For Quick Alerts
  ALLOW NOTIFICATIONS  
  For Daily Alerts

  ಕಾಲಿವುಡ್‌ನಲ್ಲಿ KGF ಸತ್ಯ ಕಥೆ.. ಅಖಾಡಕ್ಕಿಳಿದ ವಿಕ್ರಂ - ಪಾ. ರಂಜಿತ್: ಇಲ್ಲಿದೆ ಬಿಗ್ ಅಪ್‌ಡೇಟ್

  |

  KGF ಅಂದಾಕ್ಷಣ ಸಿನಿರಸಿಕರು ಒಂದು ಕ್ಷಣ ಅಲರ್ಟ್ ಆಗ್ತಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಸರಣಿ ಬರೆದ ದಾಖಲೆಗಳು ಒಂದೆರಡಲ್ಲ. ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಕನ್ನಡ ಸಿನಿಮಾಗಳ ಮಾರುಕಟ್ಟೆಯನ್ನು ವಿಸ್ತರಿಸಿದ ಸಿನಿಮಾ. ಇದೀಗ ಕಾಲಿವುಡ್ ಸರದಿ. ತಮಿಳು ಚಿತ್ರರಂಗದಲ್ಲಿ KGF ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಚಿತ್ರದ ಟೆಸ್ಟ್ ಶೂಟ್ ಶುರುವಾಗಿದೆ.

  'ಕಬಾಲಿ' ಹಾಗೂ 'ಕಾಲಾ' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶಿದ ಪಾ. ರಂಜಿತ್ KGF ಅಸಲಿ ಕಥೆಯನ್ನು ಹೇಳಲು ಮುಂದಾಗಿದ್ದಾರೆ. ಚಿಯಾನ್ ವಿಕ್ರಂ ಚಿತ್ರದಲ್ಲಿ ಹೀರೊ ಅಗಿ ನಟಿಸ್ತಿದ್ದು, ಈಗಾಗಲೇ ಈ ಬಗ್ಗೆ ವಿಕ್ರಂ ಕೂಡ ಮಾತನಾಡಿದ್ದಾರೆ. ಬಹಳ ಹಿಂದೆಯೇ ನಿರ್ದೇಶಕರು KGF ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿ ಸಿನಿಮಾ ಮಾಡಲು ಮುಂದಾಗಿದ್ದರು. ಆದರೆ ಅದೇ ಸಮಯದಲ್ಲಿ ಕನ್ನಡದಲ್ಲೂ KGF ಸಿನಿಮಾ ಬರುತ್ತೆ ಎಂದು ಗೊತ್ತಾಗಿ ಸುಮ್ಮನಾಗಿದ್ದರು. ಆದರೆ ಕನ್ನಡ ಸಿನಿಮಾ ನೋಡಿದ ಮೇಲೆ ಇದು ಕಾಲ್ಪನಿಕ ಕಥೆ ಎಂದು ಗೊತ್ತಾಗಿದೆ. ಹಾಗಾಗಿ ಅಸಲಿ ಕಥೆ ನಾವು ಹೇಳ್ತೀವಿ ಎನ್ನುತ್ತಿದ್ದಾರೆ.

  11 ದಿನಕ್ಕೆ 'ಕಾಂತಾರ' ಕಲೆಕ್ಷನ್ 75 ಕೋಟಿ.. 'ಪೊನ್ನಿಯಿನ್' ಸೆಲ್ವನ್ 400 ಕೋಟಿ: ಆದರೆ ಗೆದ್ದಿದ್ದು ಮಾತ್ರ ಕನ್ನಡ ಸಿನಿಮಾ!11 ದಿನಕ್ಕೆ 'ಕಾಂತಾರ' ಕಲೆಕ್ಷನ್ 75 ಕೋಟಿ.. 'ಪೊನ್ನಿಯಿನ್' ಸೆಲ್ವನ್ 400 ಕೋಟಿ: ಆದರೆ ಗೆದ್ದಿದ್ದು ಮಾತ್ರ ಕನ್ನಡ ಸಿನಿಮಾ!

  ಚಿಯಾನ್ ವಿಕ್ರಂ 'ಕೋಬ್ರಾ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಆದರೆ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಲೀಡ್ ರೋಲ್‌ನಲ್ಲಿ ವಿಕ್ರಂ ನಟಿಸಿದ್ದಾರೆ. ಇದೀಗ ತಮ್ಮ 61ನೇ ಚಿತ್ರಕ್ಕಾಗಿ ಪಾ. ರಂಜಿತ್ ಜೊತೆ ಕೈ ಜೋಡಿಸಿದ್ದಾರೆ. ರಾ ಮೇಕಿಂಗ್‌ನಿಂದ ನಿರ್ದೇಶಕರು ಸಖತ್ ಸದ್ದು ಮಾಡುತ್ತಿದ್ದಾರೆ. ಕನ್ನಡ KGF ಚಿತ್ರಕಿಂತಲೂ ರಗಡ್ ಆಗಿ ಸಿನಿಮಾ ಕಟ್ಟಿಕೊಡಲು ಮುಂದಾಗಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ತ್ರೀಡಿಯಲ್ಲೂ ಬರಲಿದೆಯಂತೆ. ಚೆನ್ನೈನಲ್ಲಿ ಇಂದಿನಿಂದ ಟೆಸ್ಟ್ ಶೂಟ್ ಶುರುವಾಗಿದೆಯಂತೆ. ಪಾ. ರಂಜಿತ್ ಕಲ್ಪನೆಯ KGF ಸಿನಿಮಾ ಹೇಗಿರುತ್ತದೋ ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ.

