twitter
    For Quick Alerts
    ALLOW NOTIFICATIONS  
    For Daily Alerts

    'ತಲೈವಿ' ಯಶಸ್ಸಿನ ಬೆನ್ನಲ್ಲೆ ಭರ್ಜರಿ ಸುದ್ದಿ ನೀಡಿದ ನಿರ್ಮಾಪಕ

    |

    ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ಸಿನಿಮಾ ತಲೈವಿ ಬಿಡುಗಡೆಯಾಗಿದ್ದು, ಎಲ್ಲೆಡೆಯೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ವೈಯಕ್ತಿಕವಾಗಿ ನಟಿ ಕಂಗನಾ ರಣಾವತ್ ನಟನೆ ಸಹ ಮೆಚ್ಚುಗೆ ಪಡೆದುಕೊಂಡಿದೆ. ತೆರೆಮೇಲೆ ಜಯಲಲಿತಾ ಅವರ ಪಾತ್ರದಲ್ಲಿ ಕಂಗನಾ ಬಹಳ ಚೆನ್ನಾಗಿ ನಟಿಸಿದ್ದಾರೆ ಎಂದು ಹೊಗಳಿದ್ದಾರೆ ಪ್ರೇಕ್ಷಕರು.

    ತಲೈವಿ ಚಿತ್ರದಲ್ಲಿ ಜಯಲಲಿತಾ ಅವರ ಬಾಲ್ಯ, ಸಿನಿಮಾ ಜರ್ನಿ ಹಾಗೂ ರಾಜಕೀಯ ಜೀವನ ತೋರಿಸಿದ್ದರೂ ಪರಿಪೂರ್ಣವಾಗಿಲ್ಲ ಎನ್ನುವುದು ವಾಸ್ತವ. ಇದೀಗ, ತಲೈವಿ ಚಿತ್ರತಂಡ ಸೀಕ್ವೆಲ್ ಮಾಡಲು ಮನಸ್ಸು ಮಾಡಿದೆ ಎಂಬ ವಿಚಾರ ಹೊರಬಿದ್ದಿದೆ. ಈ ಕುರಿತು ತಲೈವಿ ಚಿತ್ರದ ಸಹ ಬರಹಗಾರ ರಜತ್ ಆರೋರ ಮಾಹಿತಿ ನೀಡಿದ್ದು, ತಲೈವಿ ಮುಂದುವರಿದ ಭಾಗ ನಿರ್ಮಿಸಲು ಮೇಕರ್ಸ್ ಚಿಂತಿಸಿದ್ದು, ಅದಕ್ಕಾಗಿ ತಯಾರಿ ನಡೆದಿದೆಯಂತೆ.

    ಕಂಗನಾ ರಣಾವತ್ 'ತಲೈವಿ' ನೋಡಿ ಮೆಚ್ಚಿದ 'ತಲೈವಾ' ಕಂಗನಾ ರಣಾವತ್ 'ತಲೈವಿ' ನೋಡಿ ಮೆಚ್ಚಿದ 'ತಲೈವಾ'

    ಜಯಲಲಿತಾ ಅವರ ಜರ್ನಿ ಬಹಳ ವಿಸ್ತಾರವಾಗಿದೆ. ಎರಡೂವರೆ ಗಂಟೆಯಲ್ಲಿ ಎಲ್ಲವನ್ನು ತೋರಿಸಲು ಆಗಲ್ಲ. ಸಿನಿಮಾ ಜರ್ನಿಯಿಂದ ಸಿಎಂ ಕುರ್ಚಿವರೆಗೂ ಅವರು ನಡೆದು ಬಂದ ಕತೆಯನ್ನು ತಲೈವಿ ಬಿಂಬಿಸಿತ್ತು. ಸಿಎಂ ಆದ ಬಳಿಕ ಅವರ ಜರ್ನಿ ಇನ್ನು ದೊಡ್ಡದಿದೆ. ತಮಿಳುನಾಡು ರಾಜಕೀಯದಲ್ಲಿ ಬಹಳ ಪ್ರಮುಖ ಘಟನೆಗಳಿಗೆ ಜಯಲಲಿತಾ ಸಾಕ್ಷಿಯಾಗಿದ್ದರು. ಇದೆಲ್ಲವನ್ನು ತಲೈವಿ ಪರಿಪೂರ್ಣವಾಗಿ ಹೊಂದಿಲ್ಲ. ಹಾಗಾಗಿ, ಪಾರ್ಟ್ 2 ಮಾಡಬಹುದು. ಜಯಲಲಿತಾ ಸಿಎಂ ಆದ್ಮೇಲಿನ ಜೀವನದ ಬಗ್ಗೆ ಪ್ರಮುಖ ಬೆಳಕು ಚೆಲ್ಲಬಹುದು ಎನ್ನುವ ವಿಚಾರ ಚರ್ಚೆಯಲ್ಲಿದೆ.

