್ಟೆ ಚಕ್ರ ಸಿನಿಮಾ ಮೂಲಕಅಭಿಮಾನಿಗಳ ಮುಂದೆ ಬಂದಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ಶ್ರದ್ಧಾ ಶ್ರೀನಾಥ್ ಕಾಣಿಸಿಕೊಂಡಿದ್ದಾರೆ. ನಟ ಆರ್ಯ ಜೊತೆ ಎನಿಮಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತುಪ್ಪರಿವಾಲನ್-2 ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.

More from Filmibeat

English summary
After Engagement breakup Tamil actor vishal first time talks about his marriage plan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X