ವಿಜಯ್ ಅಭಿಮಾನಿಗಳಿಗೆ ಮತ್ತೊಮ್ಮೆ ನಿರಾಸೆ: ಸಂಕ್ರಾಂತಿಗೂ ಮಾಸ್ಟರ್ ಅನುಮಾನ?

ತಮಿಳು ನಟ ವಿಜಯ್ ನಟಿಸಿರುವ ಬಹುನಿರೀಕ್ಷೆಯ ಸಿನಿಮಾ ಮಾಸ್ಟರ್ ಜನವರಿಯಲ್ಲಿ ತೆರೆಕಾಣಬಹುದು ಎಂದು ಹೇಳಲಾಗುತ್ತಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಮಾಸ್ಟರ್ ತೆರೆಗೆ ಬರಲು ಸಜ್ಜಾಗಿದೆ ಎಂದ ಅಭಿಮಾನಿಗಳು ನಂಬಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಮಾಸ್ಟರ್ ಸಿನಿಮಾ ಸಂಕ್ರಾಂತಿಗೂ ಬರುವುದಿಲ್ಲ ಎನ್ನಲಾಗಿದೆ. ಹೊಸ ವರ್ಷದ ಪ್ರಯುಕ್ತ ಮಾಸ್ಟರ್ ಟ್ರೈಲರ್ ಬಿಡುಗಡೆಯಾಗಬಹುದು. ಆದ್ರೆ, ಸಿನಿಮಾ ರಿಲೀಸ್ ದಿನಾಂಕ ಸದ್ಯಕ್ಕೆ ಖಚಿತವಾಗಿಲ್ಲ.

ಒಂದು ವೇಳೆ ಸಂಕ್ರಾಂತಿ ಹಬ್ಬಕ್ಕೆ ಸಿನಿಮಾ ಬಂದಿಲ್ಲವಾದರೆ, ಮುಂದಿನ ದಿನಾಂಕ ಏಪ್ರಿಲ್ ಗೆ ಎಂದು ವರದಿಯಾಗಿದೆ. ಏಪ್ರಿಲ್ 14 ರಂದು ಮಾಸ್ಟರ್‌ಗೆ ಎಂಟ್ರಿಗೆ ದಿನಾಂಕ ನಿಗದಿಯಾಗಿದೆ ಎಂದು ಸುದ್ದಿಗಳು ಹರಿದಾಡಿದೆ.

Vijay Master Might Not Release On Pongal

ಸಿನಿಮಾ ಆರಂಭವಾದಗ ಮಾಸ್ಟರ್ ಸಿನಿಮಾ 2020ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿತ್ತು. ಆದ್ರೆ, ಕೊರೊನಾ ಲಾಕ್‌ಡೌನ್ ಕಾರಣ ಎಲ್ಲ ಪ್ಲಾನ್‌ಗಳ ತಲೆಕೆಳಗಾಯಿತು. ಈಗ ಹೊಸ ರಿಲೀಸ್ ದಿನಾಂಕ ಘೋಷಣೆ ಮಾಡಲು ಚಿತ್ರತಂಡ ಸಜ್ಜಾಗಿಲ್ಲ.

ಈ ಹಿಂದೆ ವರದಿಯಾದಂತೆ ದೀಪಾವಳಿಗೆ ವಿಜಯ್ ಸಿನಿಮಾಗಳು ತೆರೆಕಾಣುವುದು ಸಂಪ್ರದಾಯ. ಅದರಂತೆ ಮಾಸ್ಟರ್ ಸಹ ಬೆಳಕಿನ ಹಬ್ಬಕ್ಕೆ ಬರಬಹುದು ಎಂದು ನಿರೀಕ್ಷಿಸಿದ್ದರು. ಅದು ಸಹ ನೆರವೇರಿಲ್ಲ. ಹೀಗಾಗಿ, ಮಾಸ್ಟರ್ ರಿಲೀಸ್ ಬಗ್ಗೆ ಅಭಿಮಾನಿಗಳು ಹೆಚ್ಚು ಯೋಚಿಸುತ್ತಿದ್ದಾರೆ.

ಅಂದ್ಹಾಗೆ, ಲೋಕೇಶ್ ಕನಕರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಮಾಳವಿಕಾ ಮೋಹನ್ ನಾಯಕಿಯಾಗಿ ನಟಿಸಿದ್ದಾರೆ. ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದರಿಂದ ಮಾಸ್ಟರ್ ಬಗ್ಗೆ ನಿರೀಕ್ಷೆ ಹೆಚ್ಚಿದೆ.

More from Filmibeat

English summary
Tamil actor Vijay starrer Master movie might not release on the occasion of pongal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X