For Quick Alerts
  ALLOW NOTIFICATIONS  
  For Daily Alerts

  ಕಮಲ್ ಹಾಸನ್ ಬರೆದಿರುವ ಕತೆಗೆ ಇಬ್ಬರು ಸ್ಟಾರ್ ನಾಯಕ ನಟರು

  |

  ತಮಿಳಿನ ಸ್ಟಾರ್ ನಟ ಕಮಲ್ ಹಾಸನ್‌ ಅವರದ್ದು ಅಸಾಮಾನ್ಯ ಪ್ರತಿಭೆ. ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ಕಮಲ್ ಹಾಸನ್ ಅಷ್ಟೇ ಒಳ್ಳೆ ನೃತ್ಯಪಟು, ಹಾಡುಗಾರ, ನಿರ್ದೇಶಕ, ಕವಿ ಹಾಗೂ ಕತೆಗಾರರು ಸಹ.

  ಈ ಹಿಂದೆ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶಿಸಿರುವ ಕಮಲ್ ಹಾಸನ್ ಇದೀಗ ಸಿನಿಮಾ ಒಂದಕ್ಕೆ ಚಿತ್ರಕತೆ ಬರೆಯುತ್ತಿದ್ದು, ಸಿನಿಮಾದಲ್ಲಿ ಇಬ್ಬರು ಸ್ಟಾರ್ ನಟರು ಮುಖ್ಯ ಪಾತ್ರಗಳಲ್ಲಿ ನಟಿಸಲಿದ್ದಾರೆ.

  ಕಮಲ್ ಹಾಸನ್‌ಗೆ ಕತೆ, ಚಿತ್ರಕತೆ ಬರೆಯುವುದು ಹೊಸದೇನೂ ಅಲ್ಲ. ಈವರೆಗೆ ಸುಮಾರು 35 ಸಿನಿಮಾಗಳಿಗೆ ಕತೆ, ಚಿತ್ರಕತೆ, ಸಹ ಕತೆಗಾರನಾಗಿ ಕೆಲಸ ಮಾಡಿದ್ದಾರೆ. ಐದು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅದರಲ್ಲಿ 'ಹೇ ರಾಮ್', 'ವೀರುಮಾಂಡಿ' ಸಿನಿಮಾಗಳು ಹಲವು ಪ್ರಶಸ್ತಿಗಳಿಗೆ ಭಾಜನವಾಗಿವೆ. ಹಲವು ಸಿನಿಮಾಗಳನ್ನು ತಮ್ಮ ರಾಜ್ ಕಮಲ್ ಫಿಲಮ್ಸ್ ಇಂಟರ್ನ್ಯಾಷನಲ್ ಸಂಸ್ಥೆಯಿಂದ ನಿರ್ಮಾಣ ಸಹ ಮಾಡಿದ್ದಾರೆ.

  ಇದೀಗ ಕಮಲ್ ಹಾಸನ್ ಬರೆಯುತ್ತಿರುವ ಕತೆಯೊಂದು ಸಿನಿಮಾ ಆಗಲಿದ್ದು, ಸಿನಿಮಾದಲ್ಲಿ ಸ್ಟಾರ್ ನಟರಾದ ವಿಕ್ರಂ ಹಾಗೂ ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಈ ಸಿನಿಮಾವನ್ನು ಪ್ರತಿಭಾವಂತ ನಿರ್ದೇಶಕ ಮಹೇಶ್ ನಾರಾಯಣ್ ನಿರ್ದೇಶನ ಮಾಡಲಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡುತ್ತಿರುವುದು ಸಹ ಕಮಲ್ ಹಾಸನ್ ಅವರೇ.

  ವಿಕ್ರಂ-ವಿಜಯ್ ಸೇತುಪತಿ ಒಟ್ಟಿಗೆ ನಟನೆ

  ವಿಕ್ರಂ-ವಿಜಯ್ ಸೇತುಪತಿ ಒಟ್ಟಿಗೆ ನಟನೆ

  ವಿಕ್ರಂ ಹಾಗೂ ವಿಜಯ್ ಸೇತುಪತಿ ನಟಿಸುತ್ತಿರುವ ಸಿನಿಮಾದಲ್ಲಿ ನಾಯಕನಾಗಿ ವಿಕ್ರಂ ಹಾಗೂ ವಿಲನ್ ಆಗಿ ವಿಜಯ್ ಸೇತುಪತಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾಗಳಲ್ಲಿ ಇಬ್ಬರ ಪಾತ್ರಗಳಿಗೂ ಸಮಾನ ಅವಕಾಶ ಇರಲಿದೆ. ವಿಕ್ರಂ ಈಗಾಗಲೇ 'ಕದರಾಮ್ ಕೊಂಡೆಮ್' ಸಿನಿಮಾದಲ್ಲಿ ನಟಿಸಿದ್ದಾರೆ ಆದರೆ ವಿಜಯ್ ಸೇತುಪತಿಗೆ ಇದೇ ಮೊದಲ ಸಿನಿಮಾ.

