twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನಲ್ಲಿ 3ನೇ ದಿನಕ್ಕೆ 436 ಶೋಗಳನ್ನು ಕಳೆದುಕೊಂಡ ವಾರಿಸು; ಉಳಿದ ಚಿತ್ರಗಳಿಗೆ ಸಿಕ್ಕ ಶೋ ಎಷ್ಟು?

    |

    ಸಂಕ್ರಾಂತಿ ಪ್ರಯುಕ್ತ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿರುವ ಚಿತ್ರಗಳ ನಡುವಿನ ಬಾಕ್ಸ್ ಆಫೀಸ್ ರೇಸ್ ಜೋರಾಗಿದೆ. ಅದರಲ್ಲಿಯೂ ತಮಿಳಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಚಿತ್ರಗಳು ಒಂದೇ ದಿನ ಬಿಡುಗಡೆಗೊಂಡು ಜಿದ್ದಾಜಿದ್ದಿಗೆ ಬಿದ್ದಿದ್ದವು. ಅದರಲ್ಲಿಯೂ ಬೆಂಗಳೂರಿನಲ್ಲಿ ಈ ಇಬ್ಬರ ಚಿತ್ರಗಳಿಗೂ ದೊಡ್ಡ ಮಾರುಕಟ್ಟೆ ಇರುವ ಕಾರಣ ಬಿಡುಗಡೆ ದಿನ ಎರಡೂ ಚಿತ್ರಗಳೂ ಸಹ ದೊಡ್ಡ ಸಂಖ್ಯೆಯಲ್ಲಿಯೇ ಸಿಲಿಕಾನ್ ಸಿಟಿಯಲ್ಲಿ ಶೋಗಳನ್ನು ಗಿಟ್ಟಿಸಿಕೊಂಡಿದ್ದವು.

    ಆದರೆ ನಿನ್ನೆ ( ಜನವರಿ 12 ) ನಂದಮೂರಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಚಿತ್ರ ಬಿಡುಗಡೆಗೊಂಡ ಕಾರಣ ವಾರಿಸು ಹಾಗೂ ತುನಿವು ಚಿತ್ರಗಳು ಎರಡನೇ ದಿನಕ್ಕೆ ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳನ್ನು ಕಳೆದುಕೊಂಡವು. ಅದರಲ್ಲಿಯೂ ವಿಜಯ್ ನಟನೆಯ ವಾರಿಸು ಚಿತ್ರ ದೊಡ್ಡ ಸಂಖ್ಯೆಯಲ್ಲಿಯೇ ಪ್ರದರ್ಶನಗಳನ್ನು ಕಳೆದುಕೊಂಡು ಹಿನ್ನಡೆಯನ್ನು ಅನುಭವಿಸಿತ್ತು.

    ವಿಜಯ್ vs ಅಜಿತ್ 7ನೇ ಬಾರಿಗೆ ಸಂಕ್ರಾಂತಿ ರೇಸ್: ಕಳೆದ 6 ಬಾರಿ ಗೆದ್ದವರಾರು, ಬಿದ್ದವರಾರು? ವಿಜಯ್ vs ಅಜಿತ್ 7ನೇ ಬಾರಿಗೆ ಸಂಕ್ರಾಂತಿ ರೇಸ್: ಕಳೆದ 6 ಬಾರಿ ಗೆದ್ದವರಾರು, ಬಿದ್ದವರಾರು?

    ಹೀಗೆ ಎರಡನೇ ದಿನ ಹಿನ್ನಡೆ ಅನುಭವಿಸಿದ್ದ ವಾರಿಸು ಚಿತ್ರ ಇಂದು ( ಜನವರಿ 13 ) ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಗೊಂಡ ಕಾರಣ ಬೆಂಗಳೂರಿನಲ್ಲಿ ಮತ್ತಷ್ಟು ಪ್ರದರ್ಶನಗಳನ್ನು ಕಳೆದುಕೊಂಡಿದೆ. ಮೊದಲ ದಿನ ಬೆಂಗಳೂರಿನಲ್ಲಿ ಬರೋಬ್ಬರಿ 757 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ವಾರಿಸು ಚಿತ್ರ ಮೂರನೇ ದಿನದಂದು 300ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ಪಡೆದುಕೊಂಡಿದ್ದು, 436 ಪ್ರದರ್ಶನಗಳನ್ನು ಕಳೆದುಕೊಂಡಿದೆ. ಇಂದು ( ಜನವರಿ 13 ) ಬೆಂಗಳೂರಿನಲ್ಲಿ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ..

