Just In
Don't Miss!
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- News
ಪೆಟ್ರೋಲ್ ಪಂಪ್ಗಳಿಂದ ಪ್ರಧಾನಿ ಮೋದಿ ಫೋಟೊ ತೆರವಿಗೆ ಚುನಾವಣಾ ಆಯೋಗ ಸೂಚನೆ
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಜೆ ಚಿತ್ರಾ ಸಾವು: ಪತಿ ಹೇಮಂತ್‌ಗೆ ಜಾಮೀನು ನೀಡಿದ ಮದ್ರಾಸ್ ಹೈ ಕೋರ್ಟ್
ಕಿರುತೆರೆ ನಟಿ ಹಾಗೂ ವಿಜೆ ಚಿತ್ರಾ ಅವರ ಸಾವಿನ ಪ್ರಕರಣದಲ್ಲಿ ಬಂಧನವಾಗಿದ್ದ ಪತಿ ಹೇಮಂತ್‌ಗೆ ಮದ್ರಾಸ್ ಹೈ ಕೋರ್ಟ್ ಸೋಮವಾರ (ಫೆಬ್ರವರಿ 15) ಜಾಮೀನು ಮಂಜೂರು ಮಾಡಿದೆ.
ಮುಂದಿನ ಆದೇಶದವರೆಗೂ ಮದುರೈ ಬಿಟ್ಟು ಹೊರಗೆ ಹೋಗದಂತೆ ಷರತ್ತು ವಿಧಿಸಿ ವಿಜೆ ಚಿತ್ರಾ ಅವರ ಪತಿ ಹೇಮಂತ್‌ಗೆ ನ್ಯಾಯಮೂರ್ತಿ ಭಾರತಿದಾಸನ್ ಜಾಮೀನು ನೀಡಿದ್ದಾರೆ.
ನಟಿ ವಿಜೆ ಚಿತ್ರಾ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್
ಕಳೆದ 60 ದಿನಗಳಿಂದ ಹೇಮಂತ್ ನ್ಯಾಯಾಂಗ ಬಂಧನಲ್ಲಿದ್ದರು. ವಿಜೆ ಚಿತ್ರಾ ಅವರ ಸಾವಿನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಹೇಮಂತ್ ಅವರನ್ನು ಡಿಸೆಂಬರ್ 15 ರಂದು ಬಂಧಿಸಲಾಗಿತ್ತು.
ದಿವಂಗತ ನಟಿ ಚಿತ್ರಾ ಅವರಿಗೆ ಬೆದರಿಸಿದ ಆರೋಪದಲ್ಲಿ ಐಪಿಸಿ ಸೆಕ್ಷನ್ 306 ಅಡಿ ಕೇಸ್ ದಾಖಲಿಸಲಾಗಿತ್ತು. ನಟನೆಯನ್ನು ಬಿಟ್ಟುಬಿಡು ಎಂದು ಹೇಮಂತ್ ತನ್ನ ಪತ್ನಿಗೆ ಧಮ್ಕಿ ಹಾಕಿದ್ದರು ಎಂದು ಚಿತ್ರಾ ತಾಯಿ ದೂರಿದ್ದರು.
ತನಿಖೆ ವೇಳೆ ಹೇಮಂತ್ ಮತ್ತು ಚಿತ್ರಾ ರಹಸ್ಯವಾಗಿ ಮದುವೆಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. 2020ರ ಅಕ್ಟೋಬರ್ ತಿಂಗಳಲ್ಲಿ ವಿವಾಹವಾಗಿದ್ದ ಈ ಜೋಡಿ ಫೆಬ್ರವರಿ 2021ರಲ್ಲಿ ಸಾರ್ವಜನಿಕವಾಗಿ ಘೋಷಿಸಿಕೊಳ್ಳಲು ತಯಾರಿ ನಡೆಸಿದ್ದರು. ಆದರೆ, ಅಷ್ಟರಲ್ಲೇ ಚಿತ್ರಾ ಸಾವನ್ನಪ್ಪಿದ್ದರು.
ಡಿಸೆಂಬರ್ 9 ರಂದು ತಾವು ತಂಗಿದ್ದ ಚೆನ್ನೈನ ಹೋಟೆಲ್‌ವೊಂದರಲ್ಲಿ ಚಿತ್ರಾ ನೇಣಿಗೆ ಶರಣಾಗಿದ್ದರು.