For Quick Alerts
  ALLOW NOTIFICATIONS  
  For Daily Alerts

  'ನನ್ನ ಮಗ ವಾಪಸ್ ಬರ್ತಾರೆ': ವಿಜಯ್ ತಂದೆ ಚಂದ್ರಶೇಖರ್ ನಂಬಿಕೆ

  |

  ತಮಿಳು ನಟ ವಿಜಯ್ ಅವರ ತಂದೆ ಎಸ್‌ಎ ಚಂದ್ರಶೇಖರ್ ರಾಜಕೀಯ ಪಕ್ಷ ಘೋಷಣೆ ಆದ ಬಳಿಕ ವೈಯಕ್ತಿಕವಾಗಿ ಕೆಲವು ಬೆಳವಣಿಗೆಗಳು ನಡೆದಿದೆ. ವಿಜಯ್ ಅವರು ತಮ್ಮ ತಂದೆಯ ಜೊತೆ ಮಾತನಾಡುವುದನ್ನು ಬಿಟ್ಟಿದ್ದಾರೆ ಎಂದು ಅವರ ತಾಯಿ ಹೇಳಿಕೊಂಡಿದ್ದಾರೆ.

  ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್ ''ವಿಜಯ್ ನನ್ನ ಬಳಿ ವಾಪಸ್ ಬರ್ತಾರೆ'' ಎಂದು ನಂಬಿಕೆ ವ್ಯಕ್ತಪಡಿಸಿದ್ದಾರೆ. 'ವಿಜಯ್ ಯಾವಾಗಲೂ ಸಾಮಾಜಿಕ ಕಾರ್ಯಕರ್ತರಾಗಿದ್ದು, ಸಮಸ್ಯೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ'' ಎಂದು ವಿಜಯ್ ತಂದೆ ತಿಳಿಸಿದ್ದಾರೆ.

  ರಾಜಕೀಯ ಪಕ್ಷ ಘೋಷಿಸಿದ ನಂತರ ತಂದೆ ಜೊತೆ ಮಾತು ಬಿಟ್ಟ ನಟ ವಿಜಯ್

  ಎಸ್‌ಎ ಚಂದ್ರಶೇಖರ್ ಅವರು ವಿಜಯ್ ಅಭಿಮಾನಿ ಸಂಘದ ಹೆಸರಿನಲ್ಲಿ ರಾಜಕೀಯ ಪಕ್ಷ ಘೋಷಿಸಿದ್ದಾರೆ. ತಮ್ಮ ತಂದೆ ರಾಜಕೀಯ ಪಕ್ಷ ಘೋಷಿಸಿದ ಕೆಲವು ಗಂಟೆಗಳಲ್ಲಿ ವಿಜಯ್ ಆ ಪಕ್ಷದಲ್ಲಿ ತಮ್ಮ ಪಾತ್ರವಿಲ್ಲ ಎಂದು ನಿರಾಕರಿಸಿದ್ದರು. ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಸಹ ಮಾಡಿದ್ದರು.

  'ನಮ್ಮ ತಂದೆ ಚಂದ್ರಶೇಖರನ್ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ ಎಂಬುದು ಮಾಧ್ಯಮಗಳ ಮೂಲಕ ಗೊತ್ತಾಗಿದೆ. ನಾನು ನನ್ನ ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಕ್ಷಮೆ ಕೋರುತ್ತೇನೆ. ಅವರು ರಾಜಕೀಯ ಪಕ್ಷ ಸ್ಥಾಪಿಸಿರುವ ಹಿಂದೆ ನನ್ನ ನೇರ ಅಥವಾ ಪರೋಕ್ಷ ಭಾಗವಹಿಸುವಿಕೆ ಇಲ್ಲ. ಅವರ ರಾಜಕೀಯ ನಿರ್ಧಾರಗಳ ಹಿಂದೆ ನನ್ನ ಹಸ್ತಕ್ಷೇಪ ಇರುವುದಿಲ್ಲ.

  Vijay Deverakonda ತಮ್ಮನಿಗೋಸ್ಕರ ಸಾಲು ಸಾಲು ಟ್ವೀಟ್ ಮಾಡಿದ Rashmika | Filmibeat Kannada

  ಅಷ್ಟೇ ಅಲ್ಲದೆ, ಅವರು ಸ್ಥಾಪಿಸಿರುವುದು ನನ್ನ ಪಕ್ಷ ಅಥವಾ ವಿಜಯ್ ತಂದೆ ಸ್ಥಾಪಿಸಿದ ಪಕ್ಷ ಎಂಬ ಕಾರಣಕ್ಕೆ ಆ ಪಕ್ಷಕ್ಕೆ ನನ್ನ ಅಭಿಮಾನಿಗಳು ಸೇವೆ ಮಾಡುವುದಾಗಲಿ, ಸೇರ್ಪಡೆಗೊಳ್ಳುವುದಾಗಲಿ ಮಾಡಬೇಡಿ' ಎಂದು ಮನವಿ ಮಾಡಿದ್ದರು.

  English summary
  'Vijay will come back to me' said his father SA Chandrasekhar. earlier Chandrasekhar announced new Political party in the Name of Vijay fans club.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X