    ಕುಸಿತ ಕಂಡ ವಾರಿಸು

    ಕುಸಿತ ಕಂಡ ವಾರಿಸು

    ಇನ್ನು ಜನವರಿ 11ರಂದು ಬಿಡುಗಡೆಯ ದಿನ ಬೆಂಗಳೂರಿನಲ್ಲಿ 757 ಶೋಗಳನ್ನು ಪಡೆದುಕೊಂಡಿದ್ದ ವಾರಿಸು ಎರಡನೇ ದಿನ 466 ಪ್ರದರ್ಶನಗಳನ್ನು ಕಂಡಿತ್ತು. ಹೀಗೆ ಎರಡನೇ ದಿನವೇ ಹಿನ್ನಡೆ ಅನುಭವಿಸಿದ್ದ ವಾರಿಸು ಮೂರನೇ ದಿನ ಬೆಂಗಳೂರಿನಲ್ಲಿ 321 ಪ್ರದರ್ಶನಗಳನ್ನು ಕಂಡಿದೆ. ಈ ಮೂಲಕ ಮೊದಲ ದಿನಕ್ಕೆ ಹೋಲಿಸಿದರೆ ಮೂರನೇ ದಿನಕ್ಕೆ ವಾರಿಸು 436 ಪ್ರದರ್ಶನಗಳನ್ನು ಕಳೆದುಕೊಂಡಿದೆ. ಬಿಡುಗಡೆಯ ದಿನಕ್ಕಿಂತ ನಂತರದ ದಿನಗಳಲ್ಲಿ ಚಿತ್ರಗಳು ಪ್ರದರ್ಶನಗಳನ್ನು ಕಳೆದುಕೊಳ್ಳುವುದು ಕಾಮನ್, ಆದರೆ ವಾರಿಸು ನಿರೀಕ್ಷೆಗೂ ಮೀರಿ ಕುಸಿತ ಅನುಭವಿಸಿದೆ.

    ತುನಿವು ಕಳೆದುಕೊಂಡ ಶೋಗಳೆಷ್ಟು?

    ತುನಿವು ಕಳೆದುಕೊಂಡ ಶೋಗಳೆಷ್ಟು?

    ವಾರಿಸು ಮಾತ್ರವಲ್ಲದೇ ತುನಿವು ಚಿತ್ರ ಸಹ ಪ್ರದರ್ಶನಗಳನ್ನು ಕಳೆದುಕೊಂಡಿದೆ. ಮೊದಲ ದಿನ ಬೆಂಗಳೂರಿನಲ್ಲಿ 568 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ತುನಿವು ಎರಡನೇ ದಿನ 397 ಪ್ರದರ್ಶನ ಕಂಡಿತ್ತು. ಮೂರನೇ ದಿನ 300 ಶೋಗಳನ್ನು ಚಿತ್ರ ಪಡೆದುಕೊಂಡಿರುವ ತುನಿವು ಮೊದಲ ದಿನಕ್ಕೆ ಹೋಲಿಸಿದರೆ 268 ಪ್ರದರ್ಶನಗಳನ್ನು ಕಳೆದುಕೊಂಡಿದೆ. ಇನ್ನು ವಾರಿಸುಗೆ ಹೋಲಿಸಿದರೆ ತುನಿವು ದೊಡ್ಡ ಸಂಖ್ಯೆಯಲ್ಲಿ ಪ್ರದರ್ಶನಗಳನ್ನು ಕಳೆದಕೊಂಡಿಲ್ಲ ಹಾಗೂ ಉಳಿಸಿಕೊಂಡಿಲ್ಲ.

