For Quick Alerts
  ALLOW NOTIFICATIONS  
  For Daily Alerts

  ತಮಿಳು ಸಿನಿಮಾ ನಿರ್ಮಾಪಕ ಕೆ ಬಾಲು ನಿಧನ

  |

  ತಮಿಳು ಸಿನಿಮಾ ನಿರ್ಮಾಪಕ ಕೆ.ಬಾಲು ನಿನ್ನೆ (ಜನವರಿ 1) ರಂದು ರಾತ್ರಿ ನಿಧನ ಹೊಂದಿದ್ದಾರೆ. ಅವರು ಕೆಲವು ದಿನಗಳ ಮುಂದೆ ಕೊರೊನಾ ವೈರಸ್‌ ಸೋಕಿಗೆ ತುತ್ತಾಗಿದ್ದರು. ಆದರೆ ಅವರ ಸಾವು ಹೃದಯಾಘಾತದಿಂದ ಆಗಿದೆ ಎಂದು ವೈದ್ಯರು ಹೇಳಿದ್ದಾರೆ. ಅವರ ಅಂತಿಮ ಸಂಸ್ಕಾರ ಇಂದು ಚೆನ್ನೈನ ಬೆಸೆಂಟ್ ನಗರದಲ್ಲಿ ನಡೆಯಲಿದೆ.

  ಕೆಪಿ ಫಿಲಮ್ಸ್ ಹೆಸರಿನ ಪ್ರೊಡಕ್ಷನ್ ಹೌಸ್ ಹೊಂದಿದ್ದ ಕೆ.ಬಾಲು ಕೆಲವು ಉತ್ತಮ ತಮಿಳು ಸಿನಿಮಾಗಳನ್ನು ನಿರ್ಮಿಸಿದ್ದರು. ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ಮಾಪಕರಾಗಿ, ವಿತರಕರಾಗಿ ಕಾರ್ಯ ನಿರ್ವಹಿಸಿದ್ದರು.

  ಕೆ.ಬಾಲು ನಿಧನಕ್ಕೆ ತಮಿಳು ಚಿತ್ರರಂಗ ಕಂಬನಿ ಮಿಡಿದಿದೆ. ನಟ ಶರತ್ ಕುಮಾರ್ ಟ್ವೀಟ್ ಮಾಡಿ, 'ಕೆ.ಬಾಲು ನಿಧನ ಸುದ್ದಿ ಕೇಳಿ ಆಘಾತವಾಗಿದೆ. ಅವರ ಸಾವು ಚಿತ್ರರಂಗದಲ್ಲಿ ನಿರ್ವಾತ ಸೃಷ್ಟಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಮತ್ತು ನನ್ನ ಕುಟುಂಬದ ಕಡೆಯಿಂದ ಸಂತಾಪಗಳು' ಎಂದಿದ್ದಾರೆ.

  ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ಮಾಪಕ ಧನಂಜಯ್ ಸಹ ಟ್ವೀಟ್ ಮಾಡಿದ್ದು, 'ಕೆ ಬಾಲು ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಬಹಳ ಬೇಸರದ ಸುದ್ದಿಯಿದು. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದಿದ್ದಾರೆ.

  Shivaraj Kumar and Rakshith Shetty awarded Dadasaheb Phalke Award south 2020 | Filmibeat kannada

  ಕೆ.ಬಾಲು ಅವರು 1991 ರಲ್ಲಿ ಚಿನ್ನತಂಬಿ, 1992 ರಲ್ಲಿ ಪಂಡಿತುರೈ, 1996 ರಲ್ಲಿ ಪಂಚಾಲಂಕುರಿಚಿ ಹಾಗೂ ಇನ್ನೂ ಕೆಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಕೆಲವು ಸಿನಿಮಾಗಳಿಗೆ ಸಹ ನಿರ್ಮಾಪಕರಾಗಿಯೂ ಕೆಲಸ ಮಾಡಿದ್ದಾರೆ.

  English summary
  Tamil movie producer K Balu passed away yesterday. actors and producers express their condolence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X