  ಮಹೇಶ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ

  ಮಹೇಶ್ ನಾರಾಯಣ್ ನಿರ್ದೇಶಿಸುತ್ತಿದ್ದಾರೆ

  ಕಮಲ್ ಹಾಸನ್ ಬರೆಯುತ್ತಿರುವ ಕತೆಯನ್ನು ಮಹೇಶ್ ನಾರಾಯಣ್ ನಿರ್ದೇಶನ ಮಾಡಲಿದ್ದಾರೆ. ಸಂಕಲನಕಾರಿ ವೃತ್ತಿ ಆರಂಭಿಸಿದ ಮಹೇಶ್ ನಾರಾಯಣ್ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಮಲಯಾಳಂನ 'ಟೇಕ್‌ ಆಫ್' ಅವರ ನಿರ್ದೇಶನದ ಮೊದಲ ಸಿನಿಮಾ. ನಂತರ ಫಹಾದ್ ಫಾಸಿಲ್ ನಟನೆಯ 'ಸಿ ಯು ಸೂನ್', 'ಮಲಿಕ್' ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಪ್ರಸ್ತುತ ಮಲಯಾಳಂನ 'ಅರಿಯಿಪ್ಪು' ಹಾಗೂ ಹಿಂದಿಯ 'ಪ್ಯಾಂಟಮ್ ಹಾಸ್ಪಿಟಲ್' ನಿರ್ದೇಶನ ಮಾಡುತ್ತಿದ್ದಾರೆ.

  'ವಿಕ್ರಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ

  'ವಿಕ್ರಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ

  ಇನ್ನು ನಟ ಕಮಲ್ ಹಾಸನ್ ಪ್ರಸ್ತುತ 'ವಿಕ್ರಂ' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ಹಾಸನ್ ಜೊತೆಗೆ ಮಲಯಾಳಂನ ಸ್ಟಾರ್ ನಟ ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಲೋಕೇಶ್ ಕನಕರಾಜನ್ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಲುಕ್ ಹಾಗೂ ಮೋಷನ್ ಪೋಸ್ಟರ್ ಸಖತ್ ವೈರಲ್ ಆಗಿದೆ. ಸಿನಿಮಾದಲ್ಲಿ ಡಾನ್ ಪಾತ್ರದಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ.

  ಕಮಲ್ ಹಾಸನ್ ಮುಂಬರುವ ಸಿನಿಮಾಗಳು

  ಕಮಲ್ ಹಾಸನ್ ಮುಂಬರುವ ಸಿನಿಮಾಗಳು

  'ವಿಕ್ರಂ' ಸಿನಿಮಾ ಹೊರತುಪಡಿಸಿ ಕಮಲ್ ಹಾಸನ್ 'ಇಂಡಿಯನ್ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ಶಂಕರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾವು 1996 ರಲ್ಲಿ ಬಿಡುಗಡೆ ಆಗಿದ್ದ 'ಇಂಡಿಯನ್' ಸಿನಿಮಾದ ಮುಂದುವರೆದ ಭಾಗವಾಗಿರಲಿದೆ. ಇದರ ಹೊರತಾಗಿ 'ದೃಶ್ಯಂ 2' ಸಿನಿಮಾದ ರೀಮೇಕ್ 'ಪಾಪನಾಶಂ 2' ಸಿನಿಮಾದಲ್ಲಿ ಕಮಲ್ ನಟಿಸಲಿದ್ದಾರೆ. 'ತೇವರ್ ಮಗನ್ 2' ಸಿನಿಮಾದಲ್ಲಿಯೂ ಕಮಲ್ ನಟಿಸಲಿದ್ದಾರೆ. ಇದರ ಹೊರತಾಗಿ ತಾವೇ ಹೊಸ ಸಿನಿಮಾ ಒಂದನ್ನು ನಿರ್ದೇಶಿಸುವ ಯೋಜನೆಯನ್ನು ಕಮಲ್ ಹಾಸನ್ ಹಾಕಿಕೊಂಡಿದ್ದಾರೆ, ಸಿನಿಮಾದ ಹೆಸರು 'ತಲೈವಾನ್ ಇರುಕ್ಕಿಂಡ್ರಾನ್'.

  English summary
  Vijay Sethupathi and Vikram acting in lead roles in a movie which story written by Kamal Haasan directing my Mahesh Narayan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X