    ಜನವರಿ 13ರಂದು ಯಾವ ಚಿತ್ರಗಳಿಗೆ ಎಷ್ಟು ಪ್ರದರ್ಶನ?

    ಜನವರಿ 13ರಂದು ಯಾವ ಚಿತ್ರಗಳಿಗೆ ಎಷ್ಟು ಪ್ರದರ್ಶನ?

    ಹಾಗಿದ್ದರೆ ಜನವರಿ 13ರಂದು ಬೆಂಗಳೂರಿನಲ್ಲಿ ಯಾವ ಚಿತ್ರಗಳು ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿವೆ ಎಂಬ ಟಾಪ್ 4 ಪಟ್ಟಿ ಇಲ್ಲಿದೆ..

    ವಾಲ್ತೇರು ವೀರಯ್ಯ - 337 ಪ್ರದರ್ಶನಗಳು

    ವಾರಿಸು - 321 ಪ್ರದರ್ಶನಗಳು

    ತುನಿವು - 300 ಪ್ರದರ್ಶನಗಳು

    ವೀರಸಿಂಹ ರೆಡ್ಡಿ - 240 ಪ್ರದರ್ಶನಗಳು

    ವೀರಸಿಂಹ ರೆಡ್ಡಿಗೂ ಭಾರೀ ಹಿನ್ನಡೆ

    ವೀರಸಿಂಹ ರೆಡ್ಡಿಗೂ ಭಾರೀ ಹಿನ್ನಡೆ

    ನಿನ್ನೆ ( ಜನವರಿ 12 ) ಬಿಡುಗಡೆ ದಿನ ವಾರಿಸು ಹಾಗೂ ತುನಿವುಗಿಂತ ಹೆಚ್ಚು ಪ್ರದರ್ಶನಗಳನ್ನು ಪಡೆದುಕೊಂಡಿದ್ದ ವೀರಸಿಂಹ ರೆಡ್ಡಿ ಎರಡನೇ ದಿನವಾದ ಇಂದು ( ಜನವರಿ 13 ) ಹಿನ್ನಡೆ ಅನುಭವಿಸಿದೆ. ನಿನ್ನೆ 406 ಪ್ರದರ್ಶನಗಳನ್ನು ಪಡೆದುಕೊಂಡಿದ್ದ ವೀರಸಿಂಹ ರೆಡ್ಡಿ ಇಂದು 240 ಪ್ರದರ್ಶನಗಳನ್ನು ಪಡೆದಿದೆ. ಈ ಮೂಲಕ ವೀರಸಿಂಹ ರೆಡ್ಡಿ 166 ಪ್ರದರ್ಶನಗಳನ್ನು ಪಡೆದುಕೊಂಡು ಹಿನ್ನಡೆ ಅನುಭವಿಸಲಿದೆ. ಒಟ್ಟಿನಲ್ಲಿ ಹೊಸ ಚಿತ್ರಗಳು ಬಂದ ಕಾರಣ ಹಳೆ ಚಿತ್ರಗಳು ಪ್ರದರ್ಶನಗಳನ್ನು ಕಳೆದುಕೊಂಡಿದ್ದು ಯಾವ ಚಿತ್ರಗಳಿಗೆ ಬುಕಿಂಗ್ ಚೆನ್ನಾಗಿದೆಯೋ ಆ ಚಿತ್ರಗಳು ನಾಳೆಯಿಂದ ಹೆಚ್ಚು ಪ್ರದರ್ಶನಗಳನ್ನು ಕಾಣಲಿವೆ. ಹೀಗಾಗಿ ಯಾವ ಚಿತ್ರಗಳ ಹಣೆಬರಹ ಏನೆಂಬುದು ನಾಳೆಯಿಂದ ತಿಳಿಯಲಿದೆ.

    English summary
    Vijay starrer Varisu lost 436 shows on 3rd day in Bangalore; Thunivu doing better than Varisu. Take a look
    Friday, January 13, 2023, 12:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X