  ಪ್ರಶಾಂತ್ ನೀಲ್ KGF ಚಿನ್ನದ ಗಣಿಯ ಹಿನ್ನೆಲೆಯಲ್ಲಿ ಒಂದು ಆಕ್ಷನ ಸಿನಿಮಾ ಕಟ್ಟಿಕೊಟ್ಟಿದ್ದರು. ಆದರೆ ರಂಜಿತ್ ಬೇರೆಯಸ್ದೇ ಕಥೆ ಹೇಳಲು ಹೊರಟಿದ್ದಾರೆ. KGFನಲ್ಲಿ ಬಹಳ ಹಿಂದೆ ಏನಾಗಿತ್ತು, ಅಲ್ಲಿನ ಸಮುದಾಯಗಳ ನಡುವೆ ನಡೆದ ಘರ್ಷಣೆಗಳು, ಪ್ರಾದೇಶಿಕ ರಾಜಕೀಯ ವಿಷಯಗಳ ಕುರಿತಾಗಿ ಈ ಕತೆ ಬರೆಯಲಾಗಿದೆ ಎನ್ನುತ್ತಿದ್ದಾರೆ. ಚೆನ್ನಾಗಿ ಮಾಡಿದರೆ ಈ ಚಿತ್ರಕ್ಕೆ ಆಸ್ಕರ್ ಬರುವ ಸಾಧ್ಯತೆಯಿದೆ ಎಂದು ಈ ಹಿಂದೆ ಬೆಂಗಳೂರಿಗೆ ಬಂದಿದ್ದ ವಿಕ್ರಂ ಹೇಳಿದ್ದರು. ನಟನಾಗಿ ನಟಗೆ ಅಲ್ಲದಿದ್ದರೂ ಚಿತ್ರಕ್ಕೆ ಅವಾರ್ಡ್ ಗ್ಯಾರೆಂಟಿ ಎಂದಿದ್ದರು. ವಿಕ್ರಂ ಇಷ್ಟೆಲ್ಲಾ ಹೇಳ್ತಿದ್ದಾರೆ ಎಂದಮೇಲೆ ಚಿತ್ರದಲ್ಲಿ ಅಂಥಾದ್ದೇನಿರುತ್ತೆ ಎನ್ನುವ ನಿರೀಕ್ಷೆ ಮೂಡಿದೆ.

  Test shoot of KGF featuring Chiyaan Vikram takes place in Chennai

  ವಿಕ್ರಂ ಮಾತು ಕೇಳಿ ಕೆಲವರು ಪ್ರಶಾಂತ್ ನೀಲ್ KGF ದಾಖಲೆ ಮುರಿಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಮಾಸ್ಟರ್‌ಪೀಸ್ ಸಿನಿಮಾ. ನೋಡೊಣ, ಸಿನಿಮಾ ಬಂದಮೇಲೆ ಎಂದು ಕಾಮೆಂಟ್ ಮಾಡಿದ್ದರು. ಚಿತ್ರದಲ್ಲಿ 1800ರ ಕಾಲಘಟ್ಟದ ಕಥೆಯನ್ನು ಹೇಳುವ ಪ್ರಯತ್ನ ನಡೀತಿದೆಯಂತೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಲಿದೆ. ವಿಕ್ರಂ ಗಡ್ಡಬಿಟ್ಟು ಪಾತ್ರಕ್ಕಾಗಿ ತಯಾರಿ ನಡೆಸಿದ್ದಾರೆ. ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈಗಾಗಲೇ KGF ಸಿನಿಮಾ ಬಂದು ಸೂಪರ್ ಹಿಟ್ ಆಗಿರುವುದರಿಂದ ವಿಕ್ರಂ- ರಂಜಿತ್ ಸಿನಿಮಾ ಹೇಗೆ ಸದ್ದು ಮಾಡುತ್ತೋ ಕಾದು ನೋಡಬೇಕು.

  English summary
  Test shoot of KGF featuring Chiyaan Vikram takes place in Chennai. The film, directed by Pa Ranjith, is set in the pre-independence era and talks about a marginalised community in the Kolar Gold Field.know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X