For Quick Alerts
  ALLOW NOTIFICATIONS  
  For Daily Alerts

  ಕೆಜಿಎಫ್ ಬೆನ್ನಲ್ಲೆ ಶ್ರೀನಿಧಿ ಶೆಟ್ಟಿ ಹೊಸ ಚಿತ್ರದ ಟೀಸರ್ ಬಿಡುಗಡೆ

  |

  ರಾಕಿಂಗ್ ಸ್ಟಾರ್ ಯಶ್ ಜೊತೆ ಶ್ರೀನಿಧಿ ಶೆಟ್ಟಿ ನಟಿಸಿರುವ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಯೂನಿರ್ವಸಲ್ ವಿಧಾನದಲ್ಲಿ ಕೆಜಿಎಫ್ ಟೀಸರ್ ರಿಲೀಸ್ ಆಗಿದ್ದು, ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಈ ಟೀಸರ್‌ನಲ್ಲಿ ಶ್ರೀನಿಧಿ ಶೆಟ್ಟಿಯ ಲುಕ್ ಸಹ ಅನಾವರಣಗೊಂಡಿದ್ದು, ಕುತೂಹಲ ಮೂಡಿದೆ.

  KGF 2 ನಂತರ ಬಿಡುಗಡೆಯಾಯ್ತು ಶ್ರೀನಿಧಿ ಶೆಟ್ಟಿ ಮತ್ತೊಂದು ಟೀಸರ್ | Filmibeat Kannada

  ಕೆಜಿಎಫ್ ಗುಂಗಿನಲ್ಲಿರುವಾಗಲೇ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿರುವ ಇನ್ನೊಂದು ಚಿತ್ರ ಟೀಸರ್ ರಿಲೀಸ್ ಆಗಿದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಹಲವು ಸರ್ಪ್ರೈಸ್‌ಗಳಿವೆ. ಅಷ್ಟಕ್ಕೂ, ಶ್ರೀನಿಧಿ ಶೆಟ್ಟಿ ನಟಿಸಿರುವ ಹೊಸ ಸಿನಿಮಾ ಯಾವುದು? ಮುಂದೆ ಓದಿ....

  ಕೆಜಿಎಫ್-2ಗೋಸ್ಕರ ಏಳು ಚಿತ್ರಗಳನ್ನು ಬೇಡ ಎಂದು ಕೈಬಿಟ್ಟರಂತೆ ಶ್ರೀನಿಧಿ ಶೆಟ್ಟಿ

  ಕೋಬ್ರಾ ಟೀಸರ್ ಬಿಡುಗಡೆ

  ಕೋಬ್ರಾ ಟೀಸರ್ ಬಿಡುಗಡೆ

  ತಮಿಳು ನಟ ವಿಕ್ರಂ ನಟನೆಯ ಕೋಬ್ರಾ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಕೋಬ್ರಾ ಚಿತ್ರದಲ್ಲಿ ಕೆಜಿಎಫ್ ನಾಯಕಿ ಶ್ರೀನಿಧಿ ಶೆಟ್ಟಿ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದಾರೆ. ಅಜಯ್ ಜ್ಞಾನಮುತ್ತು ಈ ಚಿತ್ರ ನಿರ್ದೇಶಿಸಿದ್ದು, ಎಆರ್ ರೆಹಮಾನ್ ಸಂಗೀತ ಒದಗಿಸಿದ್ದಾರೆ.

  ಕ್ಲಾಸ್ ಲುಕ್‌ನಲ್ಲಿ ಶ್ರೀನಿಧಿ ಶೆಟ್ಟಿ

  ಕ್ಲಾಸ್ ಲುಕ್‌ನಲ್ಲಿ ಶ್ರೀನಿಧಿ ಶೆಟ್ಟಿ

  ಕೆಜಿಎಫ್ ಸಿನಿಮಾದಲ್ಲಿ ರಗಡ್ ಆಗಿ ಕಾಣಿಸಿಕೊಂಡಿದ್ದ ಶ್ರೀನಿಧಿ ಶೆಟ್ಟಿ ಕೋಬ್ರಾ ಸಿನಿಮಾದಲ್ಲಿ ಕ್ಲಾಸ್ ಆಗಿ ನಟಿಸಿದ್ದಾರೆ. ಸಿಂಪಲ್ ಆಗಿ ಸಂಪ್ರದಾಯಸ್ಥ ಹುಡುಗಿಯಾಗಿ ಅಭಿನಯಿಸಿದ್ದಾರೆ. ಕೆಜಿಎಫ್ ಪಾತ್ರಕ್ಕೂ ಕೋಬ್ರಾ ಸಿನಿಮಾದ ಪಾತ್ರಕ್ಕೂ ಅಜಗಜಾಂತರ ವ್ಯತ್ಯಾಸ ಕಂಡು ಬರುತ್ತಿದೆ.

  'KGF' ನಾಯಕಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥದ ಫೋಟೋಗಳು ವೈರಲ್!

  ಕ್ರಿಕೆಟರ್ ಇರ್ಫಾನ್ ಪಠಾಣ್

  ಕ್ರಿಕೆಟರ್ ಇರ್ಫಾನ್ ಪಠಾಣ್

  ಸರ್ಪ್ರೈಸ್ ಎಂಬಂತೆ ಕೋಬ್ರಾ ಚಿತ್ರದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪೊಲೀಸ್ ಆಫೀಸರ್ ಪಾತ್ರದಲ್ಲಿ ಪಠಾಣ್ ಕಾಣಿಸಿಕೊಂಡಿದ್ದು, ಕುತೂಹಲ ಹೆಚ್ಚಿಸಿದೆ.

  ಪಠಾಣ್ ಮೊದಲ ಚಿತ್ರ, ಶ್ರೀನಿಧಿ ಮೂರನೇ ಚಿತ್ರ

  ಪಠಾಣ್ ಮೊದಲ ಚಿತ್ರ, ಶ್ರೀನಿಧಿ ಮೂರನೇ ಚಿತ್ರ

  ಬಹುಮುಖ ಪ್ರತಿಭೆ ವಿಕ್ರಂ ಈ ಚಿತ್ರದಲ್ಲಿ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಪಠಾಣ್ ಅವರ ಚೊಚ್ಚಲ ಸಿನಿಮಾ ಇದು. ಕೆಜಿಎಫ್ ಬಳಿಕ ಶ್ರೀನಿಧಿ ಶೆಟ್ಟಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಸೋನಿ ಪಿಕ್ಚರ್ಸ್ ಈ ಚಿತ್ರ ನಿರ್ಮಿಸಿದ್ದು ಬಿಡುಗಡೆಗೆ ಬಗ್ಗೆ ಮಾಹಿತಿ ನೀಡಿಲ್ಲ.

  English summary
  Tamil actor Vikram and KGF actress Srinidhi shetty starrer Cobra movie teaser released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X