    Thalaivii sequel work has begun

    ಈ ಕುರಿತು ಸಹ ಬರಹಗಾರ ರಜತ್ ಆರೋರ ಪ್ರತಿಕ್ರಿಯೆ ನೀಡಿದ್ದು, ''ಸಿನಿಮಾದ ಹುಡುಗಿ ಸಿಎಂ ಸ್ಥಾನ ತಲುಪಿದ ಕಥೆಯನ್ನು ಹೇಳಲು ಬಯಸಿದ್ದೇವು. ಇದು ಮೊದಲೇ ನಿರ್ಧಾರವಾಗಿತ್ತು. ಅದಕ್ಕಾಗಿಯೇ ಪೋಸ್ಟರ್‌ನಲ್ಲೂ 'ಸಿನಿಮಾ ಸೆ ಸಿಎಂ ತಕ್ (ಸಿನಿಮಾದಿಂದ ಸಿಎಂಗೆ)' ಎಂದು ಉಲ್ಲೇಖಿಸಲಾಗಿದೆ. ಅವರ ರಾಜಕೀಯ ಜೀವನ 20-30 ವರ್ಷಗಳ ಇನ್ನೊಂದು ಅಧ್ಯಾಯವಾಗಿದೆ. ಅದನ್ನು 15 ನಿಮಿಷಗಳಲ್ಲಿ ತೋರಿಸಿದ್ದರೆ ನ್ಯಾಯ ಸಿಗುತ್ತಿರಲಿಲ್ಲ.'' ಎಂದಿದ್ದಾರೆ.

    ಎಂಜಿಆರ್, ಜಯಲಲಿತಾ ಬಗ್ಗೆ ತಪ್ಪು ಮಾಹಿತಿ: 'ತಲೈವಿ' ಸಿನಿಮಾ ಬಗ್ಗೆ ಆಕ್ಷೇಪಎಂಜಿಆರ್, ಜಯಲಲಿತಾ ಬಗ್ಗೆ ತಪ್ಪು ಮಾಹಿತಿ: 'ತಲೈವಿ' ಸಿನಿಮಾ ಬಗ್ಗೆ ಆಕ್ಷೇಪ

    ಮಾತು ಮುಂದುವರಿಸಿ, ''ಜಯಲಲಿತಾ ಅವರ ಪ್ರಯಾಣವನ್ನು ಇನ್ನಷ್ಟು ಆಳವಾಗಿ ತೋರಿಸಲು ಬಯಸಿದರೆ, ಅದನ್ನು ಭಾಗ 2ರಲ್ಲಿ ತೋರಿಸುತ್ತೇವೆ ಎಂಬ ಉದ್ದೇಶ ಯಾವಾಗಲೂ ಇತ್ತು. ನಾವು ಕಂಗನಾ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದೇವೆ. ಸಿಎಂ ಆದ ನಂತರ ಆಕೆಯ ಪಯಣವನ್ನು ನಾವು ತೋರಿಸಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ನೀವು ಇನ್ನೂ ಹೆಚ್ಚಿನ ಕಥೆ ತೋರಿಸಲು ಬಾಕಿಯಿದೆ ಎಂದು ಹೇಳುತ್ತಿದ್ದರೆ, ಖಂಡಿತವಾಗಿಯೂ ಅದನ್ನು ತೋರಿಸಬಹುದು. ಕಥೆ ಇನ್ನು ಇದೆ. ಆದಾಗ್ಯೂ, ನಾವು (ಇಡೀ ತಂಡ) ಭೇಟಿಯಾದ ನಂತರ ಇದನ್ನು ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಎಂಬುದನ್ನು ಚರ್ಚಿಸುತ್ತೇವೆ"ಎಂದು ರಜತ್ ಹೇಳಿದರು.

    Thalaivii sequel work has begun

    ಎ ಎಲ್ ವಿಜಯ್ ನಿರ್ದೇಶಿಸಿರುವ 'ತಲೈವಿ' ಚಿತ್ರವನ್ನು ವಿಷ್ಣುವರ್ಧನ್ ಇಂದೂರಿ ಮತ್ತು ಶೈಲೇಶ್ ಆರ್ ಸಿಂಗ್ ಜಂಟಿಯಾಗಿದೆ ನಿರ್ಮಿಸಿದ್ದಾರೆ. ಹಿತೇಶ್ ಥಕ್ಕರ್ ಮತ್ತು ತಿರುಮಲ್ ರೆಡ್ಡಿ ಸಹ-ನಿರ್ಮಾಪಕರಾಗಿ ಸಾಥ್ ನೀಡಿದ್ದಾರೆ. ಸೆಪ್ಟೆಂಬರ್ 10 ರಂದು ಜೀ ಸ್ಟುಡಿಯೋಸ್ ಮೂಲಕ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ತಲೈವಿ ಬಿಡುಗಡೆಯಾಗಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ಹಾಗೂ ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಕಾಣಿಸಿಕೊಂಡಿದ್ದಾರೆ.

    Thalaivii sequel work has begun

    ಬಿಡುಗಡೆಗೂ ಮುಂಚೆಯೇ ತಲೈವಿ ಸಿನಿಮಾ 85 ಕೋಟಿ ಬಿಸಿನೆಸ್ ಮಾಡಿದೆ. ಥಿಯೇಟರ್‌ನಲ್ಲಿ ಬಂದ ಕೆಲವು ವಾರಗಳ ಬಳಿಕ ಒಟಿಟಿಯಲ್ಲಿ ಪ್ರೀಮಿಯರ್ ಮಾಡುವಂತೆ ಒಪ್ಪಂದ ಮಾಡಿಕೊಂಡಿದ್ದು, ಬಾಲಿವುಡ್ ಲೈಫ್ ವೆಬ್‌ಸೈಟ್ ವರದಿ ಮಾಡಿರುವಂತೆ ಅಮೇಜಾನ್ ಮತ್ತು ನೆಟ್‌ಪ್ಲಿಕ್ಸ್ ಎರಡೂ ಒಟಿಟಿಗಳು ತಲೈವಿ ಪ್ರಸಾರ ಹಕ್ಕಿಗೆ 55 ಕೋಟಿ ನೀಡಿದೆಯಂತೆ.

    English summary
    Thalaivii sequel work has begun. This part will show jayalalithaa's detailed journey after becoming CM.
    Wednesday, September 22, 2021, 17:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X